ಕರ್ನಾಟಕ ಚುನಾವಣಾ ಆಯೋಗವು ರಾಜ್ಯದಲ್ಲಿ ಬಹುನಿರೀಕ್ಷಿತ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ನಕಲಿ, ಮೃತಪಟ್ಟ ಹಾಗೂ ಸ್ಥಳಾಂತರಗೊಂಡ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಮತ್ತು ಅರ್ಹರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಜೂನ್ 30ರಂದು ಆರಂಭವಾಗಿದ್ದ ಈ ಪ್ರಕ್ರಿಯೆ ಇದೀಗ ಮುಕ್ತಾಯಗೊಂಡಿದೆ ಎಂದು ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಾದ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಮತದಾರರ ಪಟ್ಟಿಯ ಪ್ರಮುಖ ಮುಖ್ಯಾಂಶಗಳು
- ಒಟ್ಟು ಅರ್ಹ ಮತದಾರರು: ಪರಿಷ್ಕರಣೆಯ ಬಳಿಕ ರಾಜ್ಯದಲ್ಲಿ ಒಟ್ಟು 4.55 ಕೋಟಿ ಅರ್ಹ ಮತದಾರರಿದ್ದಾರೆ.
- ಕೈಬಿಡಲಾದ ಮತದಾರರು: ಬರೋಬ್ಬರಿ 1,07,96,339 (ಸುಮಾರು 1.07 ಕೋಟಿ) ಅನರ್ಹ/ನಕಲಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.
- ಮಹಿಳಾ ಮತದಾರರದ್ದೇ ಮೇಲುಗೈ: ರಾಜ್ಯದಲ್ಲಿ 2,29,12,355 ಮಹಿಳಾ ಮತದಾರರಿದ್ದರೆ, 2,25,50,493 ಪುರುಷ ಮತದಾರರಿದ್ದಾರೆ. ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿರುವುದು ಈ ಬಾರಿಯ ವಿಶೇಷ.
- ವಿವಿಧ ವರ್ಗದ ಮತದಾರರು: 18-19 ವಯಸ್ಸಿನ 6,83,364 ಯುವ ಮತದಾರರು, 85 ವರ್ಷ ಮೇಲ್ಪಟ್ಟ 3,92,134 ಹಿರಿಯ ನಾಗರಿಕರು, 5,65,340 ವಿಶೇಷಚೇತನರು, 44,322 ಸೇವಾ ಮತದಾರರು ಹಾಗೂ 3,252 ಅನಿವಾಸಿ ಭಾರತೀಯ (NRI) ಮತದಾರರು ಪಟ್ಟಿಯಲ್ಲಿದ್ದಾರೆ.
ಜಿಲ್ಲಾವಾರು ಮತದಾರರ ಸಂಪೂರ್ಣ ವಿವರ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ವೋಟರ್ಸ್ ಇರುವ ಜಿಲ್ಲೆಯಾಗಿ ಹೊರಹೊಮ್ಮಿದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ ಮತದಾರರಿದ್ದಾರೆ. ಸಂಪೂರ್ಣ ಪಟ್ಟಿ ಇಲ್ಲಿದೆ:
- ಬೆಳಗಾವಿ: 36,35,860
- ಬೆಂಗಳೂರು ನಗರ: 24,01,939
- ಮೈಸೂರು: 22,80,067
- ತುಮಕೂರು: 20,94,762
- ಕಲಬುರಗಿ: 18,94,144
- ವಿಜಯಪುರ: 17,08,099
- ದಕ್ಷಿಣ ಕನ್ನಡ: 16,78,448
- ಮಂಡ್ಯ: 14,27,462
- ರಾಯಚೂರು: 14,24,909
- ಬಾಗಲಕೋಟೆ: 14,13,341
- ಹಾಸನ: 13,93,908
- ಧಾರವಾಡ: 13,78,016
- ಶಿವಮೊಗ್ಗ: 13,54,046
- ಬೆಂಗಳೂರು ಉತ್ತರ: 13,25,284
- ದಾವಣಗೆರೆ: 13,20,819
- ಚಿತ್ರದುರ್ಗ: 12,46,746
- ಬೀದರ್: 12,46,746
- ಹಾವೇರಿ: 12,33,294
- ಉತ್ತರ ಕನ್ನಡ: 11,39,623
- ಕೋಲಾರ: 11,39,393
- ಬೆಂಗಳೂರು ದಕ್ಷಿಣ: 11,13,554
- ಬೆಂಗಳೂರು ಸೆಂಟ್ರಲ್: 10,67,374
- ಕೊಪ್ಪಳ: 10,59,164
- ಬಳ್ಳಾರಿ: 10,20,264
- ಉಡುಪಿ: 10,14,143
- ವಿಜಯನಗರ: 10,08,367
- ಚಿಕ್ಕಬಳ್ಳಾಪುರ: 9,53,372
- ಯಾದಗಿರಿ: 8,87,174
- ಚಿಕ್ಕಮಗಳೂರು: 8,74,462
- ರಾಮನಗರ: 8,39,039
- ಬೆಂಗಳೂರು ಗ್ರಾಮಾಂತರ: 8,04,534
- ಚಾಮರಾಜನಗರ: 8,00,858
- ಗದಗ: 7,94,567
- ಕೊಡಗು: 4,11,632
2002ರ ನಂತರ ಅಂದರೆ ಬರೋಬ್ಬರಿ 23 ವರ್ಷಗಳ ಬಳಿಕ ರಾಜ್ಯದಲ್ಲಿ ಈ SIR (Special Intensive Revision) ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು. ಎರಡೆರಡು ಕಡೆ ಮತದಾನದ ಹಕ್ಕು ಹೊಂದಿರುವವರನ್ನು ಪತ್ತೆಹಚ್ಚಿ, ನಕಲಿ ಮತದಾನಕ್ಕೆ ಬ್ರೇಕ್ ಹಾಕುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು