ಚಿತ್ರದುರ್ಗ ಆ. 14
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಶ್ಲಾಘಿಸಿದ್ದು, ಈ ಯೋಜನೆಯು ರಾಷ್ಟ್ರಧ್ವಜಕ್ಕೆ ನೀಡುವ ಗೌರವವನ್ನು ಸಾರ್ವಜನಿಕರಲ್ಲಿ ಹೆಚ್ಚಿಸಿದೆ ಎಂದು ಮಾಜಿ ಶಾಸಕರಾದ ಎಸ್.ಕೆ. ಬಸವರಾಜನ್ ಹೇಳಿದ್ದಾರೆ.
ಚಿತ್ರದುರ್ಗ ನಗರದಲ್ಲಿನ ಅವರ ಶುಕ್ರವಾರ ಹರ್ ಘರ್ ತಿರಂಗಾ’ ಅಭಿಯಾನದಡಿಯಲ್ಲಿ ತಮ್ಮ ಮನೆಯ ಮೇಲೆ ಭಾವುಟವನ್ನು ಹಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ದೇಶದ ರಾಷ್ಟ್ರಧ್ವಜವನ್ನು ಮುಟ್ಟಲು ಭಯಪಡುವ ವಾತಾವರಣವಿತ್ತು ಹಾಗೂ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶಗಳಿರಲಿಲ್ಲ. ಕೇವಲ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭ ಗಳಲ್ಲಿ, ಅದೂ ಶಾಲಾ-ಕಾಲೇಜುಗಳಲ್ಲಿ ಮಾತ್ರ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸುವ ಪರಿಪಾಠವಿತ್ತು ಎಂದು ಅವರು ನೆನಪಿಸಿಕೊಂಡರು.ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ‘ಹರ್ ಘರ್ ತಿರಂಗಾ’ ಕಲ್ಪನೆಯನ್ನು ಜಾರಿಗೆ ತಂದ ನಂತರ, ಭಾರತದ ಪ್ರತಿಯೊಂದು ಮನೆಯ ಮೇಲೆಯೂ ರಾಷ್ಟ್ರಧ್ವಜ ಹಾರಾಡು ವಂತಾಗಿದೆ. ರಾಷ್ಟ್ರಧ್ವಜವು ಕೇವಲ ನಾಲ್ಕು ಗೋಡೆಗಳ ಮಧ್ಯೆ ಅಥವಾ ವರ್ಷದ ಎರಡು ದಿನಗಳಿಗೆ ಮಾತ್ರ ಸೀಮಿತವಾಗಬಾರದು; ಅದು ಪ್ರತಿಯೊಬ್ಬ ಪ್ರಜೆಯ ನಿತ್ಯಜೀವನದಲ್ಲಿ ಗೌರವದ ಸಂಕೇತವಾಗಬೇಕು ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಎಸ್.ಕೆ.ಬಿ ತಿಳಿಸಿದರು.
ಮೂರು ದಿನಗಳ ಕಾಲ ಪ್ರತಿಯೊಂದು ಮನೆಯ ಮೇಲೆಯೂ ಧ್ವಜ ಹಾರಿಸುವ ಈ ಅಭಿಯಾನವು ರಾಷ್ಟ್ರಧ್ವಜವನ್ನು ಸಾರ್ವಜನಿಕರ ಹತ್ತಿರಕ್ಕೆ ತಂದಿದೆ. ಹಿಂದೆ ಅನೇಕರಿಗೆ ರಾಷ್ಟ್ರಧ್ವಜದ ಸ್ವರೂಪ, ಬಣ್ಣಗಳು ಹಾಗೂ ಅದರಲ್ಲಿರುವ ಅಶೋಕ ಚಕ್ರದ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ. ಆದರೆ ಇಂದು ಪ್ರತಿಯೊಂದು ಹಳ್ಳಿ ಹಾಗೂ ಕಾಲೋನಿಗಳ ಮಟ್ಟದಲ್ಲೂ ಜಾಗೃತಿ ಮೂಡಿದ್ದು, ಪ್ರಧಾನಿಗಳ ಈ ಕಲ್ಪನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟ ಅವರು. ‘ಹರ್ ಘರ್ ತಿರಂಗಾ’ ಅಭಿಯಾನವು ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿ ರಾಷ್ಟ್ರಧ್ವಜದ ಬಗ್ಗೆ ಗೌರವ, ಅರಿವು ಮತ್ತು ದೇಶಭಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ, ನಿವೃತ್ತ ದೈಹಿಕ ನಿರ್ದೇಶಕರಾದ ಜಯ್ಯಣ್ಣ, ಗುರು, ಮೆದೆಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ರಜಿನಿ ಶಂಕ್ರಣ್ಣ, ಅಜ್ಜಪ್ಪ, ತಿಮ್ಮಣ್ಣ, ಹಿರೇಗುಂಟ ನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸ್ವಾಮಿ, ಜಾನುಕೊಂಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಂಜುಳಾ ಸ್ವಾಮಿ, ಮುಖಂಡರಾದ ಚಿದಾನಂದಪ್ಪ, ಮಲ್ಲಿಕಾರ್ಜುನ,ಪ್ರಸನ್ನ, ಅಜೇಯ್, ಬಸವರಾಜ್,ಪಂಡರಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ಕುಮಾರ್,ಜೆ ಎನ್,ಕೋಟೆ ನಾಗರಾಜ್, ದ್ಯಾಮವ್ವನಹಳ್ಳಿ ನಾಗರಾಜ್, ಸಜ್ಜನಕೆರೆ ಹರೀಶ್ ಗೌಡ, ಹುಣಸೆಕಟ್ಟೆ ಶಶಿ, ನಂದೀಪುರ ವೀರೇಶ್, ಮೇಗಳಹಳ್ಳಿ ಪಾಪಣ್ಣ, ವಕೀಲರಾದ ವಿಜಯ್ಕುಮಾರ್,ಸ್ಕೌಟ್ಸ್&ಗೈಡ್ಸ್ನ ರಾಜ್ಯ ಪಧಾಧಿಕಾರಿ ಗಳಾದ ಬಸವರಾಜಣ್ಣ,ಇತರರು ಉಪಸ್ಥಿತರಿದ್ದರು