ಚಿತ್ರದುರ್ಗ ಸೆ. 04
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ತಾಲ್ಲೂಕಿನಲ್ಲಿ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಶೇ. ನೂರರಷ್ಟು ಎನ್.ಪಿ.ಎಯನ್ನು ಹೊಂದಿದ ಏಕೈಕ ಸೊಸೈಟಿಯಾಗಿದೆ, ನಮ್ಮಲ್ಲಿ ಸಾಲವನ್ನು ಪಡೆದವರು ಶೇ. ನೂರಕ್ಕೆ ನೂರರಷ್ಟು ಸಾಲವನ್ನು ಮರು ಪಾವತಿ ಮಾಡಿದ್ದಾರೆ ಇದರಿಂದ ನಮ್ಮ ಸೊಸೈಟಿ ಇಷ್ಟು ಪ್ರಗತಿಯನ್ನು ಹೊಂದಲು ಸಾಧ್ಯವಾಗಿದೆ, ಇದ್ದಲ್ಲದೆ ಮುಂದಿನ ದಿನದಲ್ಲಿ ನಮ್ಮ ಸೊಸೈಟಿಯ ಕಾರ್ಯ ವ್ಯಾಪ್ತಿಯನ್ನು ಮೊಳಕಾಲ್ಮೂರು ತಾಲ್ಲೂಕನ್ನು ಹೊರೆತು ಪಡಿಸಿ ಉಳಿದ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ವಿಸ್ತರಣೆಯನ್ನು ಮಾಡಲಾಗುವುದೆಂದು ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ತಿಳಿಸಿದರು.
ಚಿತ್ರದುರ್ಗ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25ನೇ ವರ್ಷ (ರಜತ ಮಹೋತ್ಸವ) ದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವೀರಶೈವ ಸಮಾಜದ ಬಾಂಧವರಿಂದ ಪ್ರಾರಂಭವಾದ ವೀರಶೈವ ಸೊಸೈಟಿಯು ಜೆ.ಎಂ. ಜಯಕುಮಾರ್ ಇವರ ಅಧ್ಯಕ್ಷತೆಯಲ್ಲಿ 2001ರಲ್ಲಿ ಪ್ರಾರಂಭವಾಗಿ ನಂತರ ಸಂಘದ ಪ್ರಗತಿಯು ಕ್ರಮೇಣ ಏರುಗತಿಯಲ್ಲಿ ಸಾಗುತ್ತಾ ಇಂದು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಸೊಸೈಟಿಯ ರಜತ ಮಹೋತ್ಸವದ ಆಚರಣೆಯು ಸದಸ್ಯರ, ಗ್ರಾಹಕರ ನಂಬಿಕೆ, ವಿಶ್ವಾಸ, ಆರ್ಥಿಕ ಸ್ಥಿರತೆ ಮತ್ತು ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಯ ಸಂಕೇತವಾಗಿದೆ. ಈ 25 ವರ್ಷಗಳ ಅವಧಿಯಲ್ಲಿ ಸೊಸೈಟಿಯು 500 ಜನ ಸದಸ್ಯರ ನೋಂದಣಿಯೊಂದಿಗೆ ಪ್ರಾರಂಭವಾಗಿ ಇಂದು 1702 ಜನ ಸದಸ್ಯರನ್ನು ಹೊಂದಿ ಈ ನಗರಕ್ಕೆ ಒಂದು ಒಳ್ಳೆಯ ಸೊಸೈಟಿಯಾಗಿ ಬೆಳೆದು ನಿಂತಿರು ವುದನ್ನು ನಮ್ಮ ಸಂಘ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು.
ಈಗಿನ ರಾಷ್ಟ್ರೀಕೃತ ಬ್ಯಾಂಕಿನ ಪೈಪೋಟಿಯಲ್ಲಿ ನಮ್ಮ ಸೊಸೈಟಿಯು ಸ್ಥಳೀಯ ಜನರ ನಂಬಿಕೆಯನ್ನು ಉಳಿಸಿ ಕೊಂಡು ಬಂದಿರುವುದು ನಮ್ಮ ಸೊಸೈಟಿಯ ಒಂದು ಹೆಗ್ಗಳಿಕೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಡವಾಗಿ ಬೆಳೆಯಲು ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗುತ್ತದೆ ಎಂಬ ಅಚಲ ವಿಶ್ವಾಸ ನಮ್ಮದಾಗಿದೆ. ಆರ್ಥಿಕ ವರ್ಷ 2025-26ನೇ ಸಾಲಿನಲ್ಲಿ ನಮ್ಮ ಸೊಸೈಟಿಯ ಠೇವಣಿಗಳಲ್ಲಿ, ಸಾಲ ಹಾಗೂ ಮುಂಗಡಗಳಲ್ಲಿ ಗಣನೀಯ ಪ್ರಗತಿ ಕಂಡು ಬಂದಿರುತ್ತದೆ. ಈ ಎಲ್ಲಾ ಬೆಳವಣಿಗೆಯ ಹಿಂದೆ ಸದಸ್ಯರ ಸಹಾಯ, ಸಹಕಾರ ಡಿಪಾಜಿಟ್ ದಾರರು ನಮ್ಮ ಸೊಸೈಟಿಯ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆಯೇ ಕಾರಣ ಮತ್ತು ಆಡಳಿತ ಮಂಡಲಿ ನಿರ್ದೇಶಕರ ನಿಸ್ವಾರ್ಥ ಸೇವೆ ಹಾಗೂ ಅವಿರತ ಬೆಂಬಲ, ಸ್ಪೂರ್ತಿದಾಯಕ ಹಾರೈಕೆ ಹಾಗೂ ಸಿಬ್ಬಂದಿ ವರ್ಗದವರ ಪ್ರಮಾಣಿಕ ಹಾಗೂ ಅವಿರತ ಸೇವೆಯೇ ಕಾರಣವಾಗಿದೆ ಎಂದು ಪಟೇಲ್ ಶಿವಕುಮಾರ್ ತಿಳಿಸಿದರು.
03/08/2001ರಲ್ಲಿ ಎಲ್ಲಾ ವೀರಶೈವ ಲಿಂಗಾಯತ ಸಮಾಜ ಬಾಂಧವರಿಂದ 500 ಜನ ಸದಸ್ಯರ ನೋಂದಣಿ ಯೊಂದಿಗೆ ವೀರಶೈವ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸಲಾಯಿತ್ತು. ಈ ಪತ್ತಿನ ಸಂಘಕ್ಕೆ ಜೆ.ಎಂ. ಜಯಕುಮಾರ್ ಇವರನ್ನು ಸಂಘದ ಪ್ರಾರಂಭಿಕ ಅಧ್ಯಕ್ಷರನ್ನಾಗಿ ಮಾಡಲಾಯಿತು. ತದನಂತರ ನಮ್ಮ ಪತ್ತಿನ ಸಂಘವು ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಎಂಬ ಹೆಸರಿಗೆ ನಾಮಾಂಕಿತ ಗೊಂಡು 20 ವರ್ಷಗಳ ದಕ್ಷ ಆಡಳಿತದೊಂದಿಗೆ ಸೊಸೈಟಿಯನ್ನು ಮುಂದುವರಿಸುತ್ತಾ, ಎಲ್ಲರ ಸಹಕಾರದಿಂದ 10ನೇ ವರ್ಷಕ್ಕೆ ಸೊಸೈಟಿಯು ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಸಂಘವನ್ನು ಪ್ರಗತಿಯತ್ತ ಸಾಗಿಸಿದರು. ತದನಂತರ ಬಂದಂತಹ ನನ್ನ ಅಧ್ಯಕ್ಷತೆಯ ನೇತೃತ್ವದಲ್ಲಿ ಬಂದ ತಂಡ, ತಮ್ಮ ನಿರ್ದೇಶಕರು ಸದಾ ಬೆಂಬಲವಾಗಿ ನಿಂತು ಕಾರ್ಯನಿರ್ವಹಿಸುತ್ತಾ, ಸಂಘವು ಇನ್ನು ಹೆಚ್ಚಿನ ಪ್ರಗತಿಯತ್ತ ಮುನ್ನಡೆಸುತ್ತಿ ರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
31/03/2002ರ ಅಂತ್ಯಕ್ಕೆ 696 ಸದಸ್ಯರನ್ನು ಹೊಂದಿದ್ದು 14,47,620.00 ಷೇರು ಬಂಡವಾಳ, ರೂ.46,65, 392.00 ಠೇವಣಿಯನ್ನು ಹೊಂದಿರುತ್ತದೆ. ಸೊಸೈಟಿಯ 2025-26ನೇ ದಿ:31/03/2026ಕ್ಕೆ 1702 ಸದಸ್ಯ ರನ್ನು ಹೊಂದಿದ್ದು, ರೂ. 83,78,300.00 ಷೇರು ಬಂಡವಾಳ ಹಾಗೂ ರೂ.15,48,41,521.00 ಠೇವಣಿ ಯನ್ನು ಹೊಂದಿರುತ್ತದೆ. ಇದ್ದಲ್ಲದೆ ಕಾಯ್ದಿಟ್ಟ ನಿಧಿ ಮತ್ತು ಇತರೆ ನಿಧಿಗಳು ರೂ.4,89,31,461,34 ಠೇವಣಿ ಗಳು ರೂ.15,48,41,521.91, ಹೊಡಿಕೆಗಳು ರೂ. 8,62,31,590.00, ದುಡಿಯುವ ಬಂಡವಾಳ ರೂ. 23,98,20,557.37 ಹಾಗೂ ಸಾಲ ಮತ್ತು ಮುಂಗಡಗಳು ರೂ.14,05,10,663.00ಗಳಾಗಿವೆ ಎಂದು ತಿಳಿಸಿದ ಪಟೇಲ್ ಶಿವಕುಮಾರ್ ಸೊಸೈಟಿಯ ರಜತ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಬೇಕಾದ ರೂಪು ರೇಷೆಗಳನ್ನು ತಯಾರು ಮಾಡಲು ಮತ್ತೋಮ್ಮೆ ಸಭೆಯನ್ನು ನಡೆಸುವುದರ ಮೂಲಕ ಷೇರುದಾರರ ಅಭೀಪ್ರಾಯವನ್ನು ಪಡೆಯುವುದರ ಮೂಲಕ ಕಾರ್ಯಕ್ರಮವನ್ನು ನಡೆಸಲಾಗುವುದು. ನಮ್ಮಲ್ಲಿರುವ 1702 ಷೇರುದಾರರಲ್ಲಿ ಸುಮಾರು 500ಕ್ಕೂ ಹೆಚ್ಚು ಷೇರುದಾರರು ನಮ್ಮಲ್ಲಿ ಖಾತೆಯನ್ನು ತರೆಯದೇ ಇದ್ದಾರೆ ಇದ್ದಲ್ಲದೆ ಇನ್ನೂ ಹಲವಾರು ಷೇರುದಾರರ ತಮ್ಮ ವಿಳಾಸ ಸರಿಯಿಲ್ಲ, ಅಂಚೆ ಮೂಲಕ ಕಳುಹಿಸಿದರು ಸಹಾ ತಲುಪದೆ ಅಂಚೆ ವಾಪಾಸ್ಸು ಬಂದಿದೆ. ಎರಡು ವಾರ್ಷಿಕ ಸಭೆಗಳಿಗೆ ಹಾಜರಾಗದೇ ಇದ್ದರೆ, ಸೊಸೈಟಿಯಲ್ಲಿ ಖಾತೆಯನ್ನು ತೆರೆದು ವಹಿವಾಟು ಮಾಡದಿದ್ದರೆ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳ ಬೇಕಾಗುತ್ತದೆ ಎಂದರು.

ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., 2025-26ನೇ ಸಾಲಿನಲ್ಲಿ 95,96,391,85 ರೂಗಳ ನಿವ್ವಳ ಲಾಭವನ್ನು ಪಡೆದಿದೆ, ಇದರಲ್ಲಿ ಸದಸ್ಯರಿಗೆ ಶೇ.20ರಷ್ಟನ್ನು ಡಿವಿಡೆಂಡ್ ಆಗಿ ನೀಡಲಾ ಗುವುದು, ಇದ್ದಲ್ಲದೆ, ಮರಣೋತ್ತರ ನಿಧಿಯನ್ನು 5 ಸಾವಿರದಿಂದ 10 ಸಾವಿರಕ್ಕೆ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರವನ್ನು 1000 ದಿಂದ 2000ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಅಧ್ಯಕ್ಷರಾದ ಪಟೇಲ್ ಶಿವ ಕುಮಾರ್ ತಿಳಿಸಿದರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.,ನ ಉಪಾಧ್ಯಕ್ಷರಾದ ಸಿ.ಚಂದ್ರಪ್ಪ, ನಿರ್ದೇಶಕರುಗಳಾದ ಕೆ.ಹೆಚ್. ಮುರುಗೇಂದ್ರಪ್ಪ, ಡಿ.ಎಸ್.ರಾಜೇಶ್, ಜಿ.ಟಿ.ಸುರೇಶ್, ಜಿ.ಎಂ.ಕರಿಬಸವಯ್ಯ, ಜೆ.ಎಸ್.ಪ್ರಸಾದ್, ಡಿ.ಎಸ್.ನೀಲಕಂಠೇಶ್ವರಪ್ಪ, ಶ್ರೀಮತಿ ಎಂ.ಶೈಲಜಾ, ಶ್ರೀಮತಿ ಜಿ.ಆರ್.ನಿವೇದಿತಾ, ಶ್ರೀಮತಿ ರೀನಾ ಕೆ.ಜಿ. ಸಂಸ್ಥಾಪಕ ಅಧ್ಯಕ್ಷರಾದ ಜೆ.ಎಂ. ಜಯಕುಮಾರ್, ಉದ್ಯಮಿಗಳಾದ ಕೆ.ವಿ.ಪ್ರಬಾಕರ್, ಮಾಜಿ ನಿರ್ದೇಶಕರಾದ ಕೆ.ಇ.ಬಿ.ಷಣ್ಮುಖಪ್ಪ ಉಪಸ್ಥಿತರಿದ್ದರು. ವ್ಯವಸ್ಥಾಪಕರಾದ ಶ್ರೀಮತಿ ಕುಸುಮ ಜವಳಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸೊಸೈಟಿಯ ಷೇರುದಾರರ ಮಕ್ಕಳಲ್ಲಿ ಎಸ್.ಎಸ್. ಎಲ್.ಸಿ. ಹಾಗೂ ಪಿಯುನಲ್ಲಿ ಉತ್ತಮ ಅಂಕಗಳನ್ನು ಪಡೆದವರನ್ನು ಸನ್ಮಾನಿಸಲಾಯಿತು
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j