ಡಾ. ಕೆ.ಎಂ. ವೀರೇಶ್ ನಿಧನಕ್ಕೆ ಚಿತ್ರದುರ್ಗದಲ್ಲಿ ನುಡಿನಮನ: ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆ ಸ್ಮರಿಸಿದ ಗಣ್ಯರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಅ. 16

ಕೆ.ಎಂ.ವೀರೇಶ್ ಅವರು ಅಪಾರ ಸೌಹಾರ್ದತೆ, ಸಮರ್ಪಣಾ ಮನೋಭಾವ ಮತ್ತು ಶ್ರಮದಿಂದ ಮುರುಘಾ ಮಠ ಹಾಗೂ ಶೈಕ್ಷಣಿಕ ರಂಗಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆ ಸದಾ ಸ್ಮರಣೀಯವಾಗಿದ್ದು, ಅವರ ಅಗಲಿಕೆ ಸಂಸ್ಥೆಗೆ ಹಾಗೂ ಎಲ್ಲರಿಗೂ ದೊಡ್ಡ ನಷ್ಟವನ್ನುಂಟುಮಾಡಿದೆ ಎಂದು ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ಕೆ.ಎಂ.ವೀರೇಶ್ ಅವರು ಸ್ಮರಣೆ ಮಾಡಿದರು.

ವೀರಶೈವ ಸಮಾಜ ಹಾಗೂ ಜಿಲ್ಲಾ ಜಂಗಮ ಸಮಾಜದ ಸಂಯುಕ್ತಾಶ್ರಾಯದಲ್ಲಿ ಶಿಕ್ಷಣ ಪ್ರೇಮಿ, ಕಸಾಪ ರಾಜ್ಯ ಉಪಾಧ್ಯಕ್ಷರು ಬಾಪೂಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಸಮಾಜ ಸೇವಕರಾದ ಲಿಂ.ಡಾ. ಕೆ.ಎಂ.ವಿರೇಶ್ ರವರಿಗೆ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುರುಘಾಮಠದ ಸೇವೆ ಹಾಗೂ ವಿವಿಧ ಕಾರ್ಯಗಳಲ್ಲಿ ಅವರು ಸಲ್ಲಿಸಿದ ಪ್ರಾಮಾಣಿಕ ಸೇವೆ ಮತ್ತು ಅವರ ಒಡನಾಟವನ್ನು ಸ್ಮರಿಸುತ್ತಾ, ಅವರು ಸಂಸ್ಥೆಯ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕ ವಲಯದ ವಿಸ್ತರಣೆಗೆ ನೀಡಿದ ಕೊಡುಗೆಯನ್ನು ಗಣ್ಯರು ಮುಕ್ತಕಂಠದಿಂದ ಪ್ರಶಂಸಿಸಿ ಅವರು ರಾಣೆಬೆನ್ನೂರಿನಿಂದ ಬಂದಾಗ ಕೇವಲ ಗುಮಾಸ್ತರಾಗಿದ್ದು ಚಿತ್ರದುರ್ಗಕ್ಕೆ ಬಂದ ನಂತರ ವೀರೇಶ್ ಅವರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಧಾರವಾಡ, ರಾಣೆಬೆನ್ನೂರು, ತರೀಕೆರೆ,ಮಹಿಳಾ ಕಾಲೇಜು ಹಾಗೂ ಇವನಿಂಗ್ ಕಾಲೇಜು ಸೇರಿದಂತೆ ಅನೇಕ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಪ್ರಮುಖ ಕಾರಣರಾಗಿದ್ದರು ಎಂದು ವಿವರಿಸಿದರು.

ವೀರೇಶ್ ಅವರಲ್ಲಿ ವಿಶೇಷ ಗುಣವಿತ್ತು ಅವರು ಲಂಚಕ್ಕಾಗಿ ಎಂದಿಗೂ ಹಣ ಹೆಚ್ಚು ಖರ್ಚು ಮಾಡುತ್ತಿರಲಿಲ್ಲ ಮತ್ತು ಆದಷ್ಟು ಕಡಿಮೆ ಖರ್ಚಿನಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕೆಲಸಗಳನ್ನು ಮಾಡಿಸಿಕೊಂಡು ಬರುತ್ತಿದ್ದರು ಅವರಿಗೆ ನಾಟಕ ಮತ್ತು ಸಂಗೀತದಂತಹ ಕಾರ್ಯಕ್ರಮಗಳೆಂದರೆ ಅಪಾರ ಒಲವಿತ್ತು. ಸ್ವತಃ ಪಾತ್ರಗಳನ್ನು ಮಾಡುತ್ತಾ ಇತರರಿಗೂ ಪ್ರೋತ್ಸಾಹ ನೀಡುತ್ತಿದ್ದರು. ಬಾಂಬೆ ಸೇರಿದಂತೆ ವಿವಿಧ ಸ್ಥಳಗಳಿಗೆ ಬಸ್ಸಿನಲ್ಲಿ ತೆರಳಿ ನಾಟಕ ಪ್ರದರ್ಶನಗಳನ್ನು ಯಶಸ್ವಿಗೊಳಿಸಲಾಗಿದೆ ವೀರೇಶ್ ಅವರಲ್ಲಿ ಸೌಹಾರ್ದತೆ ಮತ್ತು ಸದ್ಭಾವನೆ ತುಂಬಿತ್ತು. ಯಾರೇ ನೌಕರರು ತಮಗೆ ಕಿರುಕುಳವಾಗುತ್ತಿದೆ ಅಥವಾ ಹಿಂಸೆಯಾಗುತ್ತಿದೆ ಎಂದು ಇಂದಿನ ವರೆಗೂ ದೂರು ನೀಡಿರಲಿಲ್ಲ. ಎಲ್ಲರನ್ನೂ ಸಮರ್ಥವಾಗಿ ಸಂಭಾಳಿಸಿಕೊಂಡು ಹೋಗುವ ದೊಡ್ಡ ಗುಣ ಅವರಲ್ಲಿತ್ತು ಅವರು ನಿಧನರಾಗುವುದಕ್ಕಿಂತ ಕೇವಲ 15 ದಿನಗಳ ಮುಂಚೆ ತಮ್ಮೂರಿಗೆ ಬಂದಿದ್ದಾಗ ವೈರಾಗ್ಯದ ಮಾತುಗಳನ್ನಾಡಿದ್ದರು. ಅವರ ಆರೋಗ್ಯದ ಬಗ್ಗೆ ಎಲ್ಲರೂ ಚೆನ್ನಾಗಿದೆ ಎಂದು ಭಾವಿಸಿದ್ದರೂ, ಅವರ ನಿಧನದ ಬಳಿಕ ಅವರ ಆರೋಗ್ಯ ಹಾಗೂ ಆಹಾರ ಪದ್ಧತಿಯ ಬಗ್ಗೆ ಕೆಲವು ಸ್ನೇಹಿತರು ಬೇಸರ ವ್ಯಕ್ತಪಡಿಸಿದರು.

ಸಾವು ಮತ್ತು ಹುಟ್ಟು ನಿಶ್ಚಿತವಾಗಿದ್ದು, ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಆದರೆ ವಿರೇಶ್ ಅವರು ಎಲ್ಲರನ್ನೂ ಅಗಲಿರುವುದು ದುಃಖಕರ ಸಂಗತಿಯಾಗಿದೆ ವೀರೇಶ್ ಅವರು ಎಂದಿಗೂ ಯಾರಿಗೂ ಆಕ್ರೋಶಕಾರಿಯಾಗಿರದೆ, ಎಲ್ಲರನ್ನೂ ವಿರೋಧಗಳನ್ನು ಸಹಿಸಿಕೊಂಡು, ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತಿದ್ದ ಉತ್ತಮ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿಕೊಂಡು ವೀರೇಶ್ ಅವರು ಸಮಾಜಕ್ಕೆ ನೀಡಿದ ಒಳ್ಳೆಯ ಕೆಲಸಗಳು ಮತ್ತು ಅವರ ನೆನಪುಗಳು ಸದಾ ಜೀವಂತವಾಗಿರಲಿವೆ ಎಂದು ಎಸ್.ಕೆ.ಬಸವರಾಜನ್ ತಿಳಿಸಿದರು.

ನುಡಿ ನಮನ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ದಾವಣಗೆರೆ ಜಿಲ್ಲೆಯ ಹೆಬ್ಬಾಳುನ ಶ್ರೀ ರುದ್ರೇಶ್ವರ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಶ್ರೀಗಳು ಆರ್ಶಿವಚನದಲ್ಲಿ ಸಾಹಿತ್ಯ, ನಾಟಕ ಮತ್ತು ದಾಸೋಹ ಕ್ಷೇತ್ರಗಳಿಗೆ ವೀರೇಶ್ ರವರು ಸಲ್ಲಿಸಿದ ಕೊಡುಗೆ ಅಪಾರವಾಗಿದ್ದು, ಸಮಾಜ ಸೇವೆ ಹಾಗೂ ವಿದ್ಯಾದಾನಕ್ಕೆ ಅವರು ನೀಡಿದ ಆದ್ಯತೆ ಎಲ್ಲರಿಗೂ ಮಾದರಿಯಾಗಿದ್ದಾರೆ. ವೀರೇಶ್ ರವರು ಸಾಹಿತ್ಯ, ನಾಟಕ ಹಾಗೂ ದಾಸೋಹ ಪ್ರೇಮಿಗಳಾಗಿದ್ದು, ವಿದ್ಯಾದಾನ ಮಾಡಲು ಸದಾ ಮುಂದಿರುತ್ತಿದ್ದರು.ಅವರು ತಮ್ಮ ಜೀವಿತಾವಧಿಯಲ್ಲಿ ಸಮಾಜ ಸೇವೆಗೆ ಹೆಚ್ಚು ಒತ್ತು ನೀಡಿದ್ದರು ಮತ್ತು ಮಕ್ಕಳಿಗೆ ವಿದ್ಯಾಧಾನ ಮಾಡುವುದರ ಜೊತೆಗೆ ಪರಿಸರ ಪ್ರೇಮಿಯಾಗಿದ್ದರು ಎಂದರು.

ಮಠದ ಬಸಣ್ಣ ಹಾಗೂ ವೀರೇಶ್ ಅವರ ಜೋಡಿ ರಾಜ್ಯದಾದ್ಯಂತ ಶಾಲಾ-ಕಾಲೇಜುಗಳನ್ನು ಸ್ಥಾಪಿಸಲು ಮತ್ತು ಮಠವನ್ನು ಅಭಿವೃದ್ಧಿಪಡಿಸಲು ಶ್ರಮಿಸಿತ್ತು 1986ನೇ ಇಸವಿಯಲ್ಲಿ ವೈದ್ಯಕೀಯ ಕಾಲೇಜು ತರಲು ಪ್ರಯತ್ನಿಸಿದ ಅವರು, ನಂತರ ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಎಂಜಿನಿಯರಿಂಗ್ ಕಾಲೇಜು ಮಂಜೂರಾಗಿ ಶ್ರೀ ಮಠದ ಚಿತ್ರಣವೇ ಬದಲಾಯಿತು ಕರ್ನಾಟಕದಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ತರುವಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ಪ್ರಶಂಸಿ ವೀರೇಶ್ ರವರ ಜೀವನದ ದಾರಿಯಲ್ಲಿ ಎಲ್ಲರೂ ಸಾಗಬೇಕು ಮತ್ತು ಅವರಂತೆ ಸಮಾಜಮುಖಿ ಕೆಲಸಗಳನ್ನು ಮಾಡುವ ಶಕ್ತಿಯನ್ನು ಭಗವಂತ ಎಲ್ಲರಿಗೂ ನೀಡಲಿ ಎಂದು ಶ್ರೀಗಳು ಆಶಿಸಿದರು.

ಕೆ.ಎಂ.ವಿರೇಶ್ ರವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರೊ. ಎಂ.ಕೆ ಪ್ರಭುದೇವ, ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ತಿಂಗಳು ಹತ್ತು ಬೆಳದಿಂಗಳ ಕಾರ್ಯಕ್ರಮ ಆಯೋಜಿಸುವ ಮೂಲಕ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿಯನ್ನುಒದಗಿಸುತ್ತಿದ್ದರಲ್ಲದೆ. ಕಲಾವಿದರಿಗೆ ಉತ್ತೇಜನ ನೀಡುತ್ತಿದ್ದರು. ಮೃದು ಸ್ವಭಾವದವರು ಯಾರೊಂದಿಗೆ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ. ಜೀವಿತಾವಧಿಯಲ್ಲಿ ಮನುಷ್ಯ ಸಮಾಜ ಮುಖಿ ಕೆಲಸ ಮಾಡಬೇಕೆಂದು ತಿಳಿಸಿ ಮುರುಘಾಮಠದಲ್ಲಿ ಸೇವೆ ಸಲ್ಲಿಸಿ ಹೊರ ಬಂದ ಮೇಲೆ ಸ್ವಂತ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಅನೇಕರಿಗೆ ಬದುಕು ಕೊಟ್ಟಿದ್ದಾರೆ. ಎಂದರು.

ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇತಿಹಾಸ ಸಂಶೋಧಕ ಡಾ. ಬಿ ರಾಜಶೇಖರಪ್ಪ ಮಾತನಾಡಿ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಡಾ.ಕೆ.ಎಂ.ವೀರೇಶ್‍ರವರ ಸೇವೆ ಅನುಪಮವಾದುದು. ಸ್ನೇಹಮಯಿಯಾಗಿದ್ದ ಅವರು ಯಾರ ಮೇಲೂ ಸಿಟ್ಟಾಗುತ್ತಿರಲಿಲ್ಲ.ಕಲಾವಿದರೆಂದರೆ ಎಲ್ಲಿಲ್ಲದ ಪ್ರೀತಿ ಅವರಲ್ಲಿತ್ತು. ಅವರ ಶಿಕ್ಷಣ ಸಂಸ್ಥೆಯಲ್ಲಿ ಯಾರು ಏನೆ ಕಾರ್ಯಕ್ರಮ ಮಾಡುತ್ತೇನೆಂದರು ಇಲ್ಲವೆನ್ನುತ್ತಿರಲಿಲ್ಲ. ಕೈಲಾದ ಸಹಕಾರ ಕೊಡುತ್ತಿದ್ದರೆಂದು ಸ್ಮರಿಸಿದರು.

ಸಾಮಾಜಿಕ ಕ್ಷೇತ್ರ ಕುರಿತು ನಿವೃತ್ತ ಪ್ರೌಢಶಾಲಾ ಶಿಕ್ಷಕ ಹಾಗೂ ಸಾಹಿತಿ ಹುರುಳಿ ಬಸವರಾಜ್ ಮಾತನಾಡಿ ಸಮಾಜಮುಖಿ,ಪರಿಸರಕ್ಕೆ ಪೂರಕವಾದ ಕಾರ್ಯಗಳನ್ನು ಯಾರು ಜೀವಿತಾವಧಿಯಲ್ಲಿ ಮಾಡುತ್ತಾರೋ ಅಂತಹವರು ಮರಣದ ನಂತರವೂ ಎಲ್ಲರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಲ್ಲರನ್ನು ಪ್ರೋತ್ಸಾಹಿಸಿ ಒಳ್ಳೆಯ ಮಾತುಗಳನ್ನಾಡುವ ಗುಣ ಅವರಲ್ಲಿತ್ತು. ಸ್ನೇಹ ಜೀವಿಯಾಗಿದ್ದ ಡಾ.ಕೆ.ಎಂ.ವೀರೇಶ್ ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳುತ್ತಿರಲಿಲ್ಲ. ಎಲ್ಲರೊಂದಿಗೂ ಸ್ನೇಹಜೀವಿಯಾಗಿ ಬೆರೆಯುತ್ತಿದ್ದರು ಎಂದರು.

ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಂಗ ನಿರ್ದೇಶಕ ಕೆ.ಪಿ.ಎಂ ಗಣೇಶಯ್ಯ ಮಾತನಾಡಿ, ಡಾ.ಕೆ.ಎಂ. ವೀರೇಶ್‍ರವರು ಸಾಂಸ್ಕøತಿಕ ರಾಯಬಾರಿಯಾಗಿ ಕೆಲಸ ಮಾಡಿದರು ಹಾಸ್ಯ ಪ್ರಜ್ಞೆ ಅವರದು. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು.

ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ಸಾಹಿತ್ಯ ಮತ್ತು ಸಾಂಸ್ಕøತಿಕ, ಶೈಕ್ಷಣಿಕ ರಂಗಕ್ಕೆ ನಷ್ಟವಾಗಿದೆ. ಇಷ್ಟು ಬೇಗನೆ ಎಲ್ಲರನ್ನು ಅಗಲುತ್ತಾರೆಂದು ಅಂದುಕೊಂಡಿರಲ್ಲಿ. ಎಲ್ಲರಿಗೂ ಬೇಕಾದಂತ ವ್ಯಕ್ತಿ. ಇನ್ನು ನಮ್ಮೆಲ್ಲರ ಜೊತೆ ಇರಬೇಕಿತ್ತು. ಆದರೆ ವಿಧಿಯ ಆಟಕ್ಕೆ ಸೋಲಲೇಬೇಕು ಸಾಧಕರನ್ನು ಸತ್ತ ಮೇಲೆಯೂ ನೆನಪಿಸಿಕೊಳ್ಳುತ್ತಾರೆ. ಅದಕ್ಕೆ ಡಾ.ಕೆ.ಎಂ.ವೀರೇಶ್ ಕೂಡ ಒಬ್ಬರು. ಶಿಕ್ಷಣ, ಸಾಹಿತ್ಯಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇನ್ನು ಕೆಲವು ಕಾಲ ಬದುಕಿರಬೇಕಿತ್ತು ಎಂದು ದುಃಖ ವ್ಯಕ್ತಪಡಿಸಿ ಕೊಡುಗೈದಾನಿಯಾಗಿದ್ದ ಅವರು ಮುರುಘಾಮಠದಲ್ಲಿಯೂ ಕೆಲಸ ಮಾಡಿದರು. ಯಾವುದೇ ಒಬ್ಬ ವ್ಯಕ್ತಿ ಬದುಕಿದ್ದಾಗ ಹತ್ತಾರು ಜನಕ್ಕೆ ಉಪಯೋಗವಾಗುವ ರೀತಿಯಲ್ಲಿದ್ದರೆ ಸತ್ತ ನಂತರವೂ ನೆನಪಿಸಿಕೊಳ್ಳುತ್ತಾರೆಂದರು.

ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜಂಗಮ ಸಮಾಜದ ಅಧ್ಯಕ್ಷರಾದ ಎಂ.ಟಿ. ಮಲ್ಲಿಕಾರ್ಜನಸ್ವಾಮಿ ವಹಿಸಿದ್ದರು,ಶ್ರೀಮತಿ ಸುಮಂಗಳಮ್ಮ ವಿರೇಶ್ ಜಂಗಮ ಸಮಾಜದ ಮುಖಂಡರಾದ ಶರಣಯ್ಯ ಭಾಗವಹಿಸಿದ್ದರು.

ದೇವಿರಮ್ಮ ಪ್ರಾರ್ಥಿಸಿದರೆ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ಸ್ವಾಗತಿಸಿದರು,
ಕೆ.ಎನ್,ವಿಶ್ವನಾಥಯ್ಯ ವಂದಿಸಿದರೆ ಶೈಲಜ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group
Join WhatsApp Group

🔵 Facebook Page
Follow Facebook Page

⚫ Twitter / X
Follow on X (Twitter)

🟣 Threads
Follow on Threads

🟠 Instagram
Follow on Instagram

🔵 Telegram
Join Telegram Channel

🟢 WhatsApp Channel
Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *