ಇಂಧನ ಇಲಾಖೆ ನೌಕರರ ವೇತನ ಪರಿಷ್ಕರಣೆ ಭರವಸೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, (ಮಾ.06) :  ಇಂಧನ ಇಲಾಖೆ ನೌಕರರ  ವೇತನ ಪರಿಷ್ಕರಣೆಯನ್ನು ಕುರಿತು ಆರ್ಥಿಕ ಇಲಾಖೆ ಮತ್ತು ಇಂಧನ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ . ಆದಷ್ಟೂ ಶೀಘ್ರ ಪರಿಷ್ಕರಣೆ ಮಾಡಿ ಬಹಳ ವರ್ಷದ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಸೋಮವಾರ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ಮಿಸಿರುವ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಹೊಸ ಕಟ್ಟಡಗಳ ಉದ್ಘಾಟನೆ ಜೊತೆಗೆ ಸಲಕರಣೆಗಳ ಸಾಗಾಣಿಕೆಗೆ ಬೆಸ್ಕಾಂ ಖರೀದಿಸಿರುವ 25 ಹೊಸ ಲಾರಿಗಳಿಗೆ ಮುಖ್ಯಮಂತ್ರಿಯವರು ಹಸಿರು ನಿಶಾನೆ ತೋರಿದರು.

The post ಇಂಧನ ಇಲಾಖೆ ನೌಕರರ ವೇತನ ಪರಿಷ್ಕರಣೆ ಭರವಸೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ first appeared on Kannada News | suddione.

from ರಾಜ್ಯ ಸುದ್ದಿ – Kannada News | suddione https://ift.tt/4aQIZV0
via IFTTT

Leave a Reply

Your email address will not be published. Required fields are marked *