ಚಿತ್ರದುರ್ಗ| 69ನೇ ವರ್ಷದ ಪ್ರಸನ್ನ ಗಣಪತಿ ಮಹೋತ್ಸವ: ಪೆಂಡಲ್ ನಿರ್ಮಾಣಕ್ಕೆ ಭೂಮಿ ಪೂಜೆ.

ಚಿತ್ರದುರ್ಗ ಆ.17

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಆನೆ ಬಾಗಿಲ ಬಳಿ ಇರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿವತಿಯಿಂದ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಮಹೋತ್ಸ ವದ ಅಂಗವಾಗಿ ಸೋಮವಾರ ಪೆಂಡಲ್ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೇರವೇರಿಸಲಾಯಿತು.

ಸೆ.14 ರಿಂದ 24ರವರೆಗೆ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಕಾರ್ಯಕ್ರಮ ನಡೆಯಲಿದೆ, ಇದರಲ್ಲಿ ಶಿವಮೊಗ್ಗದ ಶಿಲ್ಪಿಗಳಾದ ರಾಮಕೃಷ್ಣ ಪಾಂಡುರಂಗ ಇವರಿಂದ ನಿರ್ಮಾಣವಾದ ಶ್ರೀ ಪ್ರಸನ್ನ ಗಣಪತಿ ಹಾಗೂ ರಾಜು ಜಿ.ಎಂ. ನಿರ್ಮಾಣ ಚಿತ್ತಾಕರ್ಷಕವಾದ ಪೆಂಡಾಲ್ ನಿರ್ಮಾಣವಾಗಲಿದ್ದು, ಪ್ರತಿ ದಿನ ಗಣಪತಿಗೆ ನವಗ್ರಹ ಹೋಮ, ಸಹಸ್ರನಾಮ ಕುಂಕುಮಾರ್ಚನೆ, ಮಹಾ ಮಂಗಳಾರತಿ ಪ್ರಸಾದ್ ವಿನಿಯೋಗ ಕಾರ್ಯಕ್ರಮ ನಡೆಯಲಿದ್ದು ಸೆ.15 ರಿಂದ 23ರವರೆಗೆ ಪ್ರತಿ ದಿನ ಸಂಜೆ 6 ಗಂಟೆಯಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ, ಸೆ, 23ರಂದು ನವಗ್ರಹ ಹೋಮ, ಸಹಸ್ರ ಮೋದಕ ಗಣಹೋಮ. ಪೂರ್ಣಹುತಿ ನಡೆಯಲಿದ್ದು ಸೆ, 24ರ ಸಂಜೆ 6 ಗಂಟೆಯಿಂದ ಸಕಲ ದೇವ ಮರ್ಯಾದೆಗಳೊಂದಿಗೆ ಶ್ರೀ ಪ್ರಸನ್ನ ಗಣಪತಿ ಉತ್ಸವ ನಡೆಯಲಿದ್ದು, ರಾತ್ರಿ 10.30ಕ್ಕೆ ಚಂದ್ರವಳ್ಳಿ ಕರೆಯಲ್ಲಿ ಗಣಪತಿಯನ್ನು ಉದ್ಘಾಸನೆ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಎಲ್.ಎನ್.ರಾಜಕುಮಾರ್, ಉಪಾಧ್ಯಕ್ಷರಾದ ಆನಂದ್,ನಾರಾಯಣರಾವ್, ಕಾರ್ಯದರ್ಶಿ ನಾಗರಾಜ್ ಬೇದ್ರೇ, ಖಂಜಾಚಿ ಶ್ಯಾಮ್ ಪ್ರಸಾದ್, ಸಹ ಕಾರ್ಯದರ್ಶಿ ರಮೇಶ್ ಕುಮಾರ್, ನಿರ್ದೆಶಕರಾದ ಕೃಷ್ಣಜಿರಾವ್, ಎ.ಟಿ.ರಮೇಶ್, ಆನಿತ ರಾಜಕುಮಾರ್, ಜಿಎಂ.ರಾಜು. ಸಿದ್ದಲಿಂಗೇಶ್ವರ ಪ್ರದೀಪ್ ಕುಮಾರ್, ವಿದ್ಯಾ ಸಾಗರ್ ಚಂದ್ರಶೇಖರ್ ಶ್ರೀನಿವಾಸ್ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook pagehttps://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *