2028ರ ಚುನಾವಣೆಗೆ ಈಗಿನಿಂದಲೇ ಸಜ್ಜಾಗಿ: ಬಿಜೆಪಿ ಕಾರ್ಯಕರ್ತರಿಗೆ ಡಾ. ಸಿದ್ದಾರ್ಥ್ ಕರೆ.

ಚಿತ್ರದುರ್ಗದಲ್ಲಿ ಬಿಜೆಪಿ ವತಿಯಿಂದ ಸ್ವಚ್ಛತಾ ಅಭಿಯಾನ ಹಾಗೂ ‘ತಾಯಿಗೊಂದು ಸಸಿ’ ಕಾರ್ಯಕ್ರಮ.

ಚಿತ್ರದುರ್ಗ ಜೂ. 08

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಮುಂಬರುವ 2028ರ ವಿಧಾನಸಭಾ ಚುನಾವಣೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಾಧಿಸಬೇಕಿದೆ ಇದಕ್ಕೆ ಈಗಿನಿಂದಲೇ ತಯಾರಿಯನ್ನು ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾದ ಡಾ. ಸಿದ್ದಾರ್ಥ್ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕರೆ ನೀಡಿದರು.

ಚಿತ್ರದುರ್ಗ ಭಾರತೀಯ ಜನತಾ ಪಾರ್ಟಿಯ ಸಹಯೋಗದಲ್ಲಿ ಗ್ರಾಮಾಂತರ ಘಟಕದವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಯಿಗೊಂದು ಸಸಿ ಎಂಬ ಹೆಸರಿನಲ್ಲಿ ಮತ್ತು ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ 12 ವರ್ಷ ಪೂರೈಸಿದ ಸವಿ ನೆನಪಿಗಾಗಿ ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಸಿದ್ದಪ್ಪ ದೇವಾಲಯದ ಆವರಣವನ್ನು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ 13 ವರ್ಷ ಹಾಗೂ ದೇಶದ ಪ್ರಧಾನ ಮಂತ್ರಿಗಳಾಗಿ 12 ವರ್ಷ ಯಶಸ್ವಿಯಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾರ್ಯವನ್ನು ನಿರ್ವಹಿಸಿದ್ದಾರೆ. ಕೇಂದ್ರದ ಎನ್.ಡಿ.ಎ ಸರ್ಕಾರದ 12 ವರ್ಷದ ಸಾಧನೆಯನ್ನು ಮತದಾರರಿಗೆ ತಿಳಿಸುವಂತ ಕಾರ್ಯವನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಮಾಡಬೇಕಿದೆ, ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ನಮ್ಮ ಪಕ್ಷದ ಅಧಿಕಾರವನ್ನು ನಡೆಸುತ್ತಿದೆ, ಈ ಹಿನ್ನಲೆಯಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಸಹಾ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವಂತ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದರು.

ವಿಶ್ವ ಪರಿಸರ ದಿನಾಚರಣೆ ಮತ್ತು ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ 12 ವರ್ಷ ಪೂರೈಸಿದ ಸವಿ ನೆನಪಿಗಾಗಿ ಇಡೀ ದೇಶದಲ್ಲಿ ಬಿಜೆಪಿ ಮಂಡಲ ವ್ಯಾಪ್ತಿಯಲ್ಲಿ ಪ್ರಸಿದ್ಧ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಾಗೂ ತಾಯಿಗೊಂದು ಸಸಿ ಎಂಬ ಹೆಸರಿನಲ್ಲಿ ಇಡೀ ದೇಶದಲ್ಲಿಯೇ ಈ ಎರಡು ಕಾರ್ಯ ಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಪ್ರತಿ ದಿನ ಒಂದೊಂದು ಕಡೆ ಸ್ವಚ್ಚತಾ ಕಾರ್ಯ ಕ್ರಮದ ಜೊತೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಗುತ್ತಿದೆ.

ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಗ್ರಾಮಾಂತರ ವ್ಯಾಪ್ತಿಯ ಹುಲ್ಲೂರು-ಸಿಂಗಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಪ್ರಸಿದ್ಧ ಹಾಗೂ ಪುರಾತನ ಕಾಲದ ದೇವಾಲಯವಾದ ಶ್ರೀ ಸಿದ್ದಪ್ಪ ದೇವಸ್ಥಾನ ಸ್ವಚ್ಚತಾ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾ ಬಿಜೆಪಿಯ ಪ್ರದಾನ ಕಾರ್ಯದರ್ಶಿ ಮೋಹನ್, ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ನಾಗರಾಜ್ ನೇತೃತ್ವದಲ್ಲಿ ಮಂಡಲದ ಉಪಾಧ್ಯಕ್ಷರು ಸಿರಿಯಾಣ್ಣ ಚಿs ಶ್ರೀಧರ್ ಹಾಗೂ ಎಲ್ಲಾ ಮೋರ್ಚಾದ ಅಧ್ಯಕ್ಷರು ಪದಾಧಿಕಾರಿಗಳ ಜೊತೆಯಲಿ ಪಕ್ಷದ ಕಾರ್ಯಕರ್ತರು ಗ್ರಾಮದ ಮುಖಂಡರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *