ಚಳ್ಳಕೆರೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ : ತಪ್ಪಿದ ಬಾರಿ ಅನಾಹುತ…!

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 9739875729

ಚಳ್ಳಕೆರೆ : (ಫೆ.27) :  ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂರು ಮನೆಗಳು ಹಾಗೂ ಮನೆಲಿದ್ದ ಅಂಗಡಿ ಸುಟ್ಟಿರುವ ಘಟನೆ ನಡೆದಿದೆ.

ವಾಸದ ಮನೆಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿಯಿಂದ ಮನೇಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ ಬರೆಗಳು ಹಾಗೂ ಅಂಗಡಿಯ ವಸ್ತುಗಳು ಸುಟ್ಟಿದ್ದು ಸುಮಾರು 3 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಇಂದು(ಮಂಗಳವಾರ) ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಯಲಗಟ್ಟೆ ಗೊಲ್ಲರಹಟ್ಟಿಯ ಚಂದ್ರಣ್ಣ ಹಾಗೂ ಈರಣ್ಣ ಎಂಬುವರ ಮನೆಗಳಿಗೆ ಹಾನಿಯಾಗಿದೆ  . ಸಿಲಿಂಡರ್ ಸ್ಫೋಟಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಮನೆಯಲ್ಲಿ ಇದ್ದ ದವಸ ಧಾನ್ಯ ಬಟ್ಟೆ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ.

ಬೆಂಕಿ ಕಾಣಿಸಿಕೊಡ ತಕ್ಷಣವೇ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದು ಅಗ್ನಿಶಾಮಕ ದಳದವರು ಗ್ರಾಮಕ್ಕೆ ಬರುವ ಸಮಯಕ್ಕೆ ಮನೆಯ ಮೇಲ್ಚಾವಣಿ ಸುಟ್ಟಿದ್ದು, ಮನೆಯಲ್ಲಿ ಇದ್ದಂತಹ ವಸ್ತುಗಳೆಲ್ಲ ಸುಟ್ಟಿವೆ.  ಈ ಅಗ್ನಿ ಅನಾಹುತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಘಟನಾ ವಿಷಯ ತಿಳಿಯುತ್ತಿದ್ದಂತೆ ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿ, ಅಗ್ನಿ ಅನಾಹುತದಲ್ಲಿ ಮನೆ ಕಳೆದುಕೊಂಡವರಿಗೆ ವೈಯಕ್ತಿಕವಾಗಿ ಹಣದ ಸಹಾಯ ಮಾಡಿದ್ದಾರೆ. ಹಾಗೂ ಸ್ಟುಡಿಯೋ ಮಾಲೀಕ ಭಾನು ಸಹ ವೈಯಕ್ತಿಕ ಧನ ಸಹಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ ಶಶಿಧರ್ ಭಾನು, ವೀರೇಶ್, ಕಾಂಗ್ರೆಸ್ ಮುಖಂಡ ವೀರೇಶ್ ವೆಂಕಟೇಶ್, ಸಿರಿಯಣ್ಣ, ವೀರಣ್ಣ, ಸೇರಿದಂತೆ ಗ್ರಾಮಸ್ಥರು, ಮುಖಂಡರು ಇದ್ದರು.

The post ಚಳ್ಳಕೆರೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ : ತಪ್ಪಿದ ಬಾರಿ ಅನಾಹುತ…! first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/lMJF9gu
via IFTTT

Leave a Reply

Your email address will not be published. Required fields are marked *