Anti Ageing Leaves: ನಮಗೆ ವಯಸ್ಸಾಗದಂತೆ ತಡೆಯುವ ಅಂದರೆ ವಯಸ್ಸಾಗುತ್ತಿದ್ದರೂ ವಯೋ ಸಹಜ ಕಾಯಿಲೆಗಳಿಂದ ನಮ್ಮನ್ನು ದೂರ ಉಳಿಯಲು ಸಹಾಯ ಮಾಡುವ ಅನೇಕ ಎಲೆಗಳು ಪ್ರಕೃತಿಯಲ್ಲಿ ಕಂಡುಬರುತ್ತವೆ. ಈ ಎಲೆಗಳನ್ನು ಸೇವಿಸಿದರೆ ದೀರ್ಘಾಯುಷ್ಯ ನಮ್ಮದಾಗುವುದರಲ್ಲಿ ಎರಡು ಮಾತಿಲ್ಲ.
- ಹಿಂದಿನ ಕಾಲದಲ್ಲಿ ಜನರು ದೀರ್ಘಕಾಲ ಬದುಕಲು ಉತ್ತಮ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು
- ಇಂದಿನ ಕಾಲದಲ್ಲಿ ದೀರ್ಘಾಯುಷ್ಯ ಎನ್ನುವುದು ಕನಸಿನ ಮಾತಾಗಿದೆ.
- ಈ ಎಲೆಗಳು ರೋಗಗಳನ್ನು ಹೋಗಲಾಡಿಸುವ ಮೂಲಕ ನಮ್ಮ ಆಯುಷ್ಯವನ್ನು ಹೆಚ್ಚಿಸುತ್ತದೆ.

Anti Ageing Leaves : ಹಿಂದಿನ ಕಾಲದಲ್ಲಿ ಜನರು ದೀರ್ಘಕಾಲ ಬದುಕಲು ಉತ್ತಮ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಅವರ ಜೀವನಶೈಲಿಯು ಕೂಡಾ ತುಂಬಾ ಸರಳವಾಗಿತ್ತು.ಆದರೆ ಇಂದಿನ ಕಾಲದಲ್ಲಿ ದೀರ್ಘಾಯುಷ್ಯ ಎನ್ನುವುದು ಕನಸಿನ ಮಾತಾಗಿದೆ. ಇತ್ತೀಚಿನ ದಿನಗಳಲ್ಲಿ, ಪರಿಸರ ಮತ್ತು ಕಲುಷಿತ ಗಾಳಿಯು ದೇಹದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.ನಮ್ಮ ಪ್ರಕೃತಿಯಲ್ಲಿರಯುವ ಅನೇಕ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯು ದೇಹವನ್ನು ಸದೃಢವಾಗಿರಿಸುತ್ತದೆ ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ನಮಗೆ ವಯಸ್ಸಾಗದಂತೆ ತಡೆಯುವ ಅಂದರೆ ವಯಸ್ಸಾಗುತ್ತಿದ್ದರೂ ವಯೋ ಸಹಜ ಕಾಯಿಲೆಗಳಿಂದ ನಮ್ಮನ್ನು ದೂರ ಉಳಿಯಲು ಸಹಾಯ ಮಾಡುವ ಅನೇಕ ಎಲೆಗಳು ಪ್ರಕೃತಿಯಲ್ಲಿ ಕಂಡುಬರುತ್ತವೆ. ಈ ಎಲೆಗಳನ್ನು ಸೇವಿಸಿದರೆ ದೀರ್ಘಾಯುಷ್ಯ ನಮ್ಮದಾಗುವುದರಲ್ಲಿ ಎರಡು ಮಾತಿಲ್ಲ. ಈ ಎಲೆಗಳು ರೋಗಗಳನ್ನು ಹೋಗಲಾಡಿಸುವ ಮೂಲಕ ನಮ್ಮ ಆಯುಷ್ಯವನ್ನು ಹೆಚ್ಚಿಸುತ್ತದೆ.
ಕರಿಬೇವಿನ ಎಲೆ :

ಕರಿಬೇವಿನ ಎಲೆಗಳು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಕಂಡುಬರುತ್ತವೆ.ಎಲ್ಲಾ ರೀತಿಯ ಅಡುಗೆಗೂ ನಾವು ಕರಿಬೇವನ್ನು ಬಳಸುತ್ತೇವೆ. ಅಡುಗೆಯಲ್ಲಿ ಕರಿಬೇವು ಬಳಸುವುದರಿಂದ ಆಹಾರದ ಘಮವೂ ಹೆಚ್ಚುತ್ತದೆ. ರುಚಿಯೂ ದುಪ್ಪಟ್ಟಾಗುತ್ತದೆ. ಕರಿಬೇವಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳು ಕಂಡುಬರುತ್ತವೆ. ಕರಿಬೇವಿನ ಎಲೆಗಳನ್ನು ಜಗಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದಿಂದ ಮುಕ್ತಿ ದೊರೆಯುತ್ತದೆ.
ತುಳಸಿ ಎಲೆಗಳು :

ಆಯುರ್ವೇದದಲ್ಲಿ ತುಳಸಿಯನ್ನು ಅನೇಕ ಗಂಭೀರ ಕಾಯಿಲೆಗಳಿಗೆ ಪರಿಹಾರವೆಂದು ಹೇಳಲಾಗುತ್ತದೆ.ತುಳಸಿ ಎಲೆಗಳಲ್ಲಿ ಅನೇಕ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ತುಳಸಿ ಚಹಾವನ್ನು ಕುಡಿಯುವುದರಿಂದ ಶೀತ ಮತ್ತು ಕೆಮ್ಮಿನಂತಹ ಋತುಮಾನದ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿಯೂ ಇದು ಪರಿಣಾಮಕಾರಿಯಾಗಿದೆ.
ಬೇವಿನ ಎಲೆ :

ಬೇವಿನ ಎಲೆಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಸಿ, ಫೈಬರ್, ಕಾರ್ಬೋಹೈಡ್ರೇಟ್‌ಗಳು, ಕೊಬ್ಬು, ಅಮೈನೋ ಆಮ್ಲಗಳು, ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳು ಹೇರಳವಾಗಿವೆ. ಬೇವಿನ ಎಲೆಗಳನ್ನು ಜಗಿಯುವುದರಿಂದ ರಕ್ತದಲ್ಲಿರುವ ಕಲ್ಮಶಗಳು ನಿವಾರಣೆಯಾಗಿ ರಕ್ತ ಶುದ್ಧಿಯಾಗುತ್ತದೆ. ಇದಲ್ಲದೆ, ಈ ಎಲೆಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದೊಡ್ಡ ಪತ್ರೆ :

ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಪರಿಹಾರ ಪಡೆಯಲು ದೊಡ್ಡ ಪತ್ರೆ ಮತ್ತು ಉಪ್ಪನ್ನು ಸೇವಿಸಬಹುದು. ದೊಡ್ಡ ಪತ್ರೆ ಅನೇಕ ರೋಗಗಳಿಗೆ ಮದ್ದು. ಇದಾಲ್ಲಿ ಫೈಬರ್, ವಿಟಮಿನ್ ಕೆ, ಮ್ಯಾಂಗನೀಸ್, ಕಬ್ಬಿಣ, ವಿಟಮಿನ್ ಇ ಕಂಡುಬರುತ್ತದೆ.ಈ ಎಲೆಗಳು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿವೆ.ಇದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.
Source : https://zeenews.india.com/kannada/health/leaves-helps-to-reduce-illness-and-keep-us-healthy-180662
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0