ಶ್ರೀಗುರು ತಿಪ್ಪೇರುದ್ರಸ್ವಾಮಿ ನೂತನ ಶಿಲಾ ದೇವಸ್ಥಾನ ನಿರ್ಮಾಣ, ಭಾನುವಾರ ಸಲಹಾ ಸಮಿತಿ ರಚಿಸಲು ಸಭೆ.

ಚಿತ್ರದುರ್ಗ ಆ. 14

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಕೆಳಗೋಟೆಯ ತುರುವನೂರು ರಸ್ತೆಯಲ್ಲಿನ ಶ್ರೀ ತಿಪ್ಪೇರುದ್ರಸ್ವಾಮಿ ಟ್ರಸ್ಟ್ (ರಿ) ವತಿಯಿಂದ ಶ್ರೀಗುರು ತಿಪ್ಪೇರುದ್ರಸ್ವಾಮಿ ನೂತನ ಶಿಲಾ ದೇವಸ್ಥಾನ ನಿರ್ಮಾಣ ಮಾಡಲು ಸಲಹಾ ಸಮಿತಿ ರಚಿಸಲು ಚರ್ಚಿಸುವ ಸಲುವಾಗಿ ಆ. 16ರ ಭಾನುವಾರ ಬೆಳಿಗ್ಗೆ 10.30ಕ್ಕೆ ಸಲಹಾ ಸಮಿತಿ ರಚಿಸುವ ಸಲುವಾಗಿ ಸಭೆಯನ್ನು ಶ್ರೀ ತಿಪ್ಪೇರುದ್ರಸ್ವಾಮಿ ಟ್ರಸ್ಟ್ ಆವರಣದಲ್ಲಿ ಕರೆಯಲಾಗಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೆಸರಾಂತ ಕಾಯಕಯೋಗಿ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಚಿತ್ರದುರ್ಗ ನಗರದ ತುರುವನೂರು ರಸ್ತೆ ಕೆಳಗೋಟೆಯಲ್ಲಿ ಹಳೆಯ ಹೆಂಚಿನ ಮತ್ತು ಶೀಟ್‍ನಿಂದ ಇದ್ದ ದೇವಸ್ಥಾನವು ಶಿಥಿಲವಾಗಿ ದ್ದರಿಂದ ಈ ಜಾಗದಲ್ಲಿ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಶಿಲಾ ದೇವಸ್ಥಾನ ನಿರ್ಮಿಸಲು 1ಕೋಟಿ ಹಣವು ಬೇಕಾಗಿರುವುದರಿಂದ ಧನ ಸಂಗ್ರಹಣೆ ಮಾಡಲು ಸಲಹಾ ಸಮಿತಿ ರಚಿಸುವ ಸಲುವಾಗಿ ಆ. 16ರ ಭಾನುವಾರ ಬೆಳಿಗ್ಗೆ 10.30ಕ್ಕೆ ಸಭೆಯನ್ನು ಕರೆಯಲಾಗಿದೆ ಈ ಸಭೆಯ ಸಾನಿಧ್ಯವನ್ನು ಕರುವಿನಕಟ್ಟೆಯ ಶ್ರೀಸದ್ಗುರು ಕಬೀರಾನಂದಾಶ್ರಮದ ಶ್ರೀಸದ್ಗುರು ಶಿವಲಿಂಗಾನಂದಸ್ವಾಮೀಜಿಯವರ ವಹಿಸಲಿದ್ದಾರೆ. ತಾವುಗಳು ಸಭೆಗೆ ಆಗಮಿಸಿ ಸಲಹೆ ಮತ್ತು ಮಾರ್ಗದರ್ಶನ ನೀಡಲು ಮನವಿ ಮಾಡಲಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *