ನೋಡ ನೋಡುತ್ತಿದ್ದಂತೆ ಮಾವುತನನ್ನು ತುಳಿದು ಸಾಯಿಸಿದ ಆನೆ; ಹೃದಯ ವಿದ್ರಾವಕ ವಿಡಿಯೋ ವೈರಲ್​.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಆನೆಗೆ ಮಾವುತ ಸರಿಯಾಗಿ ನಿಲ್ಲುವಂತೆ ಸೂಚಿಸುತ್ತಾನೆ. ಕೆಲಕಾಲ ಮಾವುತನ ಮಾತನ್ನು ಕೇಳುವ ಆನೆ ಆ ಬಳಿಕ ಆತನನ್ನು ನೆಲಕ್ಕೆ ಹಾಕಿ ಹೊಸಗಲು ಶುರು ಮಾಡುತ್ತದೆ. ಬಳಿಕ ತನ್ನ ಸೊಂಡಿಲಿನಿಂದ ಎತ್ತಿ ಮಾವುತನನ್ನು ಬಿಸಾಡುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಇಡುಕ್ಕಿ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೃತರನ್ನು ನೀಲೇಶ್ವರಂ ಮೂಲದ ಬಾಲಕೃಷ್ಣನ್​ ಎಂದು ಗುರುತಿಸಲಾಗಿದ್ದು, ಕಲ್ಲರ್​ನಲ್ಲಿ ಅಕ್ರಮ ಆನೆ ಸಫಾರಿ ನಡೆಸುತ್ತಿದ್ದದ್ದು, ಮಾವುತನ ಹತ್ಯೆಯ ಬಳಿಕ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಕ್ರಮ ಆನೆ ಸಫಾರಿ ಹಾಗೂ ಮಾವುತನ ಹತ್ಯೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸಫಾರಿಯಲ್ಲಿರುವ ಆನೆಗಳು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲಾಗಿಲ್ಲ. ಈ ಸಂಬಂಧ ಮಾಲೀಕರಿಗೆ ನೋಟಿಸ್​ ನೀಡಲಾಗಿದ್ದು, ಆನೆಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸುವಂತೆ ಸೂಚಿಸಲಾಗಿದೆ. ಇದಲ್ಲದೆ ರಾಜ್ಯದಲ್ಲಿ ಈ ರೀತಿಯ ಅನೇಕ ಸಫಾರಿಗಳು ತಲೆ ಎತ್ತಿದ್ದು, ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇಡುಕ್ಕಿ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Source : https://m.dailyhunt.in/news/india/kannada/vijayvani-epaper-vijaykan/noda+noduttiddante+maavutanannu+tulidu+saayisidha+aane+hrudaya+vidraavaka+vidiyo+vairal+-newsid-n618909947?listname=topicsList&index=43&topicIndex=1&mode=pwa&action=click

Leave a Reply

Your email address will not be published. Required fields are marked *