ಚಿತ್ರದುರ್ಗ ಅ. 22
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದಲ್ಲಿ ಸರಸ್ವತಿ ವಿದ್ಯಾಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಸರಸ್ವತಿ ಕಾನೂನು ಕಾಲೇಜಿಗೆ ಈಗ 60ರ ಸಂಭ್ರಮ ಚಿತ್ರದುರ್ಗ ಹಾಗೂ ಸುತ್ತ ಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಾನೂನು ಶಿಕ್ಷಣವನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಈ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಆರು ದಶಕಗಳ ಸಾರ್ಥಕ ಸೇವೆಯಲ್ಲಿ ಮಹಾವಿದ್ಯಾಲಯವು ಸಾವಿರಾರು ಕಾನೂನು ಪದವೀಧರರನ್ನು ರೂಪಿಸಿದೆ, ಉಚ್ಛ ನ್ಯಾಯಾಲಯದ ನ್ಯಾಯಾಧೀಶರು, ಜಿಲ್ಲಾ ಹಾಗೂ ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರುಗಳು, ಸರ್ಕಾರಿ ವಕೀಲರು, ಪೋಲಿಸ್ ಅಧಿಕಾರಿಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಉನ್ನತ ಶ್ರೇಣಿಯಲ್ಲಿ ಅಧಿಕಾರಿಗಳಾಗಿ ನಮ್ಮ ಹಳೆಯ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿ ದ್ದಾರೆ ಎಂದು ಸರಸ್ವತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು ನ್ಯಾಯಾವಾಧಿಗಳಾದ ಫಾತ್ಯರಾಜನ್ ತಿಳಿಸಿದರು.

ಚಿತ್ರದುರ್ಗ ನಹರದ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸರಸ್ವತಿ ವಿದ್ಯಾಸಂಸ್ಥೆ (ರಿ),ಯು ೧೯೬೪ರಲ್ಲಿ ಚಿತ್ರದುರ್ಗದಲ್ಲಿ ಸ್ಥಾಪನೆಯಾಯಿತು. ನಂತರ ೧೯೬೫ರಲ್ಲಿ ಸರಸ್ವತಿ ಕಾನೂನು ಕಾಲೇಜನ್ನು ಸ್ಥಾಪಿಸಿ ಪ್ರಾರಂಭದಿಂದ ೩ ವರ್ಷದ ಕಾನೂನು ಪದವಿ ಮತ್ತು ೧೯೮೪ರಿಂದ ೫ ವರ್ಷದ ಇಂಟಿಗ್ರೇಟೆಡ್ ಬಿ.ಎ. ಎಲ್ಎಲ್.ಬಿ ಪದವಿಯನ್ನು ಪ್ರಾರಂಭಿಸಲಾಯಿತು. ಸರಸ್ವತಿ ಕಾನೂನು ಕಾಲೇಜನ್ನು ೧೯೬೫ರಲ್ಲಿ ಅಂದಿನ ಭಾರತದ ಉಪಪ್ರಧಾನಿಗಳಾಗಿದ್ದ ದಿವಂಗತ ಮುರಾರ್ಜಿ ದೇಸಾಯಿ ಉದ್ಘಾಟಿಸಿದರು.ಆರಂಭಿಕ ದಿನಗಳಲ್ಲಿ ಅನೇಕ ಸವಾಲುಗಳನ್ನು ಎದುರಿಸಿದವರಲ್ಲಿ ಸಂಸ್ಥಾಪಕ ಕಾರ್ಯದರ್ಶಿಗಳಾದಟಿ.ಎ.ರೆಡ್ಡಿ ಉಪಾಧ್ಯಕ್ಷರಾದ ವೆಂಕಟರಂಗನ್ ಹಾಗೂ ಸ್ಥಳೀಯ ಮುಖಂ ಡರುಗಳಾದ ವೆಂಕೋಬರಾವ್, ಹನುಮಯ್ಯ ಮತ್ತು ಮೊಹಮದ್ ಸೈಪುದ್ಧೀನ್ ಹಾಗೂ ಇತರರು ಅತ್ಯಂತ ಪರಿಶ್ರಮ ದಿಂದ ಕಾಲೇಜನ್ನುನಡೆಸಿಕೊಂಡು ಬರುವಲ್ಲಿ ಅವರುಗಳ ಪಾತ್ರ ಅಪಾರವಾದದ್ದು ಎಂದರು.
1985-86ನೇ ಶೈಕ್ಷಣಿಕ ವರ್ಷದಿಂದ ಸ್ವಂತ ಕಟ್ಟಡವನ್ನು ನಿರ್ಮಿಸಿ ಅದರಲ್ಲಿ ಎರಡು ಕೋರ್ಸುಗಳ ತರಗತಿಗಳನ್ನು ಪ್ರಾರಂಭಿಸಲಾಯಿತು. ಕಾಲೇಜು 25 ವರ್ಷ ಪೂರೈಸಿರುವ ಅಂಗವಾಗಿ ಬೆಳ್ಳಿ ಹಬ್ಬವನ್ನು 1998ರಲ್ಲಿ ಆಚರಿಸುವುದರೊಂದಿಗೆ ಕಾಲೇಜಿನ ಸಭಾಂಗಣವನ್ನು ಹೊಸದಾಗಿ ಪ್ರಾರಂಭಿಸಲಾಯಿತು.. 2015ರಲ್ಲಿ 50 ವರ್ಷ ಪೂರೈಸಿರುವ ಅಂಗವಾಗಿ ಸುವರ್ಣ ಸಂಭ್ರಮಮಹೋತ್ಸವನ್ನು ಆಚರಿಸಿ ಆ ಸಮಾರಂಭವನ್ನು ಆಗಿನ ಸರ್ವೋಚ್ಫ ನ್ಯಾಯಾಲಯದ ಮುಖ್ಯನ್ಯಾಯಾಮೂರ್ತಿಗಳಾದ ಹೆಚ್.ಎಲ್. ದತ್ತುರವರು ಉದ್ಘಾಟಿಸಿದ್ದರು, ಆಗಸ್ಟ್-2015ರಲ್ಲಿ ಸರಸ್ವತಿ ಕಾನೂನು ಕಾಲೇಜಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ವೇತನಾನುದಾನವನ್ನು ವಿಸ್ತರಿಸಿ ಆದೇಶಗೊಂಡಿದ್ದರಿಂದ ಈಗ ಈ ಕಾಲೇಜು ಅನುದಾನಿತ ಕಾಲೇಜಾಗಿದೆ. 50 ವರ್ಷಗಳ ನಂತರ ಕಾಲೇಜಿಗೆ ವೇತಾನುದಾನದ ಕೊಡುಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿಯೇ ಆಗಿದೆ ಎಂದು ತಿಳಿಸಿದರು.
ಕೆಲವು ಹಳೆಯ ವಿದ್ಯಾರ್ಥಿಗಳು ರಾಜಕೀಯ ಕ್ಷೇತ್ರದಲ್ಲಿಯೂ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವವರಲ್ಲಿ ದಿವಂಗತ ಹೆಚ್. ಹನುಮಂತಪ್ಪನವರು ಸಹ ಒಬ್ಬರಾಗಿರುತ್ತಾರೆ. ಕಾಲೇಜು ಸಂಕಷ್ಟದಲ್ಲಿದ್ದಾಗ ಅಂತಹ ಕಷ್ಟದಲ್ಲಿ ಹೊರಬಂದು ಮತ್ತೆ ಅತ್ಯುತ್ತಮವಾಗಿ ಕಾಲೇಜು ಶಿಕ್ಷಣವನ್ನು ನೀಡುವಂತಂಹ ಸಾಮರ್ಥ್ಯವನ್ನು ಬೆಳಸಿ ಸಂಸ್ಥೆಗೆ ಹಾಗೂ ಕಾಲೇಜಿಗೆ ಇವರ ಸಹಾಯ ಮತ್ತು ಸೇವೆಯು ಸ್ಮರಣೀಯವಾದದ್ದು. ಸರಸ್ವತಿ ಕಾನೂನು ಕಾಲೇಜು ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶದೊಂದಿಗೆ ಈವರೆಗೆ 103ರ್ಯಾಂಕ್ಗಳನ್ನು ಗಳಿಸು ವುದರ ಜೊತೆಗೆ ಕಾಲೇಜು ಇತರೆ ಕಾರ್ಯಕ್ರಮಗಳಾದ ಅಣಕು ನ್ಯಾಯಾಲಯ ಸ್ಪರ್ಧೆಗಳು, ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಗಳು, ಕಾನೂನು ಶಿಬಿರಗಳು, ರಾಷ್ಟ್ರಮಟ್ಟದ ವಿಚಾರ ಸಂಕೀರ್ಣಗಳು, ಅತಿಥಿ ಉಪನ್ಯಾಸಗಳು, ವಿಶ್ವವಿದ್ಯಾನಿಲಯಮಟ್ಟದ ಕ್ರೀಡೆಗಳು ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ನಮ್ಮ ಕಾನೂನು ಕಾಲೇಜು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ ಎಂದರು.
ಪ್ರಾರಂಭದಲ್ಲಿ ಸರಸ್ವತಿ ಕಾನೂನು ಕಾಲೇಜು ಮೈಸೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿದ್ದು, ನಂತರದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿತ್ತು. ೨೦೦೯ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಹುಬ್ಬಳ್ಳಿ ಇದರ ಶಾಶ್ವತ ಸಂಯೋಜನೆ ಹೊಂದಿದ್ದು, ಎಂದು ಫಾತ್ಯರಾಜನ್ ತಿಳಿಸಿದರು.
ಸರಸ್ವತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳು ನ್ಯಾಯಾವಾದಿಗಳಾದ ಶ್ರೀಮತಿ ಡಿ.ಕೆ.ಶೀಲ ಮಾತನಾಡಿ, ಕಾಲೇಜಿನ ಅಭಿವೃದ್ಧಿಯ ಮತ್ತೊಂದು ಮಹತ್ವದ ಮೈಲಿಗಲ್ಲೆಂದರೆ ೨೦೨೬-೨೭ನೇ ಶೈಕ್ಷಣಿಕ ವರ್ಷದಿಂದ (ಪ್ರಸ್ತುತ) ಸಂವಿಧಾನ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಕೋರ್ಸುನ್ನು (ಎಲ್ಎಲ್. ಎಂ.) ಆರಂಭಿಸಲು ಅನುಮತಿ ದೊರೆತಿದೆ. ಅದಕ್ಕಾಗಿ ಹೊಸ ಕಟ್ಟಡದ ನಿರ್ಮಾಣವು ಸಹ ಪೂರ್ಣ ಗೊಂಡಿದೆ. ಈ ಹೊಸ ಕಟ್ಟಡದ ಉದ್ಘಾಟನೆಯನ್ನು ಅ.24ರಂದು ವಜ್ರಮಹೋತ್ಸವದ ಸಂದರ್ಭ ದಲ್ಲಿ ಉದ್ಘಾಟನೆಯಾಗಲಿದೆ. ಇದಾದ ನಂತರ ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ನಡೆಯಲಿರುವ ವಜ್ರಮಹೋತ್ಸವದ ಸಂಭ್ರಮದ ಕಾರ್ಯಕ್ರಮವನ್ನು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಪ್ರಸನ್ನ ಬಾಲಚಂದ್ರ ವರಾಲೆ ರವರು ಉದ್ಘಾಟನೆ ನೇರವೇರಿಸಲಿದ್ದಾರೆ.
ಈ ಸಮಾರಂಭದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಸುನಿಲ್ದತ್ ಯಾದವ್, ಬಸವ ರಾಜ್. ಜಿ, ವೆಂಕಟೇಶನಾಯ್ಕ. ಟಿ ಚಿತ್ರದುರ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಜಿ.ಡಿ. ಮಹಾವರ್ ಕರ್, ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ, ಸಂಸದರಾದ ಗೋವಿಂದ ಕಾರಜೋಳ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. (ಡಾ.) ರತ್ನ. ಆರ್ ಭರಮಗೌಡರ್ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಶ್ರೀಯುತ ಫಾತ್ಯರಾಜನ್ರವರು ವಹಿಸಲಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷರಾದ ಟಿ.ಹೆಚ್. ಬಸವರಾಜ್ ಭಾಗವಹಿಸಲಿದ್ದಾರೆ ಎಂದರು.
ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ (ಡಾ.) ಎಂ.ಎಸ್. ಸುಧಾದೇವಿ ಮಾತನಾಡಿ, ಗುಣಮಟ್ಟದ ಕಾನೂನು ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ಹೊಂದಿರುವ ಸಮರ್ಥ ಮತ್ತು ಸಮಾಜಮುಖಿ ಕಾನೂನು ವೃತ್ತಿಪರರನ್ನು ರೂಪಿಸುವ ಮುಖ್ಯ ಧ್ಯೇಯಗಳೊಂದಿಗೆ ಸರಸ್ವತಿ ಕಾನೂನು ಕಾಲೇಜು ತನ್ನ ಯಶಸ್ವೀ ಪಯಣವನ್ನು ಮುಂದುವರೆಸುತ್ತಿದೆ. ನಮ್ಮ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಈಗ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸುತ್ತಿರುವ ಈರಣ್ಣ, ರಾಜಕುಮಾರ್, ಶ್ರೀಮತಿ ಸ್ಮಿತಾ, ಶ್ರೀಮತಿ ಸುಮಾ, ಮಧು, ಶ್ರೀಮತಿ ರಾಧಾ, ರಾಜು, ಅಜಿತ್ ಮೊಹಮ್ಮದ್ ಷಮಾಶ್ರೀ ಆಲಿ ಹಾಗೂ 2023-24ನೇ ಸಾಲಿನಲ್ಲಿ 3ನೇ ರ್ಯಾಂಕ್ ಪಡೆದ ಸ್ವಾತಿಯವರನ್ನು ಗೌರವಿಸಲಾಗುವುದು ಎಂದರು.
ಗೋಷ್ಟಿಯಲ್ಲಿ ನ್ಯಾಯಾವಾದಿಗಳಾದ ಅಂಜನೇಯ, ಸಹಾಯಕ ಪ್ರಾಧ್ಯಾಪಕರಾದ ಎನ್.ಡಿ.ಗೌಡ,ದೈಹಿಕ ಉಪನ್ಯಾಸಕರಾದ ಮುರುಗೇಶ್ ಉಪಸ್ಥಿತರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
🟠 Instagram
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು