ಇಂದಿನ ಪಂಚಾಂಗ
ಶಾಲಿವಾಹನ ಶಕೆ 1949, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು. ಭಾದ್ರಪದ ಮಾಸದ ಕೃಷ್ಣ ಪಕ್ಷದ ಷಷ್ಠಿ ತಿಥಿ ಹಾಗೂ ಶುಕ್ರವಾರದ ದಿನವಿದು. ಸೌರಮಾನದ ಪ್ರಕಾರ ಕನ್ಯಾ ಮಾಸ. ಮೃಗಶಿರಾ ನಿತ್ಯನಕ್ಷತ್ರ, ಹಸ್ತಾ ಮಹಾನಕ್ಷತ್ರ, ಸಿದ್ಧಿ ಯೋಗ ಮತ್ತು ವಣಿಜ ಕರಣ ಇರಲಿದೆ.
- ಸೂರ್ಯೋದಯ: ಬೆಳಗ್ಗೆ 06:09
- ಸೂರ್ಯಾಸ್ತ: ಸಂಜೆ 06:07
- ರಾಹುಕಾಲ: ಬೆಳಗ್ಗೆ 10:39 ರಿಂದ 12:09
- ಯಮಗಂಡ ಕಾಲ: ಮಧ್ಯಾಹ್ನ 15:08 ರಿಂದ 16:38
- ಗುಳಿಕ ಕಾಲ: ಬೆಳಗ್ಗೆ 07:40 ರಿಂದ 09:09
ದ್ವಾದಶ ರಾಶಿಗಳ ಇಂದಿನ ಭವಿಷ್ಯ
- ಮೇಷ ರಾಶಿ: ಕಚೇರಿಯ ಲೆಕ್ಕಪತ್ರಗಳಲ್ಲಿ ಸಣ್ಣಪುಟ್ಟ ಗೊಂದಲಗಳು ಎದುರಾಗಬಹುದು. ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಳಜಿ ವಹಿಸುವಿರಿ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದ್ದು, ಇದೇ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಿ. ಆಸ್ತಿ ಮಾರಾಟದ ಬಗ್ಗೆ ಒಲವು ಮೂಡಲಿದೆ. ಪರರ ಬಗ್ಗೆ ಟೀಕೆ ಮಾಡುವುದು ಅಥವಾ ಋಣಾತ್ಮಕವಾಗಿ ಮಾತನಾಡುವುದನ್ನು ಬಿಟ್ಟು ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಿ.
- ವೃಷಭ ರಾಶಿ: ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹಿಂದೇಟು ಹಾಕುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸು ವಿಳಂಬವಾಗಬಹುದು. ಸಂಗಾತಿಯ ಒಂದೇ ರೀತಿಯ ಮಾತುಗಳು ಕಿರಿಕಿರಿ ಉಂಟುಮಾಡಬಹುದು. ಸೋಮಾರಿತನವನ್ನು ಬಿಟ್ಟುಬಿಡಿ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಅನಿರೀಕ್ಷಿತ ಘಟನೆಗಳು ನೆಮ್ಮದಿ ಕೆಡಿಸುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಿ.
- ಮಿಥುನ ರಾಶಿ: ಅಸಹಾಯಕತೆಯ ಭಾವನೆಯು ಕೋಪವಾಗಿ ಹೊರಹೊಮ್ಮಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಹಾದಿಯಲ್ಲಿ ಬರುವ ಅಡೆತಡೆಗಳಿಗೆ ಬೇರೆಯವರನ್ನು ದೂರುವುದು ವ್ಯರ್ಥ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಆಪ್ತರೊಂದಿಗೆ ಸಮಾಲೋಚನೆ ನಡೆಸುವುದು ಒಳಿತು. ಸೌಂದರ್ಯವರ್ಧಕಗಳಿಗಾಗಿ ಹಾಗೂ ಅನಗತ್ಯ ವಿಚಾರಗಳಿಗಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ.
- ಕರ್ಕಾಟಕ ರಾಶಿ: ಖಾಸಗಿ ವಲಯದಲ್ಲಿ ಉನ್ನತ ಸ್ಥಾನದ ಜವಾಬ್ದಾರಿ ಒದಗಿಬರಬಹುದು. ಸಾಲದ ಬಾಧೆಯಿಂದ ಮುಕ್ತರಾಗಿ ನೆಮ್ಮದಿ ಕಾಣುವಿರಿ. ನಿಮ್ಮ ವಿನಯಶೀಲತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಕೃಷಿಕರಿಗೆ ಸಾಧಾರಣ ಲಾಭ ನಿರೀಕ್ಷಿತ. ಇತರರ ಮೇಲೆ ವಿನಾಕಾರಣ ಕೋಪಗೊಳ್ಳುವುದನ್ನು ತಪ್ಪಿಸಿ. ದೂರದ ಪ್ರಯಾಣ ಮುಂದೂಡುವುದು ಹಾಗೂ ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಉತ್ತಮ.
- ಸಿಂಹ ರಾಶಿ: ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಸಾಮರ್ಥ್ಯವು ಕೆಲವೊಮ್ಮೆ ವಿಮರ್ಶೆಗೆ ಗುರಿಯಾಗಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಇದ್ದರೂ ಏಕಾಗ್ರತೆ ಕಾಯ್ದುಕೊಳ್ಳುವುದು ಕಷ್ಟವಾಗಬಹುದು. ವಿನಾಕಾರಣ ಇತರರನ್ನು ಅನುಮಾನಿಸುವ ಪ್ರವೃತ್ತಿ ಬಿಡಿ. ನಿಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಾಗೂ ಸೂಕ್ತ ಸ್ಥಳದಲ್ಲಿ ವ್ಯಕ್ತಪಡಿಸಿ. ಸುಂದರ ಹಾಗೂ ಸಕಾರಾತ್ಮಕ ಪರಿಸರದಲ್ಲಿ ಕಾಲ ಕಳೆಯುವುದರಿಂದ ಮನಸ್ಸಿಗೆ ಪ್ರಫುಲ್ಲತೆ ಸಿಗಲಿದೆ.
- ಕನ್ಯಾ ರಾಶಿ: ಮೂರನೇ ವ್ಯಕ್ತಿಯ ಮಾತುಗಳನ್ನು ಕೇಳಿ ಕುಟುಂಬದಲ್ಲಿ ಅಶಾಂತಿ ಸೃಷ್ಟಿಸಿಕೊಳ್ಳದಿರಿ. ಎಲ್ಲರನ್ನೂ ಒಂದೇ ದೃಷ್ಟಿಕೋನದಿಂದ ಅಳೆಯುವುದು ಸರಿಯಲ್ಲ. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಕಣ್ಮುಚ್ಚಿ ಯಾರನ್ನೂ ನಂಬಲು ಹೋಗಬೇಡಿ. ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸಿದರೆ ಉತ್ತಮ ಅವಕಾಶಗಳು ನಿಮ್ಮ ಕೈಸೇರಲಿವೆ.
- ತುಲಾ ರಾಶಿ: ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವಿರಿ. ಅತಿಯಾದ ಮಮಕಾರವು ನಿಮಗೆ ಮುಳುವಾಗಬಹುದು. ನಿಮ್ಮ ತಪ್ಪು ಗ್ರಹಿಕೆಗಳಿಗೆ ಇತರರನ್ನು ಹೊಣೆಗಾರರನ್ನಾಗಿ ಮಾಡಬೇಡಿ. ಆದಾಯಕ್ಕೆ ಹಲವು ಮಾರ್ಗಗಳಿದ್ದರೂ ಅತೃಪ್ತಿ ಕಾಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಕೊಂಚ ನೆಮ್ಮದಿ ಸಿಗಲಿದ್ದು, ಅನಿರೀಕ್ಷಿತ ಯಶಸ್ಸು ಸಂತಸ ತರಲಿದೆ. ಭಾವನಾತ್ಮಕವಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
- ವೃಶ್ಚಿಕ ರಾಶಿ: ಖರ್ಚುಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿದರೂ ಹಣವು ಸುಲಭವಾಗಿ ಖರ್ಚಾಗಬಹುದು. ಮನೆಗೆ ಅಗತ್ಯವಿರುವ ವಸ್ತುಗಳ ಖರೀದಿ ಪಟ್ಟಿ ಬೆಳೆಯಲಿದೆ. ನೂತನ ವಸ್ತುಗಳನ್ನು ಖರೀದಿಸುವ ಯೋಗವಿದೆ. ನಿಮ್ಮ ವಾದವೇ ಸರಿ ಎಂಬ ಹಠದ ಸ್ವಭಾವವು ಆಪ್ತರಿಗೆ ಬೇಸರ ತರಿಸಬಹುದು. ನಿಮ್ಮ ಕೆಲಸದ ಜವಾಬ್ದಾರಿಯನ್ನು ಇತರರಿಗೆ ವಹಿಸಿ ಕೊಂಚ ವಿಶ್ರಾಂತಿ ಪಡೆಯುವಿರಿ. ಅನಾರೋಗ್ಯಕರ ಆಹಾರ ಸೇವನೆಯಿಂದ ದೂರವಿರಿ.
- ಧನು ರಾಶಿ: ಸ್ವಸಾಮರ್ಥ್ಯವಿಲ್ಲದೆ ಸವಾಲುಗಳನ್ನು ಎದುರಿಸುವುದು ಕಷ್ಟವಾಗಬಹುದು. ಅಪ್ರಸ್ತುತ ವಿಚಾರಗಳ ಬಗ್ಗೆ ಚರ್ಚೆ ಮಾಡುವುದನ್ನು ಕಡಿಮೆ ಮಾಡಿ. ದೀರ್ಘ ಪ್ರಯಾಣದಿಂದಾಗಿ ದೇಹಕ್ಕೆ ಆಯಾಸವಾಗುವ ಸಾಧ್ಯತೆ ಇದೆ. ಐಷಾರಾಮಿ ವಸ್ತುಗಳ ಖರೀದಿಗೆ ಹೆಚ್ಚು ಒಲವು ತೋರುವಿರಿ. ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಕಷ್ಟು ಶ್ರಮಪಡಬೇಕಾಗುತ್ತದೆ.
- ಮಕರ ರಾಶಿ: ಯಾವುದೋ ಒಂದು ಅಂಜಿಕೆ ನಿಮ್ಮ ಕಾರ್ಯಗಳಿಗೆ ಅಡ್ಡಿಯಾಗಬಹುದು. ಉದ್ಯೋಗದ ನಿಮಿತ್ತ ದೂರದ ಊರಿನಲ್ಲಿದ್ದರೂ ತಾಯ್ನಾಡಿನ ನೆನಪು ತೀವ್ರವಾಗಿ ಕಾಡಲಿದೆ. ಆಪ್ತ ಸ್ನೇಹಿತನ ಕಷ್ಟಕ್ಕೆ ನೆರವಾಗುವಿರಿ. ಸಾಲದ ಬಾಧೆಯ ಬಗ್ಗೆ ಚಿಂತೆ ಇರಲಿದ್ದು, ಉಳಿತಾಯದ ಕಡೆಗೆ ಹೆಚ್ಚು ಗಮನ ಹರಿಸುವಿರಿ. ಸಣ್ಣಪುಟ್ಟ ವಿಚಾರಗಳಿಗೂ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬರಬಹುದು.
- ಕುಂಭ ರಾಶಿ: ಸರ್ಕಾರಿ ಉದ್ಯೋಗದ ಪ್ರಯತ್ನಗಳಿಗೆ ಸಣ್ಣ ಮಟ್ಟದ ಪ್ರಗತಿ ಕಾಣಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಎಚ್ಚರಿಕೆ ಇರಲಿ. ನಿಮ್ಮದೇ ಆದ ಮಿತಿಗಳನ್ನು ಹಾಕಿಕೊಂಡು ಕೆಲಸ ಮಾಡುವಿರಿ. ಸೂಕ್ತ ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರಲಿದೆ. ಕ್ಲಿಷ್ಟಕರ ವಿಚಾರಗಳನ್ನು ಸರಳವಾಗಿ ವಿವರಿಸುವ ನೈಪುಣ್ಯತೆ ನಿಮ್ಮಲ್ಲಿದೆ. ಹಿರಿಯರ ಸಲಹೆಗಳನ್ನು ಪಾಲಿಸಲು ಹಿಂದೇಟು ಹಾಕುವಿರಿ.
- ಮೀನ ರಾಶಿ: ನಿಮ್ಮನ್ನು ಭೇಟಿಯಾಗಲು ಬಂದವರಿಗೆ ನಿಮ್ಮ ನಡವಳಿಕೆ ಅಗೌರವ ತೋರಿದಂತೆ ಭಾಸವಾಗಬಹುದು. ಕೇವಲ ಲಾಭದ ಉದ್ದೇಶದಿಂದ ಮಾತ್ರ ಕೆಲಸ ಮಾಡಬೇಡಿ. ನಿರಂತರವಾಗಿ ದುಡಿಯುವ ಬದಲು ಸ್ವಲ್ಪ ಬಿಡುವು ಮಾಡಿಕೊಳ್ಳಿ. ಸುಮ್ಮನೆ ಕುಳಿತು ನಕಾರಾತ್ಮಕವಾಗಿ ಯೋಚಿಸುವುದನ್ನು ಬಿಡಿ. ನೀವು ಹಾಕಿಕೊಂಡ ಯೋಜನೆಗಳು ಅಂದುಕೊಂಡಂತೆ ಕಾರ್ಯಗತವಾಗದಿರುವ ಸಾಧ್ಯತೆ ಇದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j