ವರದಿ ಹಾಗೂ ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಏ. 30 ವಿಶ್ವ ಗುರು, ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವಣ್ಣನವರ ಜಯಂತ್ಸೋತ್ಸವದ ಅಂಗವಾಗಿ ವೀರಶೈವ ಸಮಾಜದ ಹಾಗೂ ಜಿಲ್ಲಾಡಳಿತದವತಿಯಿಂದ ಶ್ರೀ ನೀಲಕಂಠೇಶ್ವರ ದೇವಾಲಯದಿಂದ ಶ್ರೀ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ತಲೆಗೆ ಬಸವೇಶ್ವರ ಭಾವಚಿತ್ರ ಇರುವ ಟೋಪಿ ಹಾಗೂ ಶಾಲನ್ನು ಹಾಕಲಾಯಿತು. ಇದರಲ್ಲಿ ಕಹಳೆ, ಟ್ಯಾಷ್ಯೊ, ತಟ್ಟೆರಾಯ, ಕೀಲು ಕುದುರೆ ಸೇರಿದಂತೆ ವಿವಿಧ ರೀತಿಯ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಬೆಳ್ಳಿ ರಥದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ವಿಶೇಷವಾದ ಅಲಂಕಾರವನ್ನು ಮಾಡುವುದರ ಮೂಲಕ ಪೂಜೆಯನ್ನು ಸಲ್ಲಿಸಿದ ವೀರಶೈವ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿಯವರು ಮೆರವಣಿಗೆಗೆ ಚಾಲನೆ ನೀಡಿದರು.
ಮಧ್ಯಾಹ್ನ 3 ಗಂಟೆಯಿಂದ ಮೆರವಣಿಗೆಯೂ ಸಂತೇಪೇಟೆವೃತ್ತ, ಅನೆಬಾಗಿಲು, ಚಿಕ್ಕಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ದೊಡ್ಡಪೇಟೆ, ರಂಗಯ್ಯನಬಾಗಿಲು, ಬಸವಮಂಟಪ, ಗುರುಭವನ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಮಹಾವೀರವೃತ್ತ, ಎಸ್.ಬಿ.ಎಂ.ವೃತ್ತ, ಬಿ.ಡಿ.ರಸ್ತೆಯ ಮೂಲಕ ಮರಳಿಶ್ರೀ ನೀಲಕಂಠೇಶ್ವರ ದೇವಾಲಯ ತಲುಪಿತು.
ಈ ಮೆರವಣಿಗೆಯಲ್ಲಿ ಶ್ರೀ ಜಗದ್ಗುರು ಮುರಾಘರಾಜೇಂದ್ರ ಬೃಹನ್ಮಠ, ವೀರಶೈವ ಸಮುದಾಯದ ವಿವಿಧ ಸಂಘಟನೆಯ ನೌಕರರು, ಪದಾಧಿಕಾರಿಗಳು, ಸಿಬ್ಬಂದಿ ವರ್ಗ, ಜಂಗಮ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾ, ಪಂಚಮಸಾಲಿ ಸಂಘ, ಸಾಧು-ಸದ್ದರ್ಮ, ಶಿವಸಿಂಪಿ, ಮಹಿಳಾ ಘಟಕ, ಗಾಣಿಗ, ಕುಂಚಿಟಿಗ, ಹೇಮರೆಡ್ಡಿ ಮಲ್ಲಮ್ಮ, ಕುಂಬಾರ, ಹಡಪದ, ನೊಳಂಬ ಸಮಾಜ ಯುವ ವೇದಿಕೆ, ಯುವ ಘಟಕ ಸೇರಿದಂತೆ ಇತರೆ ಸಂಘಟನೆಗಳ ಪದಾಧಿಕಾರಿಗಳು ಚಿತ್ರದುರ್ಗದ ಸುತ್ತಾ-ಮುತ್ತಲ್ಲಿನ ಜನತೆ ಭಾಗವಹಿಸಿದ್ದರು.