ಬರ ಪೀಡಿತ ತಾಲ್ಲೂಕುಗಳ ಘೋಷಣೆಯಲ್ಲಿ ಅನ್ಯಾಯ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಬುರುಡೆಕಟ್ಟೆ ರಾಜೇಶ್ ಕಿಡಿ.

ಚಿತ್ರದುರ್ಗ ಆ. 29

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿ ಕನ್ನಡಿರಿಗೆ ದ್ರೋಹ ಬಗೆದಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ ಬುರುಡೆಕಟ್ಟೆ ರಾಜೇಶ್ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ದಲಿತರ ಕಲ್ಯಾಣಕ್ಕೆ ಮೀಸಲಿದ್ದ ಅನುದಾನವನ್ನು ತಮ್ಮ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ. ಲೂಟಿ ಮಾಡಿ, ಆ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಬಳಸಿಕೊಂಡು ಶೋಷಿತ ವರ್ಗಕ್ಕೆ ವಂಚಿಸಿದೆ. ಕಾಂಗ್ರೆಸ್‍ನ ಈ ಆಡಳಿತಾತ್ಮಕ ವೈಫಲ್ಯ ಮತ್ತು ಭ್ರಷ್ಟಾಚಾರದಿಂದಾಗಿ ಕರ್ನಾಟಕದ ಪ್ರಗತಿ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದು ದೂರಿದರು. ಇಡಿ ಮತ್ತು ಸಿಬಿಐ ತನಿಖಾ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. 600 ನಕಲಿ ಖಾತೆಗಳು ಹಾಗೂ ಶೆಲ್ ಕಂಪನಿಗಳ ಮೂಲಕ ದರೋಡೆ ಮಾಡಲಾಗಿದೆ. ಈ ಅಕ್ರಮ ತಾಳಲಾರದೆ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡು ಸಚಿವರ ಸೂಚನೆಯಂತೆ ಲೂಟಿ ನಡೆದಿದೆ ಎಂದು ಡೆತ್ ನೋಟ್‍ನಲ್ಲಿ ಬಯಲು ಸಂಸ್ಥೆಗಳು ಸಚಿವ ಬಿ. ನಾಗೇಂದ್ರರನ್ನೇ ಈ ಹಗರಣದ ಪ್ರಮುಖ ಕಿಂಗ್‍ಪಿನ್ ಎಂದು ಉಲ್ಲೇಖಿಸಿರುವುದು ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ ಅವರು.

ಇಡಿ ಹಾಗೂ ಸಿಬಿಐ ತನಿಖಾ ಸಂಸ್ಥೆಗಳು ಸಚಿವ ಬಿ.ನಾಗೇಂದ್ರ ಅವರನ್ನು ಹಗರಣದ ಪ್ರಮುಖ ವ್ಯಕ್ತಿ ಉಲ್ಲೇಖಿಸಿವೆ. ಬಡ ಹಾಗೂ ಶೋಷಿತ ವರ್ಗಕ್ಕೆ ಸೇರಬೇಕಿದ್ದ ಹಣದಲ್ಲಿ 20.19 ಕೋಟಿಗೂ ಹೆಚ್ಚಿನ ಮೊತ್ತವನ್ನು ಕಾಂಗ್ರೆಸ್ ತೆಲಂಗಾಣ ಮತ್ತು ಬಳ್ಳಾರಿ ಚುನಾವಣೆಗಳ ವೆಚ್ಚಕ್ಕೆ ದುರ್ಬಳಕೆ ಮಾಡಿಕೊಂಡಿದೆ. ಅಲ್ಲದೆ ಉಷಾರಾಮಿ ಕಾರು, ನಗದು ಹಾಗೂ ಚಿನ್ನ ಖರೀದಿಗೆ ಹಣ ಬಳಸಲಾಗಿದೆ ಎಂದು ಬುರುಡೆಕಟ್ಟೆ ರಾಜೇಶ್ ಆರೋಪಿಸಿದ್ದಾರೆ. ದಲಿತ ವಿರೋಧಿ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಮಶಿಷ್ಟ ಜಾತಿ ಮೀಸಲಾತಿಯನ್ನು ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅವುಗಳನ್ನು ಕ್ರಮವಾಗಿ ಶೇ.15 ಹಾಗೂ ಶೇ.3ಕ್ಕೆ ಇಳಿಸುವ ಮೂಲಕ ಶೋಷಿತರ ಹಕ್ಕನ್ನು ಕಸಿದುಕೊಂಡಿದೆ ಹಾಗೂ ಶೋಷಿತ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾಯ್ದಿರಿಸಿದ್ದ ಎಸ್.ಎಸ್.ಪಿ/ಟಿಎಸ್‍ಪಿ ಕಲ್ಯಾಣ ನಿಧಿಯಿಂದ ದಲಿತರು ಗ್ಯಾರಂಟಿ ಯೋಜನೆಗಳಿಗೆ ಅಂದಾಜು 53,926.46 ಕೋಟಿ ಮರುಹಂಚಿಕೆ ಮಾಡಲಾಗಿದೆ. ಇದರಿಂದ ದಲಿತರ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಅವರು ಮಹಿಳಾ ವಿರೋಧಿ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಕಂತುಗಳ 5,000 ಕೋಟಿಗೂ ಅಧಿಕ ಮೊತ್ತ ಬಾಕಿ ಉಳಿದಿದೆ. ಗೃಹಲಕ್ಷ್ಮಿ ಹಣ ಪಾವತಿ ಕುರಿತು ಅಂದಿನ ಸಚಿವ ಲಕ್ಷ್ಮೀ ಹೆಬ್ಬಾಳ್ಳರ್ ಅವರು ವಿಧಾನಸಭೆಯ ಕಲಾಪದಲ್ಲೇ ತಪ್ಪು ಮಾಹಿತಿ ನೀಡಿ ರಾಜ್ಯದ ಮಹಿಳೆಯರಿಗೆ ವಂಚಿಸಿದ್ದಾರೆ ಆರೋಪಿಸಿದ್ದಾರೆ.

ಎನ್.ಡಿ.ಎ ಒಕ್ಕೂಟದಿಂದ ಸದನದ ಒಳಗೂ ಹಾಗೂ ಹೊರಗಡೆಯ ಹೋರಾಟದ ಫಲವಾಗಿ ಸಚಿವ ನಾಗೇಂದ್ರ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಹಲವು ಗಂಭೀರ ಆಧಾರಗಳಿದ್ದರೂ ಕಳಂಕಿತ ಬಿ.ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರವು ಬಡ ಯುವಕರು ಹಾಗೂ ಶೋಷಿತ ಸಮುದಾಯಗಳ ಕಲ್ಯಾಣದ ಅವಕಾಶಗಳನ್ನು ಕಸಿದುಕೊಂಡಿದೆ. ಹಾಗೂ ಅತ್ಯಂತ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಇತರ ಸಾಲು ಸಾಲು ಆಡಳಿತಾತ್ಮಕ ವೈಫಲ್ಯಗಳ ವಿರುದ್ಧ ನಾಡಿನ ಜನರ ಧ್ವನಿಯಾಗಿ ರಾಯಚೂರು ಜಿಲ್ಲೆಯ ಲಿಂಗಸಗೂರಿನಿಂದ ಬಳ್ಳಾರಿ ನಗರದವರೆಗೆ ಸೆ.1 ರಿಂದ 10ರವರೆಗೆ ಒಟ್ಟು 10 ದಿನಗಳ ಕಾಲ ಸುಮಾರು 175 ಕಿ.ಮೀ. ಸುದೀರ್ಘ ಬೃಹತ್ ಪಾದಯಾತ್ರೆ ನಡೆಸಿ ಐತಿಹಾಸಿಕ ಜನಾಂದೋಲನ ರೂಪಿಸಲಾಗಿದೆ ಎಂದು ಬುರುಡೆಕಟ್ಟೆ ರಾಜೇಶ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡುವಾಗಲೂ ಸಹಾ ತಾರತಮ್ಯ ಮಾಡಿದೆ ರಾಜ್ಯ ಪೂರ್ಣವಾಗಿ ಬರದಿಂದ ಕೂಡಿದಿದ್ದರೂ ಕೇವಲ ಕೆಲವೇ ತಾಲ್ಲೂಕುಗಳನ್ನು ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಆರು ತಾಲ್ಲೂಕುಗಳು ಸಹಾ ಬರದಿಂದ ಕೂಡಿದ್ದರು ಸಹಾ ಕೇವಲ 3 ತಾಲ್ಲೂಕುಗಳನ್ನು ಮಾತ್ರ ಬರ ಪೀಡಿತ ಎಂದು ಘೋಷಿಸಿದ್ದಾರೆ ಈಗ ಉಳಿದ ಮೂರು ತಾಲ್ಲೂಕುಗಳನ್ನು ಸಹಾ ಬರ ಪೀಡಿತ ಎಂದು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಬುರುಡೆಕಟ್ಟೆ ರಾಜೇಶ್ ಆಗ್ರಹಿಸಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *