ಚಿತ್ರದುರ್ಗ/ ಜೆ.ಎನ್ ಕೋಟೆ : ನ.18
ವರದಿ ಮತ್ತು ಫೋಟೊ_ ರವಿಕೆ.ಅಂಬೇಕರ್, 9900667740
ಮನುಷ್ಯನು ತನ್ನ ನಿತ್ಯ ಜೀವನದಲ್ಲಿ ಸರಿಯಾದ ಆಹಾರ ಕ್ರಮ ಮತ್ತು ನೈಸರ್ಗಿಕ ಜೀವನಶೈಲಿ ಅಳವಡಿಸಿಕೊಂಡರೆ ಆ ಮೂಲಕ ದೇಹದ ಸ್ವಯಂ-ಸ್ವಚ್ಛತೆ ಮತ್ತು ರೋಗಮುಕ್ತ ಜೀವನಕ್ಕೆ ಪ್ರಕೃತಿ ಚಿಕಿತ್ಸೆ ಸಹಕಾರಿಯಾಗಿದೆ ಎಂದು ಜೆ ಎನ್ ಕೋಟೆ ಸರ್ಕಾರಿ ಆಯುಷ್ ಚಿಕಿತ್ಸಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸಕ ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಸಹಕಾರದೊಂದಿಗೆ ಸರ್ಕಾರಿ ಆಯುಷ್ಮಾನ್ ಆಯುಷ್ ಆರೋಗ್ಯ ಕೇಂದ್ರ ಜೆ.ಎನ್.ಕೋಟೆ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಜೆ.ಎನ್.ಕೋಟೆ ಇವರು ಸಂಯುಕ್ತವಾಗಿ ಚಿತ್ರದುರ್ಗ ತಾಲ್ಲೂಕು ಜೆ ಎನ್ ಕೋಟೆ ಗ್ರಾಮದಲ್ಲಿ ಬುದ್ಧವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಾ ಪ್ರಕೃತಿ ಚಿಕಿತ್ಸೆ ಎನ್ನುವುದು ಪ್ರಕೃತಿಯಲ್ಲಿ ಲಭ್ಯವಿರುವ ಪಂಚಮಹಾಭೂತಗಳಾದ ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಅಂಶಗಳನ್ನು ಬಳಸಿ ಮನುಷ್ಯನ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ರೋಗಗಳನ್ನು ಗುಣಪಡಿಸುವ ಪ್ರಾಚೀನ ಹಾಗೂ ನೈಸರ್ಗಿಕ ವೈದ್ಯಕೀಯ ಪದ್ಧತಿಯಾಗಿದೆ. ಇದು ಕೇವಲ ರೋಗದ ಲಕ್ಷಣಗಳಿಗೆ ಚಿಕಿತ್ಸೆ ನೀಡುವುದಿಲ್ಲ, ಬದಲಿಗೆ ದೇಹವನ್ನು ಸಮಗ್ರವಾಗಿ ಶುದ್ಧೀಕರಿಸಿ ಆರೋಗ್ಯವನ್ನು ಕಾಪಾಡುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮ ಸಮುದಾಯ ಆರೋಗ್ಯಾಧಿಕಾರಿ ರಮೇಶ್ ಮಾತನಾಡಿ ಮಹಾತ್ಮ ಗಾಂಧಿಯವರು ಪ್ರಕೃತಿ ಚಿಕಿತ್ಸೆಯ ಬಲವಾದ ಪ್ರತಿಪಾದಕರಾಗಿದ್ದರು ಮತ್ತು 1945ರ ನವೆಂಬರ್ 18ರಂದೇ ಅವರು ಆಲ್ ಇಂಡಿಯಾ ನೇಚರ್ ಕ್ಯೂರ್ ಫೌಂಡೇಶನ್ ಟ್ರಸ್ಟ್ ನ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅವರ ಈ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಈ ಆಚರಣೆಯಮೂಲಕ ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಹೆಚ್ಚಿನ ಜನರಿಗೆ ತಲುಪಿಸುವುದಾಗಿದೆ ಎಂದು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಹಲವಾರು ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಯಿತು.
ಜೆ ಎನ್ ಕೋಟೆ ಗ್ರಾಮದ ಆರೋಗ್ಯ ಸುರಕ್ಷಣಾಧಿಕಾರಿ ರತ್ನಮ್ಮ, ಗ್ರಾಮದ ಹಿರಿಯರಾದ ಮಂಗಳಮ್ಮ, ಪ್ರೇಮ, ಗೌರಮ್ಮ, ಸಿದ್ದೇಶ್ವರ, ಈರಮ್ಮ ಇನ್ನಿತರರು ಪಾಲ್ಗೊಂಡಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು