‘ಯುವಜನತೆಗೆ ಕಾಂಗ್ರೆಸ್‌ ಸರ್ಕಾರದಿಂದ ಅಕ್ಷಮ್ಯ ದ್ರೋಹ’: ಡಾ.ಸಿದ್ದಾರ್ಥ ಗುಂಡಾರ್ಪಿ ವಾಗ್ದಾಳಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಅ. 19: ರಾಜ್ಯದ ವಿದ್ಯಾವಂತ ಯುವಜನತೆಗೆ ಹಾಗೂ ಪದವೀಧರರಿಗೆ ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್ ಸರ್ಕಾರ ಮಾಡಿದ್ದು ಕೇವಲ ಅಕ್ಷಮ್ಯ ದ್ರೋಹ ಮತ್ತು ವಂಚನೆ. ಪ್ರಣಾಳಿಕೆಯಲ್ಲಿ ನೀಡಿದ ಯಾವ ಭರವಸೆಯನ್ನೂ ಈಡೇರಿಸದೆ, ಉದ್ಯೋಗಗಳನ್ನು ಸೃಷ್ಟಿಸದೆ, ನೇಮಕಾತಿಗಳನ್ನು ಭ್ರಷ್ಟಾಚಾರದ ಸಂತೆಯನ್ನಾಗಿಸಿ ಲಕ್ಷಾಂತರ ಪದ ವೀಧರರ ಭವಿಷ್ಯವನ್ನು ಕತ್ತಲೆಗೆ ತಳ್ಳಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ದಾರ್ಥ ಗುಂಡಾರ್ಪಿ ದೂರಿದ್ದಾರೆ.

ಅ, 23ರಂದು ನಡೆಯಲಿರುವ ಆಗ್ನೇಯ ಪದವೀಧರರ ಚುನಾವಣೆಯ ಹಿನ್ನಲೆಯಲ್ಲಿ ಲಕ್ಷ್ಮೀಸಾಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಭೇಟಿ ಮಾಡಿ ಎನ್.ಡಿ.ಎ. ಅಭ್ಯರ್ಥಿ ಕೆ.ಎಂ.ಸುರೇಶ್ ರವರ ಪರವಾಗಿ ಮತಯಾಚನೆ ಮಾಡಿ ರಾಜ್ಯದ ವಿವಿಧ ಕಡೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ, ಪರೀಕ್ಷೆ ಗಳಲ್ಲಿ ಸರಣಿ ಹಗರಣಗಳನ್ನು ನಡೆಸಿ ಯುವಕರ ಅರ್ಹತೆ ಮತ್ತು ಪರಿಶ್ರಮವನ್ನು ಹರಾಜಿಗಿಟ್ಟಿರುವ ಈ ಜನ ವಿರೋಧಿ ಕಾಂಗ್ರೆಸ್‍ಗೆ ಪ್ರಬುದ್ಧ ಪದವೀಧರರೇ ತಕ್ಕ ಪಾಠ ಕಲಿಸಬೇಕಿದೆ.ಪದವೀಧರರ ಘನತೆ, ಉದ್ಯೋಗ ಹಕ್ಕು ಮತ್ತು ಉಜ್ವಲ ಭವಿಷ್ಯವನ್ನು ರಕ್ಷಿಸಲು ಹಾಗೂ ಯುವಶಕ್ತಿಗೆ ನೈಜ ಅವಕಾಶಗಳನ್ನು ಸೃಷ್ಟಿಸಲು ಕೇವಲ ಬಿಜೆಪಿ ಮಾತ್ರವೇ ಏಕೈಕ ಬಲಿಷ್ಠ ಹಾಗೂ ಭರವಸೆಯ ಧ್ವನಿಯಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಯುವಜನರಿಗೆ ಉಜ್ವಲ ಭವಿಷ್ಯದ ಆಸೆ ತೋರಿಸಿದ್ದ ಕಾಂಗ್ರೆಸ್, ಅಧಿಕಾರ ಸಿಕ್ಕ ತಕ್ಷಣಪದವೀಧರರಿಗೆಘೋರ ದ್ರೋಹವೆಸಗಿ ಅವರ ಭವಿಷ್ಯವನ್ನು ಹರಾಜು ಹಾಕಿದೆ.
ಕೇವಲ ಒಂದೇ ವರ್ಷದಲ್ಲಿ ಸರ್ಕಾರಿ ಇಲಾಖೆಗಳ ಎಲ್ಲ ಅನುಮೋದಿತ ಖಾಲಿ ಹುದ್ದೆಗಳನ್ನು ಭರ್ತಿ ಮಾ ಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಮಂಕು ಬೂದಿ ಎರಚಿ, ಇಂದು 2 ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಖಾಲಿ ಉಳಿಸಿಕೊಂಡು ಯುವಜನತೆಯ ಜೀವನ ಮತ್ತು ವಯೋಮಿತಿಯ ಜೊತೆ ಈ ಸರ್ಕಾರ ಚೆಲ್ಲಾಟವಾಡುತ್ತಿದೆ. ನಿರುದ್ಯೋಗಿಗಳಿಗೆ ಪರೀಕ್ಷಾ ಶುಲ್ಕ ವಿನಾಯಿತಿ ನೀಡುವುದಾಗಿ ಭರವಸೆ ನೀಡಿದ ಕಾಂಗ್ರೆಸ್, ಇಂದು ಸ್ಪರ್ಧಾ ತ್ಮಕಪರೀಕ್ಷೆ ಬರೆಯುವ ಪ್ರತಿಯೊಬ್ಬ ಬಡ ಅಭ್ಯರ್ಥಿಯಿಂದಲೂ ನೂರಾರು ರೂಪಾಯಿ ಶ ಲ್ಕವನ್ನು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದ್ದಾರೆ. ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ನಡೆಸುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನಿಷ್ಠ ಕನ್ನಡ ಭಾಷಾಂತರವನ್ನೂ ಸರಿಯಾಗಿ ಮಾಡದೆ ಗ್ರಾಮೀಣ ಯುವಕರ ಭವಿಷ್ಯವನ್ನು ಅತಂತ್ರಗೊಳಿಸಿ,ರಾತ್ರಿ-ಹಗಲು ಕಷ್ಟಪಟ್ಟು ಓದಿದವರನ್ನು ಮತ್ತೆ ಮರು ಪರೀಕ್ಷೆಯ ಶಿಕ್ಷೆಗೆ ತಳ್ಳಲಾಗಿದೆ ಎಂದು ದೂರಿದರು.

ನಿರುದ್ಯೋಗಿಗಳಿಗೆ `ಯುವನಿಧಿ’ ಹೆಸರಿನಲ್ಲಿ ಹಸಿ ಸುಳ್ಳು ಹೇಳಿ ವಂಚಿಸಲಾ ಗಿದೆ. ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸಬೇಕಿದ್ದ ಯೋಜನೆಯ ಅನುಷ್ಠಾನವನ್ನು ಸತತವಾಗಿ ವಿಳಂಬ ಮಾಡಲಾಯಿತು . ಈಗಲೂ ನೋಂದಾ ಯಿತ ಫಲಾನುಭವಿಗಳಿಗೆ ಮಾಸಿಕ ಭತ್ಯೆಯ ಹಣವನ್ನು ಸಮರ್ಪಕವಾಗಿ ಪಾವತಿಸಲು ವಿಫಲ ವಾಗಿದೆ.ಮತ್ತೊಂದೆಡೆ ಯುವನಿಧಿ’ ಹೆಸರಿನಲ್ಲಿ ಅಬ್ಬರದ ಪ್ರಚಾರ ಗಿಟ್ಟಿಸಿಕೊಂಡ ಸರ್ಕಾರ, ನಿರುದ್ಯೋಗಿ ಯುವಜನರಿಗೆ ನೀಡಬೇಕಿದ್ದ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಜಾರಿಗೊಳಿಸುವಲ್ಲಿ ಸಂ ಪೂರ್ಣವಾಗಿ ವಿಫಲವಾಗಿದ್ದು ರಾಜ್ಯದ ಇಡೀ ನಿರುದ್ಯೋಗಿ ಪದವೀಧರ ಯುವಜನತೆಗೆ ಕಾಂಗ್ರೆಸ್ ಸರ್ಕಾರ ಕ್ಷಮಿಸಲಾರದ ಘೋರಮೋಸ ಮಾಡಿದ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಅಧ್ಯಕ್ಷರಾದ ನಾಗರಾಜ್ ಎಸ್.ಸಿ.ಮೋರ್ಚಾದ ಗ್ರಾಮಾಂತರ ಅಧ್ಯಕ್ಷರಾದ ಕುಮಾರ್, ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಕವಿತಾ ಆಶಾ ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group
Join WhatsApp Group

🔵 Facebook Page
Follow Facebook Page

⚫ Twitter / X
Follow on X (Twitter)

🟣 Threads
Follow on Threads

🟠 Instagram
Follow on Instagram

🔵 Telegram
Join Telegram Channel

🟢 WhatsApp Channel
Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *