ಆಗ್ನೇಯ ಪದವೀಧರ ಕ್ಷೇತ್ರ: ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್‌ ಪರ ಡಾ. ಶಿವಯೋಗ ಸ್ವಾಮಿ ಮತಯಾಚನೆ.

ಸಮಗ್ರ ಸುದ್ದಿ, ಚಿತ್ರದುರ್ಗ ಸೆ. 28

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚುನಾವಣೆಯಲ್ಲಿ ಮತ ಚಲಾಯಿಸುವಾಗ ಯಾವುದೇ ಗೊಂದಲವಿಲ್ಲದೆ, ಮತಗಟ್ಟೆಯಲ್ಲಿ ನೀಡುವ ಪೆನ್ ಮಾತ್ರ ಬಳಸಿ ಅಭ್ಯರ್ಥಿಯ ಹೆಸರು ಹಾಗೂ ಭಾವಚಿತ್ರದ ಮುಂದಿನ ಪೆಟ್ಟಿಗೆಯಲ್ಲಿ ‘1’ (ಒಂದು) ಎಂದು ಬರೆಯಬೇಕು. ಬೇರೆ ಯಾವುದೇ ಗುರುತುಗಳನ್ನು ಮಾಡಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ. ಶಿವಯೋಗ ಸ್ವಾಮಿ ಕರೆ ನೀಡಿದರು.

ಚಿತ್ರದುರ್ಗ ನಗರದ ಕೋಟೆ ಮುಂಭಾಗದಲ್ಲಿನ ರಾಘವೇಂದ್ರ ನರ್ಸಿಂಗ್ ಕಾಲೇಜಿನಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು ಬರುವ ಅಕ್ಟೋಬರ್ 23 ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಎನ್‍ಡಿಎ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ ಕೆ.ಎಂ. ಸುರೇಶ್ ಅವರನ್ನು ಕಣಕ್ಕಿಳಿಸಲಾಗಿದ್ದು, ಇವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.

ಸುಮಾರು 15 ವರ್ಷಗಳ ನಂತರ ಈ ಭಾಗದ (ದಾವಣಗೆರೆ/ಚಿತ್ರದುರ್ಗ ಜಿಲ್ಲೆ) ಸ್ಥಳೀಯ ಅ¨ ್ಯರ್ಥಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ದಾವಣಗೆರೆಯಲ್ಲಿ ಸೋಮೇಶ್ವರ ವಿದ್ಯಾಲಯ, ವಸತಿ ಶಾಲೆ ಹಾಗೂ ಪಿಯು ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಮತದಾರರಿದ್ದು, ಅಖಂಡ ಚಿತ್ರದುರ್ಗ, ತುಮಕೂರು ಹಾಗೂ ಹಳೆಯ ಕೋಲಾರ (ಕೋಲಾರ ಮತ್ತು ಚಿಕ್ಕಬಳ್ಳಾಪುರ) ಜಿಲ್ಲೆಗಳನ್ನು ಒಳಗೊಂಡಂತೆ ಸುಮಾರು 450 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಶ್ವತ ಅನುದಾನ ರಹಿತ ಶಾಲೆಗಳಿಗೆ ‘ಗ್ರಾಂಟ್ ಇನ್ ಏಡ್’ ನೀಡಿದ್ದು, ಎರಡು ವೇತನ ಆಯೋಗಗಳ ವರದಿಯನ್ನು ಅನುಷ್ಠಾನಗೊಳಿಸಿದ್ದು ಹಾಗೂ ಹೈಯರ್ ಎಜುಕೇಶನ್ ಸಚಿವರಾಗಿದ್ದ ಶಂಕರಮೂರ್ತಿ ಅವರ ಅವಧಿಯಲ್ಲಿ ಒಂದೇ ವರ್ಷದಲ್ಲಿ 181 ಹೊಸ ಕಾಲೇಜುಗಳನ್ನು ಪ್ರಾರಂಭಿಸಿದ್ದನ್ನು ಸ್ಮರಿಸಲಾಯಿತು. ಹಾಗೆಯೇ ಬಸವರಾಜ ಬೊಮ್ಮಾಯಿ ಅವರು ಇಂಟರಿಮ್ ರಿಲೀಫ್ (ಮಧ್ಯಂತರ ಪರಿಹಾರ) ನೀಡಿದ್ದನ್ನು ಉಲ್ಲೇಖಿಸಲಾಯಿತು. ಈ ಕ್ಷೇತ್ರದಲ್ಲಿ ನಡೆದ 10 ಚುನಾವಣೆಗಳಲ್ಲಿ 8 ಚುನಾವಣೆಗಳಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದರೆ ಉಳಿದ ಎರಡು ಸಾರಿ ಜೆಡಿಎಸ್ ಗೆಲುವನ್ನು ಸಾಧಿಸಿದರೆ ಈ ಭಾರಿಯೂ ಸಹಾ ಬಿಜೆಪಿ ಜೆಡಿಎಸ್ ಮೃತ್ರಿ ಅಭ್ಯರ್ಥಿ ಗೆಲುವು ಸಾದಿಸಬೇಕಿದೆ. ಇದಕ್ಕೆ ನಿಮ್ಮ ಎಲ್ಲಾ ರೀತಿಯ ಸಹಕಾರ ಅಗತ್ಯವಾಗಿದೆ ಎಂದರು.

ಚುನಾವಣೆಯಲ್ಲಿ ಮತ ಚಲಾಯಿಸುವಾಗ ಯಾವುದೇ ಗೊಂದಲವಿಲ್ಲದೆ, ಮತಗಟ್ಟೆಯಲ್ಲಿ ನೀಡುವ ಪೆನ್ ಮಾತ್ರ ಬಳಸಿ ಅಭ್ಯರ್ಥಿಯ ಹೆಸರು ಹಾಗೂ ಭಾವಚಿತ್ರದ ಮುಂದಿನ ಪೆಟ್ಟಿಗೆಯಲ್ಲಿ ‘1’ (ಒಂದು) ಎಂದು ಬರೆಯಬೇಕು. ಬೇರೆ ಯಾವುದೇ ಗುರುತುಗಳನ್ನು ಮಾಡಬಾರದು ಎಂದು ಸ್ಪಷ್ಟಪಡಿಸಲಾಯಿತು.

ಆಗ್ನೇಯ ಪದವೀಧರ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಮಾತನಾಡಿ, ಎನ್‍ಡಿಎ ಒಕ್ಕೂಟದ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಶಿಕ್ಷಣ ಸಂಸ್ಥೆಗಳ ಮತ್ತು ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವುದಾಗಿ ತಿಳಿಸಿ, ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಏರ್ಪಟ್ಟಿರುವುದರಿಂದ ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಎನ್‍ಡಿಎ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವುದರ ಮೂಲಕ ಶಿಕ್ಷಣ ಕ್ಷೇತ್ರ ಹಾಗೂ ಪದವೀಧರರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ನೀಡ ಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ರಾಘವೇಂದ್ರ ಸ್ಕೂಲ್ ಆಫ್ ನರ್ಸಿಂಗ್‍ನ ಶ್ರೀನಿವಾಸ್ ಅನುಪಮ ವಿದ್ಯಾ ಸಂಸ್ಥೆಯ ಭಾಸ್ಕರ್, ರಾಮಮೂರ್ತಿ, ಡಾ,ಸಿದ್ಧಾರ್ಥ ಗುಂಡಾರ್ಪಿ, ಮಲ್ಲಿಕಾರ್ಜನ್, ಮೋಹನ್, ವೆಂಕಟೇಶ್ ಯಾದವ್, ಶ್ರೀಮತಿ ರೇಖಾ, ನಾಗರಾಜ್ ಬಸಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *