IND vs AUS: ಟಾಸ್ ಗೆದ್ದ ಪಾಂಡ್ಯ, ರಾಹುಲ್​ಗೆ ಅವಕಾಶ; ಹೀಗಿದೆ ಭಾರತ ತಂಡ

ind vs aus 1st ODI playing xi 1st odi toss hardik pandya steve smith in Kannada

ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವೆ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು ನಡೆಯುತ್ತಿದೆ. ರೋಹಿತ್ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಭಾರತ ತಂಡದ ನಾಯಕತ್ವ ವಹಿಸಲಿದ್ದು, ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ (Steve Smith) ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವಕಪ್ (World Cup) ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಇದರೊಂದಿಗೆ ಎರಡೂ ತಂಡಗಳು ವಿಶ್ವಕಪ್‌ಗೆ ತಮ್ಮ ಸಿದ್ಧತೆಯನ್ನು ಪರೀಕ್ಷಿಸುವ ಅವಕಾಶವನ್ನು ಪಡೆದುಕೊಂಡಿವೆ. ಈಗಾಗಲೇ ಪಂದ್ಯದ ಟಾಸ್ ನಡೆದಿದ್ದು, ಟಾಸ್ ಗೆದ್ದ ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗದ ಪಟ್ಟಿಯೂ ಹೊರಬಿದ್ದಿದೆ.

ಭಾರತ-ಆಸ್ಟ್ರೇಲಿಯಾ ಮುಖಾಮುಖಿ ವರದಿ

ಭಾರತ ಮತ್ತು ಆಸ್ಟ್ರೇಲಿಯ ನಡುವೆ ಈ ಪಂದ್ಯದಲ್ಲಿ ನಿಕಟ ಹೋರಾಟ ನಡೆಯುವುದು ನಿಶ್ಚಿತ. ಏಕದಿನ ಮಾದರಿಯಲ್ಲಿ, ಉಭಯ ತಂಡಗಳು ತಮ್ಮ ಕೊನೆಯ ಐದು ಪಂದ್ಯಗಳನ್ನು ಗೆದ್ದಿವೆ. ಮತ್ತೊಂದೆಡೆ, ಈ ಎರಡು ತಂಡಗಳ ನಡುವಿನ ಕೊನೆಯ ಐದು ಏಕದಿನ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಟೀಂ ಇಂಡಿಯಾ 3 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಎರಡು ಪಂದ್ಯಗಳನ್ನು ಗೆದ್ದಿದೆ.

IND vs AUS 1st ODI Live Score: ಟಾಸ್ ಗೆದ್ದ ಭಾರತ; ಉಭಯ ತಂಡಗಳು ಹೀಗಿವೆ

ಮುಂಬೈನಲ್ಲಿ ಟೀಂ ಇಂಡಿಯಾಗೆ ಸೋಲು

ಕಳೆದ ಬಾರಿ ಮುಂಬೈನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾದಾಗ ಆತಿಥೇಯ ತಂಡ ಹೀನಾಯವಾಗಿ ಸೋಲನುಭವಿಸಿತ್ತು. 256 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ಕೇವಲ 38 ಓವರ್‌ಗಳಲ್ಲಿ ಸಾಧಿಸಿತ್ತು. ಫಿಂಚ್ ಮತ್ತು ವಾರ್ನರ್ ಶತಕ ಬಾರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ 10 ವಿಕೆಟ್ ಜಯ ತಂದುಕೊಟ್ಟಿದ್ದರು.

ಭಾರತ ತಂಡ

ಶುಭ್​ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮದ್ ಶಮಿ, ಮೊಹಮದ್ ಸಿರಾಜ್,ಕುಲ್ದೀಪ್ ಯಾದವ್.

ಆಸ್ಟ್ರೇಲಿಯಾ ತಂಡ

ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಜೋಶ್ ಇಂಗ್ಲಿಸ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-aus-1st-odi-playing-xi-1st-odi-toss-hardik-pandya-steve-smith-in-kannada-psr-au14-537980.html

Leave a Reply

Your email address will not be published. Required fields are marked *