ಪೋಸ್ಟ್ಗ್ರಾಜುಯೇಟ್ ವೈದ್ಯಕೀಯ ಕೋರ್ಸ್ಗಳ ಪ್ರವೇಶ ಕಾಯುತ್ತಿರುವ ವೈದ್ಯಕೀಯ ಅಭ್ಯರ್ಥಿಗಳಿಗೆ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್ (NBEMS) ಭರ್ಜರಿ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ NEET PG 2026 ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ದೇಶಾದ್ಯಂತ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ (CBT) ಮೋಡ್ನಲ್ಲಿ ಪರೀಕ್ಷೆ ನಡೆಯಲಿದ್ದು, ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜುಲೈ ೧ ರಿಂದಲೇ ಆರಂಭವಾಗಿದೆ. ಕೊನೆಯ ಕ್ಷಣದ ತಾಂತ್ರಿಕ ತೊಂದರೆ ಹಾಗೂ ವೆಬ್ಸೈಟ್ ಟ್ರಾಫಿಕ್ ತಪ್ಪಿಸಲು ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸುವಂತೆ ಮಂಡಳಿ ಸಲಹೆ ನೀಡಿದೆ.
NEET PG 2026: ಪ್ರಮುಖ ದಿನಾಂಕಗಳು (ವೇಳಾಪಟ್ಟಿ)
ಅಭ್ಯರ್ಥಿಗಳಿಗೆ ಪ್ರಯಾಣ ಮತ್ತು ವಸತಿ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಪರೀಕ್ಷಾ ನಗರದ ಮಾಹಿತಿಯನ್ನು ಮುಂಚಿತವಾಗಿಯೇ ತಿಳಿಸಲಾಗುತ್ತದೆ.
| ವಿವರಗಳು | ದಿನಾಂಕ |
| ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ | ಜುಲೈ 1, 2026 (ಸಂಜೆ 5 ಗಂಟೆಯಿಂದ) |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಜುಲೈ 21, 2026 (ರಾತ್ರಿ 11:55 ರವರೆಗೆ) |
| ಪರೀಕ್ಷಾ ನಗರದ (Exam City) ಮಾಹಿತಿ ಲಭ್ಯತೆ | ಆಗಸ್ಟ್ 11, 2026 |
| ಪರೀಕ್ಷೆ ನಡೆಯುವ ದಿನಾಂಕ | ಆಗಸ್ಟ್ 30, 2026 |
| ಫಲಿತಾಂಶ ಪ್ರಕಟಣೆ | ಸೆಪ್ಟೆಂಬರ್ 30, 2026 |
ಅರ್ಜಿ ಶುಲ್ಕದ ವಿವರ
ವಿವಿಧ ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಲಾದ ಆನ್ಲೈನ್ ಅರ್ಜಿ ಶುಲ್ಕ ಈ ಕೆಳಗಿನಂತಿದೆ:
- ಸಾಮಾನ್ಯ (General), OBC ಮತ್ತು EWS ಅಭ್ಯರ್ಥಿಗಳಿಗೆ: ₹3,500
- SC, ST ಮತ್ತು PWD ಅಭ್ಯರ್ಥಿಗಳಿಗೆ: ₹2,500
🎓 ಶೈಕ್ಷಣಿಕ ಅರ್ಹತೆ ಏನಿರಬೇಕು?
- ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಯಿಂದ MBBS ಪದವಿ ಅಥವಾ ಪ್ರಾವಿಷನಲ್ MBBS ಉತ್ತೀರ್ಣ ಪ್ರಮಾಣಪತ್ರ ಹೊಂದಿರಬೇಕು.
- NMC, ಹಳೆಯ MCI ಅಥವಾ ರಾಜ್ಯ ವೈದ್ಯಕೀಯ ಮಂಡಳಿಯಿಂದ (State Medical Council) ನೀಡಲಾದ ಕಾಯಂ ಅಥವಾ ತಾತ್ಕಾಲಿಕ ನೋಂದಣಿ (Registration Number) ಹೊಂದಿರುವುದು ಕಡ್ಡಾಯ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? (ಹಂತ-ಹಂತದ ಮಾಹಿತಿ)
ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:
- ಮೊದಲು NBEMS ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣಿಸುವ NEET PG 2026 ಅಥವಾ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ‘New Registration’ ಆಯ್ಕೆ ಮಾಡಿ, ನಿಮ್ಮ ಪ್ರಾಥಮಿಕ ವಿವರಗಳನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಿ.
- ಈಗ ನಿಮ್ಮ ಇಮೇಲ್ಗೆ ಬರುವ User ID ಮತ್ತು Password ಬಳಸಿ ಲಾಗಿನ್ ಆಗಿ.
- ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನುಗುಣವಾಗಿ ಆನ್ಲೈನ್ ಮೂಲಕ ಪರೀಕ್ಷಾ ಶುಲ್ಕವನ್ನು ಪಾವತಿಸಿ.
- ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಒಮ್ಮೆ ಪರಿಶೀಲಿಸಿದ ನಂತರ ಫಾರ್ಮ್ ಸಬ್ಮಿಟ್ (Submit) ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: