ಚಿತ್ರದುರ್ಗ ಅ. 02
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ದೇಶವನ್ನು ಯಾವುದೇ ಹಿಂಸೆ, ರಕ್ತಪಾತ ಇಲ್ಲದೆ ಬರೀ ಉಪವಾಸ ಅಹಿಂಸೆಯಿಂದ ದೇಶವನ್ನು ಬ್ರಟಿಷರ ದಾಸ್ಯದಿಂದ ಮುಕ್ತ ಮಾಡಿದ ಕೀರ್ತಿ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತದೆ ಎಂದು ನಗರಾಭೀವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾನ್ ದೇಶಪ್ರೇಮಿಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯಪುರುಷರುಗಳ ಜಯಂತಿಯಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಗಾಂದೀಜಿಯವರ ತಾಳ್ಮೆಯಿಂದ ನಮ್ಮ ಪಾಲಿನ ಹಕ್ಕುಗಳನ್ನು ಮಂಡಿಸುವುದರ ಮೂಲಕ ಉಪವಾಸವನ್ನು ಮಾಡಿ ಬ್ರಟಿಷರ ದಾಸ್ಯದಿಂದ ಭಾರತವನ್ನು ಸ್ವಾಂತ್ರತ್ಯಗೊಳಿಸಿದರು. ಯಾವುದೇ ರಕ್ತಪಾತ, ಹಿಂಸೆ ಮಾಡದೇ ಅಹಿಂಸೆಯ ಹೋರಾಟದ ಮೂಲಕವೇ ದೇಶವನ್ನು ಅವರ ಕಷಿ ಮುಷ್ಟಿಯಿಂದ ಬಿಡುಗಡೆಗೊಳಿಸಿದ ಕೀರ್ತೀ ಅವರಿಗೆ ಸಲ್ಲುತ್ತದೆ ಎಂದರು.
ಗಲಾಟೆಯನ್ನು ಮಾಡಿ ನಮ್ಮ ಪಾಲಿನ ಹಕ್ಕುಗಳನ್ನು ಕೇಳುವುದು ಇಂದಿನ ಪದ್ದತಿಯಾಗಿದೆ ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಗಾಂದೀಜಿಯವರ ಯಾವುದೇ ರೀತಿಯ ಹಿಂಸೆಯ ಮಾರ್ಗವನ್ನು ಅನುಸರಿದೇ ಅಹಿಂಸೆಯ ಮೂಲಕವೇ ದೇಶವನ್ನು ಸ್ವಾತಂತ್ರ್ಯಗೊಳಿಸದರು. ನಾವು ಯಾವುದೇ ರೀತಿಯ ಬೇಡಿಕೆಯನ್ನು ಕೇಳುವಾಗ ಕೇಳುವ ರೀತಿ ಚನ್ನಾಗಿ ಇದ್ದಾಗ ಅಗ ಮಾತ್ರ ನಮ್ಮ ಬೇಡಿಕೆ ಈಡೇರಲು ಸಾಧ್ಯವಿದೆ ಇದು ಬಿಟ್ಟು ನಾವು ಕೇಳುವ ರೀತಿಯ ಬೇರೇ ರೀತಿಯಲ್ಲಿ ಇದ್ದರೇ ಅಗ ನಮ್ಮ ಬೇಡಿಕೆಗಳು ಈಡೇರುವಲ್ಲಿ ತಡವಾಗುತ್ತವೆ ದೇಶಕ್ಕಾಗಿ ಹೋರಾಟವನ್ನು ಮಾಡಿದ ಗಾಂಧೀಜಿಯವರನ್ನು ಕೊಲೆ ಮಾಡಿದರು. ಅವರ ನಮಗೆ ನೀಡಿದ ಸಂದೇಶಗಳನ್ನು ಅರಿತು ಅದರಂತೆ ನಡೆಯುವುದರ ಮೂಲಕ ಅವರ ಜಯಂತಿಗೆ ಅರ್ಥವನ್ನು ನೀಡಬೇಕಿದೆ ಎಂದು ಸರ್ದಾರ್ ತಿಳಿಸಿದರು.
ಕುಮಾರಗೌಡ ಮಾತನಾಡಿ, ಗಾಂಧೀಜಿಯವರ ಹೋರಾಟಕ್ಕೆ ಮೂಲ ಪ್ರೇರಣೆ ಅಸ್ಪøಶ್ಯತೆ, ಅದು ದಕ್ಷಿಣ ಆಫ್ರಿಕಾದಲ್ಲಿ. ಅಂದಿನ ಅವಮಾನ ಗಾಂಧೀಜಿಯವರನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಗಾಂಧೀಜಿಯವರಿಗೆ ರಾಷ್ಟ್ರಪಿತ ಎಂದು ಮೊದಲು ಸಂಬೋಧಿಸಿದವರು ಸುಭಾಷ್ ಚಂದ್ರಬೋಸ್ ಅವರು. ಹಿಂದಿನವರು ತಮ್ಮ ಆದರ್ಶದ ದಾರಿಯ ಮೂಲಕ ಸೈ ಎನಿಸಿಕೊಂಡು ವೈಯಕ್ತಿಕ ಬದುಕಿನಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಎಂದೂ ತಮ್ಮ ಜಾತಿಯ ಸೋಂಕನ್ನ ತಾಗಿಸಿಕೊಳ್ಳದೆ ಸಮಾಜಕ್ಕೆ ನಿರ್ವಂಚನೆಯಿಂದ ಹೋರಾಡಿದ ಮಹಾಪುರುಷರ ಜಯಂತಿ ಮಹೋತ್ಸವಗಳು ಅವರವರ ಜಾತಿಯವರು ಸೇರಿ ಆಚರಿಸಬಾರದು. ಅವರು ಜಾತಿ, ಧರ್ಮಗಳ ಎ¯್ಲÉೀ ಮೀರಿದವರು. ಅವರನ್ನು ಜಾತಿ ಕಟ್ಟಳೆಯಲ್ಲಿ ಸಿಲುಕಿಸಬಾರದೆಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಲ್ಲಾಸ್ ಕಾರೇಹಳ್ಳಿ ಮಾತನಾಡಿ, ಪುಣ್ಯ ಪುರುಷರ ಜಯಂತಿ ಈಗಿನ ಪೀಳಿಗೆಯವರನ್ನು ಜೊತೆಗಿಟ್ಟುಕೊಂಡು ಮಾಡಿದರೆ ಅವರಿಗೂ ಹಿಂದಿನವರ ಸಾಧನೆ ಅವರು ನಾಡಿಗೆ ಸಲ್ಲಿಸಿರುವ ಕೊಡುಗೆಗಳನ್ನು ಅರ್ಥೈಸಿದಂತಾಗುತ್ತದೆ. ಅವರುಗಳ ಜೀವನ ಮೌಲ್ಯವನ್ನ ಕೇವಲ ವೈಯಕ್ತಿಕ ವಾಗಿ ಅನುಸರಿಸಿದರೆ ಸಾಲದು, ಅವರ ಆದರ್ಶ ಸಾರ್ವಜನಿಕರಿಗೂ ಅರ್ಥವಾಗುವ ಕ್ರಮವಾಗಬೇಕಿದೆ ಗಾಂಧೀಜಿಯರು ಸತ್ಯ ಅಹಿಂಸೆ ಎಂಬ ಆದರ್ಶಗಳನ್ನಿಟ್ಟುಕೊಂಡು ಸತ್ಯಾಗ್ರಹದ ಮೂಲಕ ಹೋರಾಟ ನಡೆಸಿ, ಅದನ್ನು ಬೇರೆಯವರು ಅನುಸರಿಸಲು ಪ್ರೇರಣೆ ನೀಡಿ, ಅದರಂತೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಹಾಗೂ ಲಿಂಗಭೇದವಿಲ್ಲದೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಸ್ಪೂರ್ತಿಯಾದರು. ಅದರಂತೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆಯ ಸಾಕಾರ ಮೂರ್ತಿಯಾಗಿದ್ದರು. ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದ ಪ್ರಧಾನಿ ಎಂದು ತಿಳಿಸಿದರು.
ಮಾಜಿ ಆದ್ಯಕ್ಷರಾದ ಜಿ.ಎಸ್.ಮಂಜುನಾಥ್ ಮಾತನಾಡಿ, ಗಾಂಧೀಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ಶಾಂತಿಯಿಂದ ಹೊರಡಿದರು. ಹಾಗು ಸ್ವಾತಂತ್ರ್ಯಾ ನಂತರ ಸದೃಢ-ಸಶಕ್ತ ಭಾರತದ ಬಗ್ಗೆ ಬಹಳಷ್ಟು ಕನಸನ್ನು ಕಂಡಿದ್ದರು. ಗ್ರಾಮಸ್ವರಾಜ್ಯ, ಆಸ್ಪಶ್ಶತಾ ನಿವಾರಣೆ, ಸಮಾನತೆ, ವ್ಶಸನಮುಕ್ತ ಭಾರತ, ಮಹಿಳಾ ಸಬಲೀಕರಣ, ಇವುಗಳು ಅನುಷ್ಠನಕ್ಕೆ ಬರಬೇಕೆಂದು ಬಯಸಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಂದಿನ ದೇಶದ ಪ್ರಧಾನಿಮಂತ್ರಿ ಆಗಿದ್ದಾಗ ಚೀನಾ ಮತ್ತು ಭಾರತದ ನಡುವೆ ಯುದ್ದ ನೆಡೆದು ಬಹಳ ಸಂದಿಗ್ದ ಪರಿಸ್ಥಿತಿಯ ಸಂದರ್ಭ. ಆ ಸ್ಥಿತಿಯಲ್ಲಿ ದೇಶವನ್ನು ರP್ಷÀಣೆ ಮತ್ತು ಆಹಾರದ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿದ್ದ ಅವರು ಸರಳ, ನಿಷ್ಟೆ ಹಾಗೂ ಪ್ರಾಮಾಣಿಕವಾಗಿ ಆಡಳಿತವನ್ನು ನಡೆಸಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಜ್‍ಪೀರ್ ಮಾತನಾಡಿ, ಯಾವುದೇ ಪುಣ್ಯ ಪುರುಷರನ್ನ ಅವರ ಜಯಂತಿ ಇತರೆ ಸಂದರ್ಭದಲ್ಲಿ ಅವರ ಮೌಲ್ಯಗಳನ್ನು ಹೇಳುವುದರ ಜೊತೆಗೆ ಅವರು ನಾಡಿಗೆ ಕೊಟ್ಟ ಅಮೂಲ್ಯ ಕೊಡುಗೆಗಳನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ. ಗಾಂಧೀಜಿಯವರು ಬೋಧನೆ ಮಾಡಲಿಲ್ಲ ಆದರ್ಶವಾಗಿ ಬದುಕಿದರು. ಅದರಲ್ಲಿನ ಒಂದಂಶವನ್ನು ನಾವು ಬದುಕಿದರೆ ಸಾಕು, ಶಾಸ್ತ್ರೀಜಿ ಅವರು ಮಹಾನ್ ದೇಶ ಪ್ರೇಮಿಗಳು. ಆಹಾರ ಭದ್ರತೆ, ಸರಳತೆಯ ಮಹಾಮೇರು ಆಗಿದ್ದ ಅವರು ಮಾನವೀ ಯತೆಯ ಮಹಾಪುರುಷ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇವರು ಸರಳ ಸತ್ಯ ಜೀವನವನ್ನು ನಡೆಸಿದವರು. ಇಂತಹ ಮಹನೀಯರ ಅಂತ್ಯ ದುರಂತದಲ್ಲಿ ಆಗಿದ್ದು ಈ ದೇಶದ ದುರಂತ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿಯ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್, ಮೈಲಾರಪ್ಪ, ಉಪಾಧ್ಯಕ್ಷರಾದ ರವಿಕುಮಾರ್, ಗ್ಯಾರೆಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ ಗಂಜಿಗಟ್ಟೆ, ಒಬಿಸಿ ಅಧ್ಯಕ್ಷ ಎನ್.ಡಿ.ಕುಮಾರ, ಮದುಗೌಡ,ಸೇವಾದಳದ ಭೋತೇಶ್, ನ್ಯಾಯಾವಾದಿ ಸುದರ್ಶನ್, ಜಗದೀಶ್, ನಗರಾಧ್ಯಕ್ಷ ಲಕ್ಷ್ಮೀಕಾಂತ್, ಚೋಟು, ಖುದ್ದುಸ್, ಆರತಿ ಮಹಡಿ ಶಿವಮೂರ್ತಿ, ಸಂದೀಪ್, ಅಲ್ಲಾಭಕ್ಷ್ಮೀ, ಎಸ್.ಟಿ. ಘಟಕದ ಅಧ್ಯಕ್ಷ ಮಂಜುನಾಥ್, ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j