ಚಿತ್ರದುರ್ಗ ನ. 18
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರಸಭೆ, ವಕ್ಸ್ ಬೋರ್ಡ್ ಹಾಗೂ ಜಿಲ್ಲಾ ಕಾಂಗ್ರೇಸ್ ಮತ್ತು ಕರ್ನಾಟಕ ಗೃಹ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ದಿ || ಸಿ.ಎ.ಕೆ.ಜುನೈದಿರವರ ತಂಗಿ ಮಗನಾದ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಸಯ್ಯದ್ ಅಫಾಖ್ ಅಹಮದ್ ರವರು ಮುಂದಿನ ದಿನದಲ್ಲಿ ನಡೆಯಲಿರುವ ಜಿಲ್ಲೆಯ ಹಿರಿಯೂರು ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ತಾವು ಶಿಕ್ಷಣ ಇಲಾಖೆಯಲ್ಲಿ ತಾವು ಮೂರು ದಶಕಗಳ ಸುದೀರ್ಘ ಸೇವಾವಧಿಯ ಅನುಭವ ಹೊಂದಿದ್ದು, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಮಗನಾಗಿದ್ದು, ಶಿಕ್ಷಣ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು ಹಿರಿಯೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲು ಇಚ್ಚಿಸಿರುತ್ತೇನೆ. ಇದರ ಜೊತೆಗೆ ಸರ್ಕಾರಿ ನೌಕರರ ಸಂಘ, ಮುಸ್ಲಿಂ ನೌಕರರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಸಿ ಮತ್ತು ಡಿ ನೌಕರರ ಸಂಘ, ಕರ್ನಾಟಕ ವಕ್ಸ್ಬೋರ್ಡ್ ಸಂಸ್ಥೆಯಲ್ಲಿ, ಅಹಿಂದಾ ನೌಕರರ ಸಂಘ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್, ಕರ್ನಾಟಕ ವಿಜ್ಞಾನ ಪರಿಷತ್, ಮುಸ್ಲಿಂ ಗ್ರಾಜುಯೆಟ್ ಅಸೋಸಿಯೇಷನ್ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿರುತ್ತೇನೆ.
ಹಿರಿಯೂರು ಕ್ಷೇತ್ರದ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ನಗರದ ಹಾಳಾಗಿರುವ ರಸ್ತೆ ದುರಸ್ತಿ, ವಿದ್ಯುತ್ಚಕ್ತಿ, ಕಂದಾಯ, ನಗರ ಸಭೆ, ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ, ಜಿಲ್ಲಾ ವಕ್ಸ್ ಬೋರ್ಡ್ ಯೋಜನೆಗಳು, ಬಿಡುಗಡೆಯಾದ ಅನುದಾನ, ಖರ್ಚು, ಚುನಾವಣೆ ಬಗ್ಗೆ, ಸಾರಿಗೆ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಬಗ್ಗೆ, ಅನಧಿಕೃತ ಡಿವೈಡರ್ ಬಗ್ಗೆ, ರೈತರ ಸಮಸ್ಯೆ, ಆಟೋ ಚಾಲಕರ ವಸತಿ ಸಮಸ್ಯೆ, ಭ್ರಷ್ಟಾಚಾರ ನಿರ್ಮೂಲನೆ, ಕಮಿಷನ್ ವ್ಯವಹಾರ, ಬಡವರ ಹಾಗೂ ಎಲ್ಲಾ ಜಾತಿಯ ವರ್ಗದ ಕಾರ್ಮಿಕರ, ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಇತ್ಯರ್ಥಪಡಿಸಲು ಶ್ರಮಿಸುತ್ತೇನೆ. ಇದರೊಂದಿಗೆ ಎರಡು ಬಾರಿ ವಿಧಾನ ಪರಿಷತ್ ಹಾಗೂ ಒಂದು ಬಾರಿ ವಿಧಾನಸಭೆಗೆ ಸ್ಪರ್ಧೆಯನ್ನು ಮಾಡಿದ ಅನುಭವವನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಮುಂಬರುವ ಹಿರಿಯೂರು ಉಪ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು