Tomato Price:ನನ್ನ ಶ್ರಮಕ್ಕೆ ಈ ವರ್ಷ ಪ್ರತಿಫಲ ಸಿಕ್ಕಿದೆ. ಹನ್ನೆರಡು ಎಕರೆಯಲ್ಲಿ ಟೊಮ್ಯಾಟೋ ಬೆಳೆದು ಇದುವರೆಗೆ ಎರಡು ಕೋಟಿ ಎಂಬತ್ತು ಲಕ್ಷ ಆದಾಯ ಗಳಿಸಿದ್ದೇನೆ ಎನ್ನುತ್ತಾರೆ ರೈತ ಈಶ್ವರ್. ಒಟ್ಟಿನಲ್ಲಿ ಪಟ್ಟ ಶ್ರಮಕ್ಕೆ ಯಾವತ್ತಿದ್ರೂ ಪ್ರತಿಫಲ ಸಿಗುತ್ತೆ ಎಂಬುದಕ್ಕೆ ರೈತ ಈಶ್ವರ್ ಗಾಯ್ಕರ್ ಉತ್ತಮ ನಿದರ್ಶನವಾಗಿದ್ದಾರೆ.

Tomato Price: ದೇಶದಲ್ಲಿ ಟೊಮ್ಯಾಟೋ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಈ ನಡುವೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ಕೇವಲ ಒಂದೇ ತಿಂಗಳಲ್ಲಿ ಟೊಮ್ಯಾಟೋ ಮಾರಿ ಬರೋಬ್ಬರಿ ಎರಡು ಕೋಟಿ ಎಂಬತ್ತು ಲಕ್ಷ ರೂಪಾಯಿ ಆದಾಯ ಗಳಿಸಿ ಕೋಟ್ಯಧಿಪತಿಯಾಗಿದ್ದಾರೆ.
ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನ ಈಶ್ವರ್ ಗಾಯ್ಕರ್ ಮತ್ತು ಆತನ ಪತ್ನಿ ಈಗ ಹಿಂದೆ ತಿರುಗಿ ನೋಡುವ ಮಾತೇ ಇಲ್ಲ. ಈಗ ತಮ್ಮ ಬಳಿ ಉಳಿದಿರುವ ಸುಮಾರು ನಾಲ್ಕು ಸಾವಿರ ಬಾಕ್ಸ್ ಟೊಮ್ಯಾಟೋ ಮಾರಿ ಈ ದಂಪತಿ ಮೂರೂವರೆ ಕೋಟಿ ಗಳಿಸುವ ಗುರಿ ಹೊಂದಿದ್ದಾರೆ. ದೇಶದಲ್ಲಿ ಟೊಮ್ಯಾಟೋ ಅಭಾವ ಹಿನ್ನೆಲೆ ಬೆಲೆ ಮತ್ತಷ್ಟು ಜಾಸ್ತಿ ಆಗುತ್ತಿದ್ದು, ಈ ದಂಪತಿ ತಮ್ಮ ಗುರಿ ಮುಟ್ಟುವಲ್ಲಿ ಅನುಮಾನವೇ ಇಲ್ಲ. ಇದು ಕೇವಲ ಒಂದು ದಿನದ ದುಡಿಮೆ ಅಲ್ಲ. ನಾನು ಸುಮಾರು ಹನ್ನೆರಡು ಎಕರೆ ಜಮೀನಿನಲ್ಲಿ ಕಳೆದ ಆರೇಳು ವರ್ಷಗಳಿಂದ ಟೊಮ್ಯಾಟೋ ಬೆಳೆಯುತ್ತಿದ್ದೇನೆ. ಹಲವು ಬಾರಿ ನಾನು ನಷ್ಟ ಅನುಭವಿಸಿದ್ದೇನೆ. ಆದರೂ ನಾನು ನನ್ನ ಆಶಾಭಾವನೆ ಬಿಡದೆ ನನ್ನ ಕಾಯಕ ಮಾಡುತ್ತಿದ್ದೇನೆ. ಎರಡು ವರ್ಷಗಳ ಹಿಂದು ಸುಮಾರು ಇಪ್ಪತ್ತು ಲಕ್ಷ ನಷ್ಟ ಅನುಭವಿಸಿದ್ದೇನೆ. ಆದರೂ ನಾನು ಟೊಮ್ಯಾಟೋ ಬೆಳೆಯುವುದನ್ನು ನಿಲ್ಲಿಸಿಲ್ಲ ಎಂದು ಈ ರೈತ ತಮ್ಮ ಛಲದ ಬಗ್ಗೆ ವಿವರಿಸಿದ್ದಾರೆ.
ನನ್ನ ಶ್ರಮಕ್ಕೆ ಈ ವರ್ಷ ಪ್ರತಿಫಲ ಸಿಕ್ಕಿದೆ. ಹನ್ನೆರಡು ಎಕರೆಯಲ್ಲಿ ಟೊಮ್ಯಾಟೋ ಬೆಳೆದು ಇದುವರೆಗೆ ಎರಡು ಕೋಟಿ ಎಂಬತ್ತು ಲಕ್ಷ ಆದಾಯ ಗಳಿಸಿದ್ದೇನೆ ಎನ್ನುತ್ತಾರೆ ರೈತ ಈಶ್ವರ್. ಒಟ್ಟಿನಲ್ಲಿ ಪಟ್ಟ ಶ್ರಮಕ್ಕೆ ಯಾವತ್ತಿದ್ರೂ ಪ್ರತಿಫಲ ಸಿಗುತ್ತೆ ಎಂಬುದಕ್ಕೆ ರೈತ ಈಶ್ವರ್ ಗಾಯ್ಕರ್ ಉತ್ತಮ ನಿದರ್ಶನವಾಗಿದ್ದಾರೆ. ಕೃಷಿಯಲ್ಲೂ ಕೋಟಿ ಕೋಟಿ ಆದಾಯ ಬರುತ್ತೆ. ಕೃಷಿ ಒಂದಲ್ಲ ಒಂದು ದಿನ ರೈತನ ಕೈ ಹಿಡಿಯುತ್ತೆ. ಭೂಮಿ ತಾಯಿ ಕೈ ಹಿಡಿದರೆ ಆ ರೈತನ ಬದುಕು ಹೇಗೆ ಬದಲಾಗಿ ಹೋಗುತ್ತೆ ಅನ್ನೋದು ಈಶ್ವರ್ ಅವರ ಲಾಭದಿಂದಲೇ ಗೊತ್ತಾಗುತ್ತೆ.
ಇನ್ನು ದೇಶದಲ್ಲಿ ಟೊಮ್ಯಾಟೊ ದರ ಭಾರೀ ಏರಿಕೆ ಕಾಣುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲು ಮುಂದಾಗಿದೆ. ರೈತರಿಂದ ಟೊಮ್ಯಾಟೊ ಖರೀದಿಸಿ ಕೆಲವು ನಗರಗಳಲ್ಲಿ ಸಬ್ಸಿಡಿ ರೂಪದಲ್ಲಿ ಕಡಿಮೆ ಬೆಲೆಗೆ ಮಾರಲು ವ್ಯವಸ್ಥೆ ಮಾಡುತ್ತಿದೆ.
Views: 0