ಕರ್ನಾಟಕ ಕೃಷಿ ಇಲಾಖೆಯಲ್ಲಿ 945 ಗ್ರೂಪ್-ಬಿ ಹುದ್ದೆಗಳಿಗೆ ನೇಮಕಾತಿ: ಜೂನ್ 20 ಅರ್ಜಿ ಸಲ್ಲಿಸಲು ಕೊನೆಯ ದಿನ.

ರಾಜ್ಯ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಕೃಷಿ ಪದವೀಧರರಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಕರ್ನಾಟಕ ರಾಜ್ಯ ಕೃಷಿ ಇಲಾಖೆಯಲ್ಲಿ (KSDA) ಖಾಲಿ ಇರುವ ಗ್ರೂಪ್-ಬಿ ವೃಂದದ ‘ಕೃಷಿ ಅಧಿಕಾರಿ’ ಹಾಗೂ ‘ಸಹಾಯಕ ಕೃಷಿ ಅಧಿಕಾರಿ’ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಹೊರಡಿಸಿದೆ.

ಒಟ್ಟು 945 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಜೂನ್ 20ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿಂಗಡಣೆ (ಒಟ್ಟು 945 ಹುದ್ದೆಗಳು)

ಈ ನೇಮಕಾತಿಯು ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ ವೃಂದ (KK) ಎರಡನ್ನೂ ಒಳಗೊಂಡಿದೆ:

ಉಳಿಕೆ ಮೂಲ ವೃಂದ (RPC) – ಒಟ್ಟು 672 ಹುದ್ದೆಗಳು

  • ಕೃಷಿ ಅಧಿಕಾರಿ: 86 ಹುದ್ದೆಗಳು
  • ಸಹಾಯಕ ಕೃಷಿ ಅಧಿಕಾರಿ: 586 ಹುದ್ದೆಗಳು

ಕಲ್ಯಾಣ ಕರ್ನಾಟಕ ವೃಂದ (KK) – ಒಟ್ಟು 273 ಹುದ್ದೆಗಳು

  • ಕೃಷಿ ಅಧಿಕಾರಿ: 42 ಹುದ್ದೆಗಳು
  • ಸಹಾಯಕ ಕೃಷಿ ಅಧಿಕಾರಿ: 231 ಹುದ್ದೆಗಳು

ಶೈಕ್ಷಣಿಕ ಅರ್ಹತೆ

  • ಕೃಷಿ ಅಧಿಕಾರಿ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌, ಕೃಷಿ ಜೈವಿಕ ತಂತ್ರಜ್ಞಾನದಲ್ಲಿ ಬಿಎಸ್‌ಸಿ ಪದವಿ ಅಥವಾ ಅಗ್ರಿಕಲ್ಚರಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪದವಿ ಪಡೆದಿರಬೇಕು.
  • ಸಹಾಯಕ ಕೃಷಿ ಅಧಿಕಾರಿ: ಬಿಎಸ್‌ಸಿ (ಕೃಷಿ/ಆನರ್ಸ್), ಬಿಎಸ್‌ಸಿ (ಕೃಷಿ ಮಾರಾಟ ಮತ್ತು ಸಹಕಾರ, ಅಗ್ರಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್) ಅಥವಾ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಿ.ಟೆಕ್ ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು 40 ವರ್ಷಗಳಿಗೆ ನಿಗದಿಪಡಿಸಲಾಗಿದೆ. ನಿಯಮಾನುಸಾರ ವಯೋಮಿತಿ ಸಡಿಲಿಕೆ ಈ ಕೆಳಗಿನಂತಿದೆ:

  • ಪ್ರವರ್ಗ 2A, 2B, 3A, 3B: 3 ವರ್ಷಗಳ ಸಡಿಲಿಕೆ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1: 5 ವರ್ಷಗಳ ಸಡಿಲಿಕೆ
  • ವಿಶೇಷ ಚೇತನ ಅಭ್ಯರ್ಥಿಗಳಿಗೆ: 10 ವರ್ಷಗಳ ಸಡಿಲಿಕೆ

ಅರ್ಜಿ ಶುಲ್ಕದ ಮಾಹಿತಿ

  • ಸಾಮಾನ್ಯ ಮತ್ತು ಒಬಿಸಿ (2A/2B/3A/3B) ಅಭ್ಯರ್ಥಿಗಳಿಗೆ: ₹750
  • ಎಸ್‌ಸಿ/ಎಸ್‌ಟಿ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ₹500
  • ವಿಶೇಷ ಚೇತನ ಅಭ್ಯರ್ಥಿಗಳಿಗೆ: ₹250

ಆಯ್ಕೆ ಪ್ರಕ್ರಿಯೆ ಮತ್ತು ವೇತನ ಶ್ರೇಣಿ

ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹69,250 ರಿಂದ ₹1,34,200 ವರೆಗೆ ಆಕರ್ಷಕ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮೇ 30
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 20
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜೂನ್ 22

ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ 080-23460460 ಅನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *