ಚಿತ್ರದುರ್ಗ ನ. 18
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
60ವರ್ಷಕ್ಕೆ ಮೇಲ್ಪಟ್ಟು 70 ವರ್ಷದೊಳಗಿನ ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ “ಸಂಧ್ಯಾ ಕಿರಣ” ನಗದು ರಹಿತ ಆರೋಗ್ಯ ಭಾಗ್ಯ ಯೋಜನೆಯನ್ನು ಸರ್ಕಾರ ಜಾರಿ ಮಾಡಿದ್ದು ಇದರ ಲಾಭವನ್ನು ಪಡೆಯುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ(ರಿ.), ಚಿತ್ರದುರ್ಗ ಶಾಖೆಯ ಜಿಲ್ಲಾಧ್ಯಕ್ಷರಾದ ಬಿ.ಪಿ.ಪ್ರೇಮನಾಥ್ ನೌಕರರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ರಾಜ್ಯ ಸರ್ಕಾರಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ಅವಲಂಬಿತ ದಿವ್ಯಾಂಗ ಮಕ್ಕಳಿಗೆ ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ.5.00ಲಕ್ಷಗಳವರೆಗೆ ವಂತಿಕೆ ಆಧಾರಿತ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿ-ಎಆರ್‍ಕೆ) ಯೋಜನೆಯಡಿಯಲ್ಲಿನ ನೀತಿಯನ್ವಯ “ಸಂಧ್ಯಾ ಕಿರಣ” ನಗದು ರಹಿತ ಆರೋಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಆಕುಕ287ಸಿಜಿ ಇ2026 ಬೆಂಗಳೂರು ದಿನಾಂಕ:02-09-2026ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿರುತ್ತದೆ. ಈ ಯೋಜನೆಯಡಿ ಅರ್ಹ ಪಿಂಚಣಿದಾರರು ಹಾಗೂ ಅವರ ಪತಿ/ಪತ್ನಿ ಮತ್ತು ಅವಲಂಬಿತ ದಿವ್ಯಾಂಗ ಮಕ್ಕಳು (ವೈದ್ಯಕೀಯ ಹಾಜರಾತಿ ನಿಯಮಗಳು 1969)ರಡಿ ಫಲಾನುಭವಿಗಳಾಗಿರುತ್ತಾರೆ ಎಂದಿದ್ದಾರೆ.
ಕರ್ನಾಟಕ ಸರ್ಕಾರದ ಪಿಂಚಣಿದಾರರು ಅಂದರೆ 01 ನವೆಂಬರ್ 1956ರ ನಂತರ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿ, ಕರ್ನಾಟಕ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ವ್ಯಕ್ತಿ ಕುಟುಂಬ: ಪಿಂಚಣಿದಾರರ ಪತಿ ಅಥವಾ ಪತ್ನಿಯಾಗಿರಬೇಕು,ಸರ್ಕಾರವು ಈಗಾಗಲೇ ಸಂಧ್ಯಾ ಕಿರಣ ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಸಂಬಂಧಪಟ್ಟ ನಿವೃತ್ತಿ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ರೂ.5.00 ಲಕ್ಷದವರೆಗೆ ವೈದ್ಯಕೀಯ ಸೇವೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಸರ್ಕಾರದಿಂದ ನೋಂದಾಯಿತ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಪಡೆಯಲು ಅವಕಾಶವಿರುತ್ತದೆ. (ಔPಖಿ-Iಓ) ಈಗಾಗಲೇ ನಿವೃತ್ತರಾಗಿರುವ ಅರ್ಹ ಪಿಂಚಣಿದಾರರನ್ನು ಸ್ವಯಂಚಾಲಿತವಾಗಿ ಯೋಜನೆಯ ವ್ಯಾಪ್ತಿಗೆ ಪಡಿಸಲು
ಉದ್ದೇಶಿಸಲಾಗಿದ್ದು, ಯೋಜನೆಯ ಸೌಲಭ್ಯವನ್ನು ಪಡೆಯಲು ಪಿಂಚಣಿದಾರರು/ಕುಟುಂಬ ಪಿಂಚಣಿದಾರರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳತಕ್ಕದ್ದು, ಯೋಜನೆಯಡಿಯಲ್ಲಿ ದಾಖಲಿಸಿ, ಈ ಅವಕಾಶವನ್ನು ದಿನಾಂಕ: 22-01-2027ರವರೆಗೆ ಕಲ್ಪಿಸಲಾಗಿದೆ.
ಯೋಜನೆಯಾದ ಸಂಧ್ಯಾ ಕಿರಣ” ಆರೋಗ್ಯಭಾಗ್ಯ ಯೋಜನೆ ಒಳಪಡಲು ಈ ಕೆಳಕಂಡ ಲಿಂಕ್: hಣಣಠಿs:// ತಿತಿತಿ.sಚಿsಣ.ಞಚಿಡಿಟಿಚಿಣಚಿಞಚಿ. gov.iಟಿ. ಣಡಿeಚಿsuಡಿಥಿ /oಠಿಣouಣ.ಚಿsಠಿx. (ಔPಖಿ-Iಓ) ಡಿಸೆಂಬರ್-2026ರ ಮಾಹೆಯ ನಂತರ ನಿವೃತ್ತಿ ಹೊಂದುವ ಪಿಂಚಣಿದಾರರು ಯೋಜನೆಯ ಸೌಲಭ್ಯವನ್ನು ಪಡೆಯಲು ಇಚ್ಚಿಸದಿದ್ದಲ್ಲಿ ನಿವೃತ್ತಿಯ ದಿನಾಂಕದಿಂದ 02ತಿಂಗಳೊಳಗಾಗಿ (ಔPಖಿ-ಔUಖಿ) ಪ್ರಕ್ರಿಯೆಯನ್ನು ಮೇಲ್ಕಂಡ ಲಿಂಕ್ ಬಳಸಿ ಪೂರ್ಣಗೊಳಿಸಬೇಕಾಗಿರುತ್ತದೆ. ಇಲ್ಲವಾದಲ್ಲಿ ಸ್ವಯಂಚಾಲಿತವಾಗಿ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 24*7 ಕಾರ್ಯನಿರ್ವಹಿಸುವ ಟೋಲ್ ಫ್ರೀ ಸಂಖ್ಯೆ 18004258330 ಅಥವಾ hಣಣಠಿs:// ಞಚಿss. ಞಚಿಡಿಟಿಚಿಣಚಿಞಚಿ. gov.iಟಿ/ hಣಣಠಿs:sಚಿsಣ. ಞಚಿಡಿಟಿಚಿಣಚಿಞಚಿ. gov.iಟಿ. ಸಂಪರ್ಕಿಸಬಹುದಾಗಿದೆ.
ಔPಖಿ-ಔUಖಿ ಪ್ರಕ್ರಿಯೆಗೆ ಸಂಬಂಧಿಸಿದ ಕಾರ್ಯವಿಧಾನ (SಔP) ಮೇಲ್ಕಂಡ ವೆಬ್‍ಸೈಟ್‍ನಲ್ಲಿ ಲಭ್ಯವಿ ರುತ್ತದೆ. 60ವರ್ಷಕ್ಕೆ ಮೇಲ್ಪಟ್ಟು 70ವರ್ಷದೊಳಗಿನ ರಾಜ್ಯದ ಸರ್ಕಾರಿ ನಿವೃತ್ತಿ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ಸಂಧ್ಯಾ ಕಿರಣ” ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ವೈದ್ಯಕೀಯ ಸೇವೆಯನ್ನು ಪಡೆಯಲು ಕಡ್ಡಾಯವಾಗಿ ತಮ್ಮಗಳ ಮಾಹಿತಿಯನ್ನು ನೋಂದಾಯಿಸಕೊಳ್ಳತಕ್ಕದ್ದು. ಆನ್‍ಲೈನ್‍ಗೆ ಸಲ್ಲಿಸು ವಾಗ : ಪಿ.ಪಿ.ಓ. ನಂಬರ್, ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಇವುಗಳನ್ನು ಸಲ್ಲಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ(ರಿ.), ಚಿತ್ರದುರ್ಗ ಶಾಖೆಯ ಜಿಲ್ಲಾಧ್ಯಕ್ಷರಾದ ಬಿ.ಪಿ.ಪ್ರೇಮನಾಥ್, ಪ್ರಧಾನ ಕಾರ್ಯದರ್ಶಿ ಟಿ.ತಿಮ್ಮಪ್ಪ ಕೋರಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು