ಚಿತ್ರದುರ್ಗ ನ. 18
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದಲ್ಲಿ ಬ್ರಹ್ಮರ್ಷಿ ಪಿತಾಮಹ ಸುಭಾಷ್ ಪತ್ರಿಜಿ ಅವರ ಅಮೃತ ಹಸ್ತದಿಂದ ನಿರ್ಮಿಸಲಾಗಿರುವ 9999 ಜನ ಕುಳಿತು ಧ್ಯಾನ ಮಾಡಬಹುದಾದ ಬೃಹತ್ ಪಿರಮಿಡ್ ಧ್ಯಾನ ಮಂದಿರವು ಇದೇ ಬರುವ ನವೆಂಬರ್ 21 ಮತ್ತು 22 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮೃತ್ರೇಯ ಪಿರಮಿಡ್ ಸ್ಪಿರಿಚಯಲ್ ಟ್ರಸ್ಟ್ನ ಸಂಚಾಲಕರಾದ ಗೌರೀಶ್ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ 5,000 ಜನ ಕುಳಿತುಕೊಳ್ಳುವ 160*160 ಸೈಜ್ನಲ್ಲಿ ನಿರ್ಮಾಣವಾಗಿದೆ. ಇದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡದಾದ ಪಿರಮಿಡ್ ಧ್ಯಾನ ಮಂದಿರವನ್ನು ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದಲ್ಲಿ ನಿರ್ಮಿಸಲಾಗಿದೆ ಈ ನೂತನ ಪಿರಮಿಡ್ ಮಂದಿರವನ್ನು ಬ್ರಹ್ಮರ್ಷಿ ಪಿತಾಮಹ ಪತ್ರಿಜಿ ಅವರ ಧರ್ಮಪತ್ನಿ ಹಾಗೂ ಗುರುಮಾತೆಯಾದ ಸ್ವರ್ಣಮಾಲಾ ಪತ್ರಿ ಅಮ್ಮನವರ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನವೆಂಬರ್ 21 ರಂದು ಸಸ್ಯಹಾರ ರ್ಯಾಲಿಯು ಹಿರಿಯೂರಿನ ಆದಿವಾಲ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ವಿದ್ವಾನ್ ಗಣೇಶ್ ತಂಡದವರಿಂದ ಸಂಗೀತ ನಾದ ಧ್ಯಾನ ಹಾಗೂ ಸಾಯಂಕಾಲ 6 ರಿಂದ 9 ಗಂಟೆಯವರೆಗೆ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 22 ರಂದು ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ಸಾಮೂಹಿಕ ಸಂಗೀತ ಧ್ಯಾನ ನಡೆದು, ನಂತರ 11:11:11 ಕ್ಕೆ ಪಿರಮಿಡ್ ಲೋಕಾರ್ಪಣೆಗೊಳ್ಳಲಿದೆ ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರಹೆಗ್ಗಡೆ, ಅವಧೂತರಾದ ವಿನಯ್ ಗುರೂಜಿ, 112 ವರ್ಷದ ಹಿಮಾಲಯದ ಯೋಗಿಗಳಾದ ಸದಾನಂದಗಿರಿ ಸ್ವಾಮೀಜಿಗಳು ಸೇರಿದಂತೆ ಅನೇಕ ಬ್ರಹ್ಮರ್ಷಿಗಳು, ಸ್ವಾಮೀಜಿಗಳು, ಋಷಿಗಳು, ಯೋಗಿಗಳು ಹಾಗೂ ಹಿರಿಯ ಮಾಸ್ಟರ್ಗಳು ಸುಮಾರು 25,000 ಧ್ಯಾನಿಗಳ ಭಾಗವಹಿಸ ಲಿದ್ದಾರೆ ಎಂದು ಎಂದರು.
ಮೃತ್ರೇಯ ಪಿರಮಿಡ್ ಸ್ಪಿರಿಚಯಲ್ನ ಸದಸ್ಯರಾದ ಡಾ, ಮಂಜುನಾಥ್ ಮಾತನಾಡಿ ಈ ಪಿರಮಿಡ್ನಲ್ಲಿ ಧ್ಯಾನ ಮಾಡುವುದರಿಂದ ಮನಸ್ಸು ಆಲೋಚನಾ ರಹಿತ ಸ್ಥಿತಿಗೆ ಬರುತ್ತದೆ ಹಾಗೂ ತಲೆನೋವಿನಿಂದ ಕ್ಯಾನ್ಸರ್ ವರೆಗಿನ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದು ಎಂಬ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ಉಚಿತ ಧ್ಯಾನ ಶಿಕ್ಷಣ ಹಾಗೂ ಉಚಿತ ಅನ್ನ ದಾಸೋಹ ಇರಲಿದೆ ಈ ಪಿರಮಿಡ್ ನಿರ್ಮಾಣಕ್ಕೆ ಹಿರಿಯೂರಿನ ಮಾಜಿ ಸಚಿವರಾದ ದಿವಂಗತ ಸುಧಾಕರ್ ಅವರು ಸರ್ಕಾರದ ಮೂಲಕ 30 ಲಕ್ಷ ರೂಪಾಯಿ ಅನುದಾನ ಒದಗಿಸಿದ್ದು ಇದರೊಂದಿಗೆ ದಾನಿಗಳಿಂದ ಹಣವನ್ನು ಸಂಗ್ರಹ ಮಾಡಿ ಒಟ್ಟು ಎರಡು ಕೋಟಿ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ ಎಂದು ತಿಳಿಸಿದರು.
ಪಿರಮಿಡ್ಗೆ 52 ಡಿಗ್ರಿ ಆಂಗಲ್ ಇರುವುದರಿಂದ ಇದು ವಿಶ್ವ ಪ್ರಾಣ ಶಕ್ತಿಯನ್ನು ಸೆಳೆದುಕೊಂಡು, ಧ್ಯಾನ ಮಾಡುವವರ ನಾಡಿಗಳನ್ನು ಶುದ್ಧೀಕರಿಸಿ ದೈಹಿಕ ಹಾಗೂ ಮಾನಸಿಕ ತೊಂದರೆಗಳನ್ನು ನಿವಾರಿಸುತ್ತದೆ ಈ ಪಿರಮಿಡ್ ಯಾವುದೇ ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾದ ಧ್ಯಾನ ಹಾಗೂ ಶಾಂತಿಯ ಸ್ಥಳವಾಗಿದೆ. ಸೌಹಾರ್ದಯುತ ಬದುಕಿಗೆ ಮತ್ತು ಸಮಾಜದಲ್ಲಿ ಶಾಂತಿ ನೆಲೆಸುವುದಕ್ಕಾಗಿಯೇ ಇದನ್ನು ನಿರ್ಮಾಣ ಮಾಡಲಾಗಿದ್ದು, ಕರ್ನಾಟಕದಾದ್ಯಂತ ಇರುವ ಎಲ್ಲಾ ಧ್ಯಾನ ಬಂಧುಗಳು ಈ ಐತಿಹಾಸಿಕ ಲೋಕಾರ್ಪಣೆ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಕೋರಿದ್ದಾರೆ.
ಗೋಷ್ಟಿಯಲ್ಲಿ ಮೃತ್ರೇಯ ಪಿರಮಿಡ್ ಸ್ಪಿರಿಚಯಲ್ ಟ್ರಸ್ಟ್ನ ಕಾರ್ಯದರ್ಶಿ ಶ್ರೀಮತಿ ಮಂಜುಳ, ಉಪಾಧ್ಯಕ್ಷರಾದ ಶ್ರೀನಿವಾಸ ಬಾಬು,ಸದಸ್ಯರಾದ ಗಂಗಾಧರ ಶೆಟ್ಟಿ, ವೀರಭದ್ರಪ್ಪ, ಸರಳ ಹಾಗೂ ನಾಗರತ್ನ ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು