Daily Horoscope,12 July 2026 – ದ್ವಾದಶ ರಾಶಿಗಳ ಫಲಾಫಲ ಮತ್ತು ಪಂಚಾಂಗ.

ನಿಮ್ಮ ದಿನನಿತ್ಯದ ಆಗುಹೋಗುಗಳು, ಆರ್ಥಿಕ ಸ್ಥಿತಿಗತಿ ಹಾಗೂ ವೃತ್ತಿಜೀವನದ ಮುನ್ನೋಟವನ್ನು ತಿಳಿಯಲು ಇಂದಿನ ರಾಶಿಭವಿಷ್ಯ ಇಲ್ಲಿದೆ.

ಇಂದಿನ ಪಂಚಾಂಗ

  • ಶಕೆ ಮತ್ತು ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ನಾಮ ಸಂವತ್ಸರ
  • ಆಯನ ಮತ್ತು ಋತು: ಉತ್ತರಾಯಣ, ಗ್ರೀಷ್ಮ ಋತು
  • ಮಾಸ, ಪಕ್ಷ ಮತ್ತು ತಿಥಿ: ನಿಜ ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ದಶೀ
  • ನಕ್ಷತ್ರ: ಆರ್ದ್ರಾ (ನಿತ್ಯ ನಕ್ಷತ್ರ), ಪುನರ್ವಸು (ಮಹಾನಕ್ಷತ್ರ)
  • ಯೋಗ ಮತ್ತು ಕರಣ: ವೃದ್ಧಿ ಯೋಗ, ವಣಿಜ ಕರಣ
  • ಸೂರ್ಯೋದಯ / ಸೂರ್ಯಾಸ್ತ: ಬೆಳಗ್ಗೆ 06:01 ಕ್ಕೆ / ಸಂಜೆ 06:49 ಕ್ಕೆ

ಶುಭಾಶುಭ ಸಮಯಗಳು:

  • ರಾಹುಕಾಲ: 07:38 AM – 09:14 AM
  • ಯಮಗಂಡ ಕಾಲ: 10:49 AM – 12:25 PM
  • ಗುಳಿಕ ಕಾಲ: 02:01 PM – 03:37 PM

ದ್ವಾದಶ ರಾಶಿಗಳ ಇಂದಿನ ಭವಿಷ್ಯ

ಮೇಷ ರಾಶಿ ಹೊಸ ವಾಹನ ಖರೀದಿಯ ಯೋಗವಿದೆ. ಆದರೆ ಇಂದು ಯಾವುದೇ ಕೆಲಸದಲ್ಲಿ ಏಕಾಗ್ರತೆ ಕಾಯ್ದುಕೊಳ್ಳುವುದು ಸವಾಲಾಗಿ ಪರಿಣಮಿಸಬಹುದು. ನಿಮ್ಮ ನೇರ ನುಡಿಗಳು ಇತರರಿಗೆ ಮುಜುಗರ ಅಥವಾ ಅಪಮಾನ ಉಂಟುಮಾಡುವ ಸಾಧ್ಯತೆ ಇರುವುದರಿಂದ ಮಾತಿನ ಮೇಲೆ ಹಿಡಿತವಿರಲಿ. ಸಾಲಗಾರರು ಎದುರಾಗುವ ಸಂಭವವಿದ್ದು, ಅವರಿಂದ ಅಂತರ ಕಾಯ್ದುಕೊಳ್ಳುವಿರಿ. ಸ್ನೇಹಿತರಿಂದಲೇ ಮೋಸ ಹೋಗುವ ಸಾಧ್ಯತೆಗಳಿದ್ದು, ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸಿ.

ವೃಷಭ ರಾಶಿ ಆರ್ಥಿಕವಾಗಿ ಇಂದು ಅತಿಯಾದ ಖರ್ಚುಗಳು ಎದುರಾಗಲಿವೆ. ದೈನಂದಿನ ಕೆಲಸಗಳಲ್ಲಿ ನಿರಾಸಕ್ತಿ ಅಥವಾ ಆಲಸ್ಯ ಮೂಡಬಹುದು. ತಂದೆಯವರೊಡನೆ ಸುದೀರ್ಘ ಚರ್ಚೆಗಳಾಗಲಿದ್ದು, ಕೆಲವೊಮ್ಮೆ ಭಿನ್ನಾಭಿಪ್ರಾಯಗಳೂ ಮೂಡಬಹುದು. ದೊಡ್ಡ ಮಟ್ಟದ ಹೂಡಿಕೆಗಳಿಗೆ ಕೈಹಾಕುವಿರಿ. ಇತರರ ಸಹಾಯವನ್ನು ನಿರೀಕ್ಷಿಸದೆ ನಿಮ್ಮ ಪಾಡಿಗೆ ನೀವು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಒಲವು ತೋರುತ್ತೀರಿ.

ಮಿಥುನ ರಾಶಿ ಅನಿರೀಕ್ಷಿತವಾಗಿ ಬೆಲೆಬಾಳುವ ವಸ್ತುಗಳು ಕೈಸೇರುವ ದಿನವಿದು. ಕೃಷಿ ವಲಯದಲ್ಲಿರುವವರಿಗೆ ಉತ್ತಮ ಆರ್ಥಿಕ ಲಾಭ ಸಿಗಲಿದ್ದು, ನೆಮ್ಮದಿ ತರಲಿದೆ. ಸಜ್ಜನರ ಒಡನಾಟದಿಂದ ಮನಸ್ಸಿಗೆ ಹರ್ಷ ಸಿಗಲಿದೆ. ಮಾನಸಿಕ ಗೊಂದಲಗಳಿದ್ದರೆ ಧ್ಯಾನ ಮಾಡುವುದು ಉತ್ತಮ. ನಿಮ್ಮ ಹಿಂದಿನ ಉಳಿತಾಯಗಳು ಇಂದು ಕಷ್ಟದ ಸಮಯದಲ್ಲಿ ನೆರವಿಗೆ ಬರಲಿವೆ. ಸಹೋದರರೊಂದಿಗೆ ಸಣ್ಣಪುಟ್ಟ ಜಗಳಗಳು ಮೂಡಬಹುದು.

ಕರ್ಕಾಟಕ ರಾಶಿ ನಿಮ್ಮ ಮೇಲಿರುವ ಅಪವಾದ ಅಥವಾ ಅಪನಂಬಿಕೆಗಳನ್ನು ತೊಡೆದುಹಾಕಲು ಇಂದು ಶ್ರಮಿಸುವಿರಿ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಟೀಕೆಗಳು ಎದುರಾಗುವ ಸಾಧ್ಯತೆ ಇದೆ, ನಿಮ್ಮ ಕೆಲಸದ ಫಲಿತಾಂಶದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಳ್ಳುವವರಿಗೆ ಕೊಂಚ ಅಡೆತಡೆಗಳು ಉಂಟಾಗಬಹುದು. ಆರೋಗ್ಯ ಸುಧಾರಿಸಿದರೂ ಅತಿಯಾದ ಉತ್ಸಾಹದಿಂದ ಮೈಮೇಲೆ ಕೆಲಸ ಎಳೆದುಕೊಳ್ಳಬೇಡಿ.

ಸಿಂಹ ರಾಶಿ ಶುಭ ಸಮಾರಂಭಗಳಲ್ಲಿ ಭಾಗಿಯಾಗಿ ದಿನವಿಡೀ ಉತ್ಸಾಹದಿಂದ ಇರುತ್ತೀರಿ. ವಿವಾಹ ಆಕಾಂಕ್ಷಿಗಳಿಗೆ ಅನಿರೀಕ್ಷಿತವಾಗಿ ಯೋಗ್ಯ ಸಂಬಂಧಗಳು ಒದಗಿಬರಲಿವೆ. ವೃತ್ತಿ ಕ್ಷೇತ್ರದಲ್ಲಿ ಉನ್ನತ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ಯಶಸ್ಸು ಕಟ್ಟಿಟ್ಟ ಬುತ್ತಿ. ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ಆದರೆ ಅನಾರೋಗ್ಯದ ಸಮಯದಲ್ಲಿ ಸ್ವಯಂ ವೈದ್ಯಕೀಯ ಮಾಡಿಕೊಳ್ಳುವುದು ಅಪಾಯಕಾರಿಯಾಗಬಹುದು.

ಕನ್ಯಾ ರಾಶಿ ಉದ್ಯೋಗ ಹುಡುಕುತ್ತಿರುವವರಿಗೆ ಇಂದು ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ಆಪ್ತರಿಂದ ಆರ್ಥಿಕ ನೆರವು ಲಭ್ಯವಾದರೂ, ಮುಂದೊಂದು ದಿನ ಅದೇ ವಿಚಾರಕ್ಕೆ ನಿಮ್ಮ ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ. ನಿಮ್ಮ ಖಾಸಗಿ ವಿಷಯಗಳಲ್ಲಿ ಕುಟುಂಬದವರ ಹಸ್ತಕ್ಷೇಪವು ನಿಮ್ಮ ಕೋಪಕ್ಕೆ ಕಾರಣವಾಗಬಹುದು. ಸಮಾಜಮುಖಿ ಕೆಲಸಗಳಿಂದ ಪ್ರೇರಣೆಗೊಂಡು ಹೊಸದೊಂದು ಸಂಸ್ಥೆಯನ್ನು ಆರಂಭಿಸುವತ್ತ ಆಲೋಚಿಸುವಿರಿ.

ತುಲಾ ರಾಶಿ ವಿರೋಧಿಗಳ ಕೈ ಮೇಲಾಗುವ ಸಾಧ್ಯತೆ ಇದ್ದು, ಕೊಂಚ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಸರ್ಕಾರಿ ಕೆಲಸಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿದ್ದು, ತಾಳ್ಮೆಯಿಂದ ಕಾಯುವುದು ಅನಿವಾರ್ಯ. ಆರ್ಥಿಕ ವ್ಯವಹಾರಗಳಲ್ಲಿ ಮುಲಾಜಿಲ್ಲದೆ ಕಟ್ಟುನಿಟ್ಟಾಗಿ ವರ್ತಿಸಿದರೆ ಮಾತ್ರ ಆರ್ಥಿಕ ಲಾಭ ಕಾಣಬಹುದು. ನೀವು ಸಾಲವಾಗಿ ನೀಡಿದ್ದ ಹಣವನ್ನು ವಸೂಲಿ ಮಾಡಲು ಇಂದು ಓಡಾಟ ನಡೆಸುವಿರಿ.

ವೃಶ್ಚಿಕ ರಾಶಿ ಆದಾಯದ ಹರಿವು ಉತ್ತಮವಾಗಿದ್ದರೂ, ದಿಢೀರ್ ಖರ್ಚುಗಳು ನಿಮ್ಮನ್ನು ಚಿಂತೆಗೀಡುಮಾಡಲಿವೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ವೃತ್ತಿಜೀವನದಲ್ಲಿ ಮೇಲೇರುತ್ತೀರಿ. ಹೊಸ ಮನೆ ನಿರ್ಮಾಣಕ್ಕಾಗಿ ಹಣ ಹೊಂದಿಸುವ ಕಾರ್ಯದಲ್ಲಿ ನಿರತರಾಗುವಿರಿ. ದುರಾಸೆಗೆ ಬಿದ್ದರೆ ಕೈಯಲ್ಲಿರುವ ವಸ್ತುಗಳನ್ನೂ ಕಳೆದುಕೊಳ್ಳಬೇಕಾದೀತು. ನಿಮ್ಮ ಕಠಿಣ ಮಾತುಗಳಿಂದ ಇತರರ ದ್ವೇಷ ಕಟ್ಟಿಕೊಳ್ಳುವ ಸಂಭವವಿದೆ.

ಧನು ರಾಶಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬುದ್ಧಿವಂತಿಕೆಯಿಂದ ಹೆಜ್ಜೆ ಇಡುವುದು ಒಳಿತು. ಸರ್ಕಾರಿ ಮಟ್ಟದ ಅಧಿಕಾರಿಗಳೇ ನಿಮ್ಮಿಂದ ಸಲಹೆ ಪಡೆಯುವಷ್ಟರ ಮಟ್ಟಿಗೆ ನಿಮ್ಮ ಪ್ರಭಾವ ಇರಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ಆದರೆ ಮನೆಯ ಹಿರಿಯರ ಆರೋಗ್ಯದಲ್ಲಿ ಏರುಪೇರಾಗಲಿದ್ದು, ತಕ್ಷಣದ ವೈದ್ಯಕೀಯ ಚಿಕಿತ್ಸೆ ಬೇಕಾಗಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ.

ಮಕರ ರಾಶಿ ದಾಂಪತ್ಯ ಜೀವನದಲ್ಲಿ ಮಧುರವಾದ ವಾತಾವರಣವಿರಲಿದೆ. ನೀವು ಇಲ್ಲದಿದ್ದರೂ ಕಚೇರಿಯಲ್ಲಿ ನಿಮ್ಮ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ಸಮಾರಂಭಗಳಲ್ಲಿ ನಿಮ್ಮದೇ ಆದ ಛಾಪು ಮೂಡಿಸಲು ಬಯಸುತ್ತೀರಿ. ನಿಮ್ಮ ನಿಖರವಾದ ಸಮಯಪಾಲನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಮೆಟ್ಟಿಲು ಅಥವಾ ಎತ್ತರದ ಪ್ರದೇಶಗಳನ್ನು ಹತ್ತುವಾಗ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಇದು ಅತ್ಯಮೂಲ್ಯ ಸಮಯ.

ಕುಂಭ ರಾಶಿ ಶ್ರಮವಿಲ್ಲದೆ ಯಾವುದೇ ಫಲವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ದಿನ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆದರೂ ನಿರೀಕ್ಷಿತ ಲಾಭದಲ್ಲಿ ಕೊರತೆ ಕಾಣಲಿದೆ. ಎಲ್ಲರನ್ನೂ ಮೆಚ್ಚಿಸಲು ಹೋಗುವುದು ಅಸಾಧ್ಯ, ಹೀಗಾಗಿ ತಾಳ್ಮೆ ಇರಲಿ. ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡಿ ಉತ್ತಮ ಲಾಭ ಗಳಿಸುವಿರಿ. ಗುರಿಯ ಕಡೆಗೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ.

ಮೀನ ರಾಶಿ ನೀವು ಅಂದುಕೊಂಡ ಕೆಲಸಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಪೂರ್ಣಗೊಳ್ಳಲಿವೆ. ನಿಮ್ಮ ಅಸಾಧಾರಣ ಸಾಧನೆಯಿಂದಾಗಿ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಗುತ್ತಿಗೆದಾರರು ಹಾಗೂ ಕಲಾಕ್ಷೇತ್ರದಲ್ಲಿರುವವರಿಗೆ ಇದು ಅತ್ಯಂತ ಶುಭಕಾಲ. ಇತರರಿಂದ ಹೊಗಳಿಕೆಯನ್ನು ನಿರೀಕ್ಷಿಸದೆ ನಿಮ್ಮ ಕೆಲಸದತ್ತ ಗಮನ ಹರಿಸಿ. ಎದುರಾಗುವ ಯಾವುದೇ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಯಶಸ್ವಿಯಾಗುವಿರಿ.

Follow the ಸಮಗ್ರ ಸುದ್ದಿ Telegram Channel: https://t.me/SamagraSuddi

ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *