ಅಮೃತ ಮಹೋತ್ಸವದ ಕೃತಜ್ಞತಾ ಪರ್ವ ಉದ್ಘಾಟನೆ; ಸಹಕಾರ ಬ್ಯಾಂಕ್ಗಳು ಉದ್ಯೋಗ ಸೃಷ್ಟಿ ಮತ್ತು ಶ್ರಮಿಕರ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಗಣ್ಯರ ಕರೆ.
ಚಿತ್ರದುರ್ಗ ನ. 29
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ದೇಶದಲ್ಲಿ ದುಡಿಯುವ ಜನರು, ಶೋಷಣೆಗೆ ಒಳಗಾದವರು, ಸಮಾನ ಅವಕಾಶಗಳಿಂದ ವಂಚಿತರಾದವರು ಹಾಗೂ ತಮ್ಮ ಹಿತವನ್ನು ಕಾಪಾಡಿಕೊಳ್ಳಲು ಮಾತನಾಡುವ ಶಕ್ತಿ ಇಲ್ಲದವರ ಹಿತರಕ್ಷಣೆಯೇ ಸಹಕಾರ ಸಂಘಗಳ ಮೂಲ ಉದ್ದೇಶವಾಗಿದೆ ಎಂದು ಮಾಜಿ ಸಚಿವರಾದ ಎಚ್. ಏಕಾಂತಯ್ಯ ತಿಳಿಸಿದರು.
ನಗರದ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಹಳೇ ಮಾಧ್ಯಮಿಕ ಶಾಲಾ ಮೈದಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಪರ್ವದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಅವರು ಐಆವುದೇ ಸಹಕಾರಿ ಸಂಸ್ಥೆ ಜನತೆಯ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡು ದೀರ್ಘಕಾಲ ಕಾರ್ಯನಿರ್ವಹಿಸುವುದು ಸವಾಲಿನದ್ದಾಗಿದೆ ಆದರೆ ಚಿತ್ರದುರ್ಗದ ಮರ್ಚೆಂಟ್ಸ್ ಬ್ಯಾಂಕ್ ಕಳೆದ 75 ವರ್ಷಗಳಿಂದ ನಂಬಿಕೆ ಮತ್ತು ವಿಶ್ವಾಸ, ಸಾರ್ವಜನಿಕ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬೆಳೆದು ಬಂದಿರುವುದನ್ನು ಶ್ಲಾಘಿನೀಯ ಬ್ಯಾಂಕಿನ ಈ ಯಶಸ್ಸಿಗೆ ಕೇವಲ ಆಡಳಿತ ಮಂಡಳಿ ಮಾತ್ರ ಕಾರಣವಲ್ಲದೆ, ಸುಮಾರು ಆರು-ಏಳು ಸಾವಿರ ಸದಸ್ಯರ ಜಾಗೃತ ನಡವಳಿಕೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಸಿಬ್ಬಂದಿ ವರ್ಗವೂ ಕಾರಣವಾಗಿದೆ ಎಂದು ಹೇಳಿದರು.
ದೇಶದ ಶೇ. 90ಕ್ಕಿಂತ ಹೆಚ್ಚಿನ ಶ್ರಮಿಕ ವರ್ಗದವರ ಆರ್ಥಿಕ ಅಭಿವೃದ್ಧಿ ಮತ್ತು ಹಿತರಕ್ಷಣೆಗೆ ಸಹಕಾರ ಸಂಘ ಗಳು ಮೊದಲು ಆದ್ಯತೆ ನೀಡಬೇಕು ಸಮಾನತೆ, ಮಮತೆ ಹಾಗೂ ಘನತೆಯಿಂದ ಬದುಕುವ ಹೊಸ ಸಾಮಾ ಜಿಕ ವ್ಯವಸ್ಥೆ ನಿರ್ಮಾಣದ ಅಗತ್ಯವಿದೆ ದೇಶದಲ್ಲಿ ಶೂದ್ರರು ಶೇಕಡಾ 90ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಯಕ ಹಾಗೂ ಶ್ರಮದ ದುಡಿಮೆಯಿಂದ ಜೀವನ ನಡೆಸುತ್ತಿದ್ದಾರೆ ಅವರ ದುಡಿಮೆಯ ಫಲ ಅವರಿಗೆ ಸಿಗಬೇಕಾದರೆ ಮತ್ತು ಆರ್ಥಿಕ ಅಭಿವೃದ್ಧಿಯಾಗಬೇಕಾದರೆ ಸಹಕಾರ ಸಂಘಗಳು ಮೊದಲು ದುಡಿಯುವ ಜನರಿಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿ ಸಹಕಾರ ಸಂಘಗಳು ಕುಳಿತು ತಿನ್ನುವವರಿಗಲ್ಲದೆ, ದುಡಿದು ತಿನ್ನುವ ಜನರ ಹಿತವನ್ನು ಕಾಪಾಡುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಅಂತಹ ಕೆಲಸವನ್ನು ಈ ಸಹಕಾರ ಸಂಘ ಮಾಡುತ್ತಿದೆ ಸಮಾನತೆ, ಮಮತೆ ಹಾಗೂ ಘನತೆಯಿಂದ ಜೀವನ ನಡೆಸಲು ಸಾಧ್ಯವಾಗದ ಮತ್ತು ಅವುಗಳಿಂದ ವಂಚಿತರಾದ ಜನರ ಬದುಕಿಗಾಗಿ ಸಮಾನತೆ, ಮಮತೆ ಹಾಗೂ ಘನತೆಯಿಂದ ಕೂಡಿದ ಹೊಸ ಸಾಮಾಜಿಕ ವ್ಯವಸ್ಥೆಯನ್ನು ದೇಶದಲ್ಲಿ ರೂಪಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಸಂವಿಧಾನವು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ರಕ್ಷಣೆಯನ್ನು ನೀಡಿದ್ದರೂ, ಇತ್ತೀಚೆಗೆ ಸರ್ಕಾರಗಳು ಕೆಲವು ಕಾನೂನುಗಳನ್ನು ಜಾರಿಗೆ ತಂದು ಅಧಿಕಾರದಲ್ಲಿರುವವರಿಗೆ ವಿನಾಯಿತಿ ನೀಡಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿ ಅಧಿಕಾರದ ಅವಧಿಯಲ್ಲಿ ಅಥವಾ ನಿವೃತ್ತಿಯ ನಂತರವೂ ಸಿವಿಲ್ ಅಥವಾ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸದಂತೆ ಅಥವಾ ಕೇಸು ಹಾಕದಂತೆ ವಿನಾಯಿತಿ ನೀಡುವುದು ಸರಿಯೇ ಚುನಾವಣಾ ಆಯೋಗದ ಸದಸ್ಯರಿಗೂ ಇಂತಹ ವಿನಾಯಿತಿ ನೀಡಿರುವುದನ್ನು ಪ್ರಸ್ತಾಪಿಸಿದ ಅವರು, ಈ ಕಾನೂನುಗಳನ್ನು ಎಲ್ಲರಿಗೂ ಅನ್ವಯಿಸುವಂತಾದರೆ ಕಾನೂನು-ಸುವ್ಯವಸ್ಥೆಯ ಸ್ಥಿತಿ ಏನಾಗಬಹುದು ಎಂದು ಕೇಳಿದರು. ನಾಗರಿಕರು ಮತ್ತು ಚಿಂತಕರ ಜವಾಬ್ದಾರಿ: ಪ್ರಗತಿಪರ ಚಿಂತಕರು, ನಾಗರಿಕರು, ರಾಜಕಾರಣಿಗಳು ಮತ್ತು ಮಠಾಧೀಶರು ಇಂತಹ ವಿಷಯಗಳ ಬಗ್ಗೆ ನಿಷ್ಠುರವಾಗಿ ಸರಿ-ತಪ್ಪುಗಳನ್ನು ಮಾತನಾಡಬೇಕಾದ ಅಗತ್ಯವಿದೆ. ಸಾಮಾನ್ಯ ಜನರು ಮತ್ತು ಸಾರ್ವಜನಿಕರು ಇವುಗಳ ಬಗ್ಗೆ ಗಂಭೀರವಾಗಿ ಚಿಂತಿಸಿ, ನಿಷ್ಠುರವಾಗಿ ಆಲೋಚಿಸದಿದ್ದರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿ ಸಂಸ್ಥೆಗಳ ಬೆಳವಣಿಗೆಗೆ ಸದಸ್ಯರು ಮತ್ತು ಸಿಬ್ಬಂದಿಯ ಜಾಗರೂಕತೆ ಹಾಗೂ ನಂಬಿಕೆ ಅತ್ಯಗತ್ಯವಾಗಿದ್ದು, ಅದೇ ರೀತಿ ಪ್ರಜಾಪ್ರಭುತ್ವ ಮತ್ತು ಕಾನೂನಿನ ಸಮಾನತೆಯನ್ನು ಉಳಿಸಿಕೊಳ್ಳಲು ನಾಗರಿಕರು ಹಾಗೂ ಚಿಂತಕರು ನಿರ್ಭೀತವಾಗಿ ಸರಿ-ತಪ್ಪುಗಳ ಕುರಿತು ಚಿಂತಿಸಿ ನಿಲುವು ತಳೆಯಬೇಕು ಎಂದರು.

ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಮಾಜಿ ಸಚಿವರು ಹಾಗೂ ಶಾಸಕರು, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ. ಅಧ್ಯಕ್ಷರಾದ ಎಚ್.ಕೆ. ಪಾಟೀಲ್ ಮಾತನಾಡಿ ಕಳೆದ ಹತ್ತು ಅಥವಾ ಏಳೆಂಟು ವರ್ಷಗಳಿಂದ ಎಲ್ಲ ನಗರ ಬ್ಯಾಂಕ್ಗಳನ್ನು ಮುಚ್ಚಬೇಕು, ಸಣ್ಣ ಘಟಕಗಳು ಉಳಿಯಲು ಸಾಧ್ಯವಿಲ್ಲ ಮತ್ತು ದೊಡ್ಡ ಘಟಕಗಳು ಮಾತ್ರ ಉಳಿಯಬಲ್ಲವು ಎಂಬ ಧೋರಣೆ ಇತ್ತು. ರಿಸರ್ವ್ ಬ್ಯಾಂಕ್ನ ಚಿಂತನಾ ಕ್ರಮದಲ್ಲಿ ಬ್ಯಾಂಕ್ಗಳನ್ನು ವಿಲೀನಗೊಳಿಸಿ ದೊಡ್ಡ ಬ್ಯಾಂಕ್ ಮಾಡುವ ಪ್ರಕ್ರಿಯೆ ಇತ್ತು. ಆದರೆ ಸಹಕಾರಿಗಳು ತಮ್ಮ ಹೋರಾಟವನ್ನು ಮುಂದುವರಿಸಿದ್ದು, ಗ್ರಾಹಕರೊಂದಿಗೆ ವೈಯಕ್ತಿಕ ಗೌರವ ಮತ್ತು ಸಂಬಂಧ ಬೆಳೆಸಿಕೊಂಡು ಸಂಸ್ಥೆಗಳನ್ನು ಬೆಳೆಸುತ್ತಿರುವುದಾಗಿ ತಿಳಿಸಲಾಯಿತು. ಸರ್ಕಾರವಾಗಲಿ, ರಿಸರ್ವ್ ಬ್ಯಾಂಕ್ ಆಗಲಿ ಹಣಕಾಸಿನ ಬಲ ಅಥವಾ ಬೇರೆ ಬಲ ನೀಡಿ ನಡೆಸುತ್ತಿಲ್ಲ; ಸಾರ್ವಜನಿಕರ ವಿಶ್ವಾಸದಿಂದ ಸಂಸ್ಥೆಗಳು ಬೆಳೆಯುತ್ತಿವೆ ಎಂದರು.
ಕೃಷಿಯೇತರ ಪತ್ತಿನ ಸಹಕಾರ ಚಳವಳಿ ಯಶಸ್ವಿಯಾಗಿ ನಡೆದಿದ್ದು, ಬ್ಯಾಂಕ್ಗಳನ್ನು ಹೊರತುಪಡಿಸಿ ಉಳಿದ ಸಹಕಾರ ಸಂಸ್ಥೆಗಳಲ್ಲಿ 5 ಲಕ್ಷ 64 ಸಾವಿರ ಕೋಟಿ ರೂಪಾಯಿ ಲಾಭ ಗಳಿಸಲಾಗಿದೆ ಕರ್ನಾಟಕದಲ್ಲಿ 564 ಕೋಟಿ ರೂಪಾಯಿ ನಿವ್ವಳ ಲಾಭ ಮಾಡಲಾಗಿದೆ ಶೂನ್ಯ ಎನ್ಪಿಎ ಸಾಧನೆ ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ವಸೂಲಾತಿ ಅಧಿಕಾರಿಯಿಂದ ಮಾತ್ರ ಸಾಧ್ಯವಾಗಿಲ್ಲ ಸಹಕಾರಿಗಳು, ಷೇರುದಾರರು ಮತ್ತು ಬ್ಯಾಂಕಿನ ಹಿತೈಷಿಗಳ ಸಹಕಾರದಿಂದ ಮಾತ್ರ ಸಾಧ್ಯ ಯಾವುದೇ ಮೂಲದಿಂದ ಲಾಭ ಅಥವಾ ಆದಾಯ ತರದ ಸಾಲದ ಆಸ್ತಿ (ಎನ್ಪಿಎ) ಈ ಬ್ಯಾಂಕ್ನಲ್ಲಿ ಕಳೆದ 15 ವರ್ಷಗಳಿಂದ ಶೂನ್ಯ (0%) ಇದೆ ಎಂದು ತಿಳಿಸಿ ಸಹಕಾರಿಗಳ, ಷೇರುದಾರರ, ಹಿತೈಷಿಗಳ ಮತ್ತು ಸಿಬ್ಬಂದಿಯ ಸಾಮೂಹಿಕ ಸಹಕಾರ ಹಾಗೂ ಸಾರ್ವಜನಿಕರ ವಿಶ್ವಾಸದಿಂದ ಸಹಕಾರ ಬ್ಯಾಂಕ್ಗಳು ಸವಾಲುಗಳ ನಡುವೆಯೂ ಸದೃಢವಾಗಿ ಬೆಳೆಯುತ್ತಿದ್ದು, ಶೂನ್ಯ ಎನ್ಪಿಎ ಸೇರಿದಂತೆ ಮಹತ್ವದ ಸಾಧನೆಗಳನ್ನು ಮಾಡಿವೆ ಎಂದರು.
ಸಹಕಾರ ಕ್ಷೇತ್ರದ ಬೆಳವಣಿಗೆ, ರಿಸರ್ವ್ ಬ್ಯಾಂಕ್ ನೀತಿಗಳು, ಹೊಸ ರಾಷ್ಟ್ರೀಯ ಸಂಸ್ಥೆಯ ಸ್ಥಾಪನೆ ಹಾಗೂ ಬ್ಯಾಂಕ್ಗಳು ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕಾದ ಅಗತ್ಯವಿದೆ ನಗರ ಸಹಕಾರ ಬ್ಯಾಂಕ್ಗಳಿಗಾಗಿ ರಾಷ್ಟ್ರೀಯ ನಗರ ಸಹಕಾರ ಬ್ಯಾಂಕ್ಗಳಹಣಕಾಸು ಅಭಿವೃದ್ಧಿ ನಿಗಮ (ಎನ್ಯುಸಿಎಫ್ಡಿಸಿ) ಎಂಬ ಪ್ರಸ್ತಾವನೆ ಬಂದಿದ್ದು, ಇದು ತಾಂತ್ರಿಕ ಮಾರ್ಗದರ್ಶನ ನೀಡುವುದರ ಜೊತೆಗೆ ಮುಂದಿನ ಎರಡು-ಮೂರು ವರ್ಷಗಳಲ್ಲಿ ನಿಯಂತ್ರಣಾಧಿಕಾರದ ಪಾತ್ರವನ್ನೂ ವಹಿಸಲಿದೆ ಇದರಲ್ಲಿ ಈಗಾಗಲೇ 350 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿದ್ದು, ಕೇಂದ್ರ ಸರ್ಕಾರದಿಂದಲೂ 250 ಕೋಟಿ ರೂಪಾಯಿ ಅನುದಾನ ದೊರೆತಿದೆ ಎಂದು ತಿಳಿಸಿ ಬ್ಯಾಂಕ್ ಕೇವಲ ಲಾಭದಾಯಕತೆಯೊಂದೇ ಮುಖ್ಯವಲ್ಲ, ಸೇವೆಯೇ ಪ್ರಮುಖ ಅಂಶವಾಗಿದೆ ಬ್ಯಾಂಕ್ಗಳು ಸಾಲ ಮಂಜೂರು ಮಾಡುವಾಗ ಉದ್ಯೋಗ ಸೃಷ್ಟಿಸುವ ಯೋಜನೆಗಳು, ಘಟಕಗಳು ಮತ್ತು ಉದ್ಯಮಗಳಿಗೆ ಆದ್ಯತೆ ನೀಡಬೇಕು ಹಾಗೂ ಉದ್ಯೋಗ ಸೃಷ್ಟಿಯೇ ಮೊದಲ ಆದ್ಯತೆಯಾಗಬೇಕು ಎಂದು ಕರೆ ನೀಡಿ ಯುವಕರು ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕು ಎಂದೂ ಮನವಿ ಮಾಡಲಾಯಿತು.
ಸಹಕಾರ ಕ್ಷೇತ್ರವು ಸೇವಾ ಮನೋಭಾವ ಮತ್ತು ಜನಸಂಪರ್ಕದ ಆಧಾರದ ಮೇಲೆ ಬೆಳೆದು ಬಂದ ಬಲಿಷ್ಠ ಆರ್ಥಿಕ ಶಕ್ತಿಯಾಗಿದ್ದು, ಹೊಸ ಸಂಸ್ಥೆಗಳ ಬೆಂಬಲ ಮತ್ತು ಸರ್ಕಾರದ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಗೆ ಪ್ರಥಮ ಆದ್ಯತೆ ನೀಡಿ ಇನ್ನಷ್ಟು ಬಲವಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಸಂಸದರಾದ ಗೋವಿಂದ ಕಾರಜೋಳ, ಮರ್ಚೆಂಟ್ಸ್ ಬ್ಯಾಂಕ್ನ ನಿರ್ದೇಶಕರಾದ ಎಸ್.ಆರ್. ಲಕ್ಷ್ಮೀಕಾಂತ ರೆಡ್ಡಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ದ ಅಧ್ಯಕ್ಷರಾದ ಜಿ. ನಂಜನಗೌಡ ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಮಂಜುನಾಥ್ ಉಪಸ್ಥಿತರಿದ್ದರು
ಜ್ಯೋತಿ ಪ್ರಕಾಶ್ ನಾಡಗೀತೆಯನ್ನು ಹಾಡಿ, ಪ್ರಾರ್ಥಿಸಿದರು, ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಕೆ.ಆರ್.ಮಲ್ಲಿಕಾರ್ಜನ್ ಸ್ವಾಗತಿಸಿದರು, ಮರ್ಚೆಂಟ್ಸ್ ಬ್ಯಾಂಕ್ನ ಅಧ್ಯಕ್ಷರಾದ ರಘುರಾಮ ರೆಡ್ಡಿ ಕಾರ್ಯ ಕ್ರಮದ ಅಧ್ಯಕ್ಷತೆವಹಿಸಿ ಪ್ರಸ್ತಾವಿಕವಾಗಿ ಬ್ಯಾಂಕ್ನ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕರಾದ ಸುರೇಶ್ ರಾಜು ವಂದಿಸಿದರು. ಕಾರ್ಯಕ್ರಮದ ನಂತರ ಮೈಸೂರಿನ ಎ.ಹರ್ಷ ತಂಡ ಇವರಿಂದ ಸಾಂಸ್ಕೃತಿಕ ಸಂಗೀತ ಸಂಜೆ ನಡೆಯಿತು.
ಈ ಸಂದರ್ಭದಲ್ಲಿ ಮರ್ಚೆಂಟ್ಸ್ ಬ್ಯಾಂಕ್ನ ಉಪಾಧ್ಯಕ್ಷ ಎಲ್.ಇ.ಶ್ರೀನಿವಾಸಬಾಬು, ನಿರ್ದೇಶಕರುಗಳಾದ ಎಲ್.ಜಯಣ್ಣ, ಪಿ.ಎಲ್. ಸುರೇಶ್ರಾಜು, ರಾಜಾನಾಯ್ಕ, ಶ.ಮಂಜುನಾಥ್, ಟಿ.ಹೆಚ್.ರಾಜಪ್ಪ, ಮುಕುಂದ ರಾವ್, ಸುರೇಶ್, ಡಿ.ಪ್ರಕಾಶ್, ಇಂದ್ರಮ್ಮ, ಸುಜಾತ, ವೃತ್ತಿಪರ ನಿರ್ದೇಶಕರುಗಳಾದ ರಾಜೀವ್, ಕಾರ್ತಿಕ್, À ಸೋಮಶೇಖರ್ ಹಾಜರಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು
📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು