ನಿಯಂತ್ರಣ ತಪ್ಪಿ ಜನ ಜಂಗುಳಿ ಮಧ್ಯೆ ನುಗ್ಗಿದ ಕಾರು : ಒಂಭತ್ತು ಜನರ ಸಾವು

Ahmedabad Car Accident: ಅಪಘಾತವಾಗಿರುವುದನ್ನು ನೋಡಲು ಅಲ್ಲಿ ಸೇರಿದ್ದ ಜನ.  ಅದೇ ಜನರ ಮೇಲೆ ಹರಿಯಿತು ಕಾರು. 9 ಮಂದಿ ಸಾವು, ಅನೇಕರಿಗೆ ಗಾಯ.

Ahmedabad Car Accident : ಗುಜರಾತ್ ನ ಅಹಮದಾಬಾದ್ ನಲ್ಲಿರುವ ಇಸ್ಕಾನ್ ಸೇತುವೆಯ ಮೇಲೆ ದೊಡ್ಡ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಜನ ಜಂಗುಳಿ ಮಧ್ಯೆ ನುಗ್ಗಿದೆ. ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, 15ರಿಂದ 20 ಮಂದಿ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಅದೇ ಸೇತುವೆಯಲ್ಲಿ ಅಪಘಾತ ಸಂಭವಿಸಿದ್ದರಿಂದ ಅಲ್ಲಿ ಜನ ಸೇರಿದ್ದರು. ಆಗ ಇದ್ದಕ್ಕಿದ್ದಂತೆ ವೇಗವಾಗಿ ಬಡ ಜಾಗ್ವಾರ್ ಕಾರು ಅಲ್ಲಿ ಸೇರಿದ್ದ ಜನರ ಮೇಲೆ ಹರಿದಿದೆ. ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡಾ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೋಲೀಸ್ ಮತ್ತು ಸ್ಥಳೀಯಾಡಳಿತ  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಭೀಕರ ಅಪಘಾತದಲ್ಲಿ 9 ಮಂದಿ  ಸಾವು : 
ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಗವಾಗಿ ಬಂದ ಕಾರು ಸೇತುವೆ ಮೇಲೆ ಸೇರಿದ್ದ ಜನರ ಮೇಲೆ ಹರಿದ ಪರಿಣಾಮ  9 ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಗುರುತಿಸಿದ ಬಳಿಕ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಈ   ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ.

ಈ ಅಪಘಾತ ಹೇಗೆ ಸಂಭವಿಸಿತು? :
ಮಾಹಿತಿಯ ಪ್ರಕಾರ, ನಿನ್ನೆ ರಾತ್ರಿ 1.15 ರ ಸುಮಾರಿಗೆ ಸರ್ಖೇಜ್-ಗಾಂಧಿನಗರ ಹೆದ್ದಾರಿಯಲ್ಲಿ ಅಹಮದಾಬಾದ್‌ನ ಇಸ್ಕಾನ್ ಸೇತುವೆಯ ಮೇಲೆ ಈ ಭೀಕರ ಅಪಘಾತ ಸಂಭವಿಸಿದೆ. ಈ ರಸ್ತೆ ಹೆಚ್ಚಾಗಿ ಸಂಚಾರ ದಟ್ಟಣೆಯಿಂದ ಕೂಡಿದೆ. ಥಾರ್ ಮತ್ತು ಟ್ರಕ್ ಡಿಕ್ಕಿಯಾದುದನ್ನು ನೋಡಲು ಜನರು ಇಲ್ಲಿ ಜಮಾಯಿಸಿದ್ದರು. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಂದ ಕಾರು ಜನಸಂದಣಿಯ ಮೇಲೆ ಹರಿದಿದೆ. ಕಾರು ಅತ್ಯಂತ ವೇಗವಾಗಿ ಚಲಿಸುತ್ತಿದ್ದು, ನಿಯಂತ್ರಣ ತಪ್ಪಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. 

ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು ? : 
ವರದಿಗಳ ಪ್ರಕಾರ, ವೇಗವಾಗಿ ಬಂದ ಕಾರು ಪ್ರದೇಶದ ಕಡೆ ರಾಜ್ ಪಥ್ ಕ್ಲಬ್ಗೆ ಹೋಗುತ್ತಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕೆಲವರು ಗಾಳಿಯಲ್ಲಿ ಹಾರಿ ಹಲವು ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಈ ಘಟನೆ ಹೃದಯ ವಿದ್ರಾವಕವಾಗಿತ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. 

Source : https://zeenews.india.com/kannada/india/ahmedabad-car-accident-9-death-many-injured-146910

Leave a Reply

Your email address will not be published. Required fields are marked *