ಚಿತ್ರದುರ್ಗ:
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರದಲ್ಲಿ ನಡೆಯುತ್ತಿರುವ ಗಣಿ ಭೂಬಾಧಿತ ಪ್ರದೇಶದ ಪರಿಸರ ಸಂರಕ್ಷಣೆ ಹಾಗೂ ಜನರ ಬದುಕಿನ ಪುನಶ್ಚೇತನಕ್ಕೆ ಆಗ್ರಹಿಸಿ ನಡೆಯುತ್ತಿರುವ ರೈತರ 60 ದಿನಗಳ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಬೆಂಬಲ ಸೂಚಿಸಲಿದ್ದಾರೆ.

ಗಣಿ ಭೂಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಕರ್ನಾಟಕ, ರಾಜ್ಯ ರೈತ ಸಂಘ, ಕರ್ನಾಟಕ ಭಾಗ್ಯ ಗಣಿ ಬಾಧಿತ ಪ್ರದೇಶ ಹೋರಾಟ ಸಮಿತಿ ಚಿತ್ರದುರ್ಗ ಹಾಗೂ ಭೀಮಸಮುದ್ರ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವ ಸಲುವಾಗಿ ಎಸ್.ಆರ್. ಹಿರೇಮಠ ಅವರು ಸೋಮವಾರ, ಅಕ್ಟೋಬರ್ 5ರಂದು ಭೀಮಸಮುದ್ರಕ್ಕೆ ಆಗಮಿಸಲಿದ್ದಾರೆ ಎಂದು ರೈತ ಸಂಘದ ಮುಖಂಡರು ತಿಳಿಸಿದ್ದಾರೆ.
ಎಸ್.ಆರ್. ಹಿರೇಮಠ ಅವರೊಂದಿಗೆ ರಾಜ್ಯದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಹ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದು, ಗಣಿ ಬಾಧಿತ ಪ್ರದೇಶಗಳ ಪರಿಸರ, ಕೃಷಿ ಭೂಮಿ ಹಾಗೂ ಜನರ ಬದುಕಿನ ಸಮಸ್ಯೆಗಳ ಕುರಿತು ಧ್ವನಿ ಎತ್ತಲಿದ್ದಾರೆ.
ಈ 60 ದಿನಗಳ ಹೋರಾಟದಲ್ಲಿ ರಾಜ್ಯ ಸಂಚಾಲಕರಾದ ಡಿ. ನಾಗಲಕ್ಷ್ಮೀ, ರವಿಶಂಕರ್ ರೆಡ್ಡಿ, ಎಸ್‌ಆರ್‌ಎಸ್ ಪಕ್ಷದ ಗೌರವಾಧ್ಯಕ್ಷರಾದ ಜೋಗೇನಹಳ್ಳಿ ಗುರುಮೂರ್ತಿ, ಕೆ. ಸೋಮಶೇಖರ್, ತಾಲ್ಲೂಕು ಅಧ್ಯಕ್ಷರಾದ ಶ್ರೀದೇವಿ, ಬಿ. ದುರ್ಗಾ ರಮೇಶ್, AIMSS ಮಹಿಳಾ ಸಂಘಟನೆ ಘಟಕದ ಶ್ರೀಮತಿ ಗಿರಿಜಮ್ಮ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಭೀಮಸಮುದ್ರ ರೈತ ಸಂಘದ ವ್ಯಾಪ್ತಿಯ ವಿ. ಪಾಳ್ಯ, ಕಟ್ಟೆ ಮಳಲಿ, ಬೊಮ್ಮೇನಹಳ್ಳಿ, ಬೆಟ್ಟದನಾಗೇನಹಳ್ಳಿ ಹಾಗೂ ಕಡ್ಲೆಗುದ್ದು ಸೇರಿದಂತೆ ವಿವಿಧ ಗ್ರಾಮಗಳ ರೈತರು ಕೂಡ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷರಾದ ಶಂಕರಮೂರ್ತಿ, ಡಿ. ಪ್ರಸನ್ನ ಕುಮಾರ್ ಹಾಗೂ ಶೈಲೇಂದ್ರ ಪಟೇಲ್ ತಿಳಿಸಿದ್ದಾರೆ.
ಗಣಿ ಚಟುವಟಿಕೆಗಳಿಂದಾಗಿ ಭೂಮಿ, ಪರಿಸರ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಸರ್ಕಾರದ ಗಮನ ಸೆಳೆಯುವುದು ಮತ್ತು ಗಣಿ ಬಾಧಿತ ಪ್ರದೇಶಗಳ ಜನರ ಬದುಕಿನ ಪುನಶ್ಚೇತನಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದು ಹೋರಾಟದ ಪ್ರಮುಖ ಉದ್ದೇಶವಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
🟣 ShareChat
Follow on ShareChat
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು