ದೇಶದ ಅಭಿವೃದ್ಧಿಗೆ ನೆಹರು ಕೊಡುಗೆ ಅಪಾರ: ಪುಣ್ಯಸ್ಮರಣೆಯಲ್ಲಿ ಕಾಂಗ್ರೆಸ್ ನಾಯಕರ ನಮನ.

ಚಿತ್ರದುರ್ಗ ಮೇ. 27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಭಾರತ ದೇಶವನ್ನು ಬ್ರಟಿಷರ ದಾಸ್ಯದಿಂದ ಮುಕ್ತ ಮಾಡಬೇಕೆಂದು ಗಾಂಧಿಜೀಯವರ ಜೊತೆಯಲ್ಲಿ ಹೋರಾಟವನ್ನು ನಡೆಸಿದ ಜವಹರಲಾಲ್ ನೆಹರುರವರು ಹೋರಾಟದಿಂದ ಜೈಲಿಗೆ ಹೋದಾಗ ಬ್ರಟಿಷರ ಮುಂದೆ ತಲೆಯನ್ನು ತಗ್ಗಿಸದೆ ತಲೆಯನ್ನು ಎತ್ತಿ ನಡೆಯವುದರ ಮೂಲಕ ನನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಗೋಗರೆಯಲಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್À ಪಕ್ಷದ ಅಧ್ಯಕ್ಷರಾದ ಎಂ.ಕೆ.ತಾಜ್ ಪೀರ್ ತಿಳಿಸಿದರು.

ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ದೇಶದ ಮಾಜಿ ಪ್ರಧಾನ ಮಂತ್ರಿ ಜವಹರಲಾಲ್ ನೆಹರು ರವರ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಹುಟ್ಟಿನಿಂದ ಶ್ರೀಮಂತರಾಗಿ ಹೂರ ದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು ಸಹಾ ಯಾವುದೇ ಆಹಂಕಾರ ಇಲ್ಲದೆ ನಮ್ಮ ದೇಶಕ್ಕೆ ಬಂದ ಮೇಲೆ ದೇಶವನ್ನು ಬ್ರಟಿಷರ ದಾಸ್ಯದಿಂದ ಮುಕ್ತ ಮಾಡಬೇಕೆಂದು ಗಾಂಧಿಜಿಯವರೊಂದಿಗೆ ಸೇರಿಕೊಂಡು ಹೋರಾಟವನ್ನು ಪ್ರಾರಂಭ ಮಾಡಿದರು. ಈ ಸಮಯದಲ್ಲಿ ಬ್ರಟಿಷರ್ ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಿದಾಗ ಇದನ್ನು ಇವರು ಎದುರಿಸಿ ಅವರ ಮುಂದೆ ತಲೆಯನ್ನು ತಗ್ಗಿಸದೆ ತಲೆಯನ್ನು ಎತ್ತಿ ನಡೆಯುವುದರ ಮೂಲಕ ಬ್ರಟಿಷರಿಗೆ ದಂಗು ಬಡಿಸಿದ್ದರು. ದೇಶದ ಪ್ರಥಮ ಪ್ರಧಾನ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕಾರ ಮಾಡಿದಾಗ ದೇಶದಲ್ಲಿ ಬಡತನ, ನಿರುದ್ಯೋಗ, ನೀರಾವರಿ ಇಲ್ಲದೆ ಇದ್ದ ದೇಶವನ್ನು ಸುಧಾರಣೆಯನ್ನು ಮಾಡಿದರು. ದೇಶ ಸ್ವಾವಲಂಭಿಯಾಗುವಲ್ಲಿ ನೆಹರುರವರ ಕೊಡುಗೆ ಬಹಳ ಇದೆ. ಪಂಚ ವಾರ್ಷಿಕ ಯೋಜನೆಯನ್ನು ಜಾರಿ ಮಾಡುವುದರ ಮೂಲಕ ದೇಶದಲ್ಲಿ ವಿವಿಧ ಕಡೆಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಾಣ ಮಾಡುವುದರ ಮೂಲಕ ದೇಶದಲ್ಲಿ ಕೃಷಿಯನ್ನು ಮಾಡಲು ಅನುವು ಮಾಡಿಕೊಡಲಾಯಿತು. ಇದ್ದಲ್ಲದೆ 20 ಅಂಶಗಳನ್ನು ಜಾರಿ ಮಾಡುವುದರ ಮೂಲಕ ಜನರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಯಿತು ಅಂದು 13 ಕೋಟಿ ಇದ್ದ ಜನಸಂಖ್ಯೆ ಇಂದು 130 ಕೋಟಿಯಾಗಿದೆ ಇವರಿಗೆಲ್ಲಾ ಆಹಾರ ಸಿಗುತ್ತಿದೆ ಎಂದರೆ ಅಂದು ನೆಹರುರವರು ನಿರ್ಮಾಣ ಮಾಡಿದ ಅಣೆಕಟ್ಟುಗಳು ಕಾರಣವಾಗಿವೆ ಎಂದರು.

ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತವನ್ನು ನಡೆಸಿದವರನ್ನು ನೆಹರು ರವರ ಸಹಾ ಒಬ್ಬರಾಗಿದ್ದಾರೆ ಈಗ ನಾವುಗಳು ನೆಮ್ಮದಿಯ ಬದುಕನ್ನು ನಡೆಸಲಾಗುತ್ತಿದೆ ಎಂದರೆ ಅದಕ್ಕೆ ಕಾರಣ ನೆಹರುರವರಾಗಿದ್ದಾರೆ. ಮುಂದಿನ ದಿನದಲ್ಲಿ ನಮ್ಮ ಪಕ್ಷದ ನಾಯಕರುಗಳು ಜನ್ಮ ದಿನ ಹಾಗೂ ಪುಣ್ಯ ಸ್ಮರಣೆಯನ್ನು ಕಚೇರಿಯಲ್ಲಿ ಆಚರಣೆ ಮಾಡಿ ತದ ನಂತರ ಯಾವುದಾದರೊಂದು ಶಾಲೆ, ಅಥವಾ ವಾರ್ಡಗಳಲ್ಲಿ ಆಚರಣೆಯನ್ನು ಮಾಡುವುದರ ಮೂಲಕ ಇಂದಿನ ಯುವ ಜನಾಂಗಕ್ಕೆ ದೇಶಕ್ಕೆ ಕಾಂಗ್ರೆಸ್ ನೀಡಿದ ಕೂಡುಗೆಯನ್ನು ತಿಳಿಸುವಂತ ಕಾರ್ಯವನ್ನು ಮಾಡಲಾಗುವುದೆಂದು ತಾಜ್‍ಪೀರ್ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ ಮಾತನಾಡಿ, ಬ್ರಿಟಿಷರು ದೇಶವನ್ನು ಬಿಟ್ಟು ಹೋದಾಗ ನಮ್ಮ ದೇಶ ಬಡತನದಲ್ಲಿತ್ತು, ಯಾವುದರಲ್ಲಿಯೂ ಸಹಾ ಸ್ವಾವಲಂಬಿ ಎನ್ನುವುದು ಇರಲಿಲ್ಲ ಇಂತಹ ಸಮಯದಲ್ಲಿ ದೇಶದ ಪ್ರಧಾನ ಮಂತ್ರಿಯಾದ ನೆಹರುರವರು ಪಂಚ ವಾರ್ಷಿಕ ಯೋಜನೆ ಜಾರಿ ಮಾಡಿ 20 ಅಂಶಗಳ ಕಾರ್ಯಕ್ರಮನ್ನು ಅನುಷ್ಠಾನ ಮಾಡುವುದರ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡ್ಯೂದರು. ಸ್ವಾತಂತ್ರ ಪೂರ್ವ ಮತ್ತು ನಂತರ ಕಾಂಗ್ರೆಸ್ ಪಕ್ಷ ಉತ್ತಮವಾದ ಕೆಲಸವನ್ನು ಮಾಡಿದೆ ಆದರೆ ಪ್ರಚಾರದ ಕೂರತೆಯಿಂದಾಗಿ ನಮಗೆ ಅಷ್ಠಾಗಿ ಪ್ರಾತಿನೀಧ್ಯ ಸಿಕ್ಕಿಲ್ಲ ಈ ಹಿನ್ನಲೆಯಲ್ಲಿ ನಮ್ಮಲ್ಲಿನ ಸೇವಾದಳ, ಯುವ ಕಾಂಗ್ರೆಸ್, ಎನ್,ಎಸ್.ಯು.ಐ, ಮಹಿಳಾ ಘಟಕಗಳು ಯುವ ಜನತೆಗೆ ನಮ್ಮ ಪಕ್ಷದ ಕಾರ್ಯವನ್ನು ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಎಂದರು.

ಯುವ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಉಲ್ಲಾಸ್ ಕಾರೇಹಳ್ಳಿ ಮಾತನಾಡಿ, ನೆಹರುರವರ ಕುಟುಂಭ ಶ್ರೀಮಂತ ಕುಟುಂಬವಾಗಿದ್ದರು ಸಹಾ ಅದನ್ನು ಲೆಕ್ಕಿಸದೇ ಬ್ರಟಿಷರ್ ವಿರುದ್ದ ಹೋರಾಟವನ್ನು ಮಾಡುವುದರ ಮೂಲಕ ದೇಶವನ್ನು ಬ್ರಟಿಷರ್ ದಾಸ್ಯದಿಂದ ಬಿಡಿಸುವಲ್ಲಿ ಪ್ರಮುಖ ಪಾತ್ರವನ್ನು ಗಾಂಧಿಜಿಯವರ ಜೊತೆಯಲ್ಲಿ ವಹಿಸಿದರು. ದೇಶದಲ್ಲಿ ಐಎಟಿ ಮತ್ತು ಇಸ್ರೋಗಳನ್ನು ಸ್ಥಾಪನೆ ಮಾಡುವುದರ ಮೂಲಕ ತಂತ್ರಜ್ಞಾನದಲ್ಲಿ ಗಣನೀಯವಾದ ಸಾಧನೆಯನ್ನು ದೇಶ ಮಾಡಿದೆ, ಇದಕ್ಕೆ ಕಾರಣ ನೆಹರುರವರಾಗಿದ್ದಾರೆ. ತಮ್ಮ ಜನ್ಮ ದಿನಾಚರಣೆಯನ್ನು ಮಕ್ಕಳಿಗಾಗಿ ತ್ಯಾಗವನ್ನು ಮಾಡುವುದರ ಮೂಲಕ ಅಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆಯನ್ನು ಮಾಡಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಉಪಾಧ್ಯಕ್ಷ ರವಿಕುಮಾರ್, ಗ್ಯಾರೆಂಟಿ ಜಿಲ್ಲಾಧ್ಯಕ್ಷ ಶಿವಣ್ಣ, ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಅಲ್ಲಾಭಕ್ಷಿ, ಲಕ್ಷ್ಮೀಕಾಂತ, ಮಧುಗೌಢ, ಇಮಾಂಸಾಬ್, ಎಸ್.ಟಿ.ಘಟಕದ ಅಧ್ಯಕ್ಷ ಮಂಜುನಾಥ್, ರಫಿ, ರಾಮ ಪ್ರಕಾಶ್ ನಾಯ್ಕ ಸೇರಿದಂತೆ ಇತರರು ಭಾಗವಹಿಸಿದ್ದರು. ಇದಾದ ನಂತರ ಡಿಸಿಸಿ ಕಚೇರಿಯ ಮೇಲೆ ಅಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಚರಕದ ಮೂಲಕ ಹತ್ತಿಯಿಂದ ದಾರವನ್ನು ತೆಗೆಯುವ ಕಾರ್ಯವನ್ನು ಮಾಡಿದರು.

Leave a Reply

Your email address will not be published. Required fields are marked *