ಚಿತ್ರದುರ್ಗದಲ್ಲಿ ಮೋದಿ 75ನೇ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ.

ಚಿತ್ರದುರ್ಗ ಸೆ. 17

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕದವತಿಯಿಂದ ರಂಗಯ್ಯನ ಬಾಗಿಲು ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿಯವರು ದೇಶದಲ್ಲಿ ಮೋದಿ ಯವರು ಪ್ರಧಾನ ಮಂತ್ರಿಯಾಗುವುದಕ್ಕಿಂತ ಮುಂಚೆ ಪ್ರಪಂಚದಲ್ಲಿ ದೇಶದ ಸ್ಥಾನ ಅಷ್ಠಾಗಿ ಚನ್ನಾಗಿ ಇರಲಿಲ್ಲ ನಮ್ಮ ದೇಶದ ಪ್ರಧಾನಮಂತ್ರಿ ಯಾವುದೇ ದೇಶಕ್ಕೆ ಹೋದರೂ ಸಹಾ ಅಲ್ಲಿ ಅವರಿಗೆ ಸರಿಯಾದ ಮರ್ಯಾದೆ ಸಿಗುತ್ತಿರಲಿಲ್ಲ, ನಮ್ಮ ದೇಶಕ್ಕೆ ಬಂದು ಏನೇ ಬೇಡುತ್ತಾರೆ ಎಂಬ ಮನೋಭಾವ ಬೇರೆ ದೇಶದವರಲ್ಲಿ ಇತ್ತು, ಇದನ್ನು ನಮ್ಮ ದೇಶಕ್ಕೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ಈ ಮನೋಭಾವ ಇಲ್ಲವಾಗಿದೆ ಮೋದಿಯವರು ಪ್ರಪಂಚದ ಯಾವುದೇ ದೇಶಕ್ಕೆ ಹೋದರು ಸಹಾ ಅಲ್ಲಿ ಗೌರವ ಮನ್ನಣೆ ಸಿಗುತ್ತದೆ.

ಮೋದಿಯವರ ಆಡಳಿತದಿಂದಾಗಿ ನಮ್ಮ ದೇಶ ಅರ್ಥಿಕವಾಗಿ ಪ್ರಗತಿಯನ್ನು ಸಾಧಿಸುತ್ತಿರುವುದಲ್ಲದೆ ಬಡತನದಲ್ಲಿದ್ದ ಲಕ್ಷಾಂತರ ಜನತೆಯನ್ನು ಅಭಿವೃದ್ಧಿ ಕೊಂಡೊಯ್ದಿದ್ದಾರೆ. ಮೋದಿಯವರು ಮುಖ್ಯಮಂತ್ರಿಗಳಾಗಿ ದೇಶದ ಪ್ರಧಾನ ಮಂತ್ರಿಗಳಾಗಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ ಎಂದರು.


ಹಿಂದಿನ ಸರ್ಕಾರದಲ್ಲಿ ದೇಶದ ಅರ್ಥಿಕತೆ ತೀವ್ರ ಹಿಂದೇ ಉಳಿದಿತ್ತು, ಅದನ್ನು ಮೋದಿಯವರು ದೇಶದ ಪ್ರಧಾನ ಮಂತ್ರಿಯಾದ ಮೇಲೆ ಉತ್ತಮ ಪಡಿಸಿದ್ದಾರೆ. ಪ್ರಪಂಚದಲ್ಲಿ ಕಡೆಯದಾಗಿದ್ದು ನಮ್ಮ ದೇಶವನ್ನು ಮುಂದಕ್ಕೆ ತರುವ ಕಾರ್ಯವನ್ನು ತಮ್ಮ ಅಡಳಿತದಲ್ಲಿ ಮಾಡಿದ್ದಾರೆ. ಇಂತಹ ವ್ಯಕ್ತಿ ಈಗ 75 ವರ್ಷಗಳನ್ನು ಪೂರೈಸಿದ್ದಾರೆ. ಭಗವಂತ ಅವರಿಗೆ ಆರೋಗ್ಯ, ಆಯಷ್ಯನ್ನು ನೀಡಲಿ ಎಂದು ಪ್ರಾರ್ಥನೆ ಮಾಡುವುದರ ಮೂಲಕ ಇಂದು ವಿನಾಯಕನಿಗೆ ವಿಶೇಷವಾದ ಪೂಜೆಯನ್ನು ನಡೆಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸಿದ್ಧಾಪುರ ಸುರೇಶ್, ಮಾಜಿ ಅಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತೆರ ಅಧ್ಯಕ್ಷ ನಾಗರಾಜ್, ವಕ್ತಾರ ನಾಗರಾಜ್ ಬೇದ್ರೇ, ಮಾಜಿ ನಗರಾಧ್ಯಕ್ಷ ಚಾಲುಕ್ಯ ನವೀನ್, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್, ಲೀಮಾವತಿ ಶಶಿಧರ್, ಎಸ್.ಸಿ. ಮೋರ್ಚಾ ಅಧ್ಯಕ್ಷ ತಿಪ್ಪೇಸ್ವಾಮಿ, ರಜನಿ, ಕವನ, ಬಸಮ್ಮ, ಶಾಂತಮ್ಮ, ಮಂಜುಳಮ್ಮ, ಚಂದ್ರಿಕಾ ಕಾಂಚನ ಕವಿತಾ ವೀಣಾ, ವಿಜಯಲಕ್ಷ್ಮೀ ಯೋಗೇಶ್ ಸಹ್ಯಾದ್ರಿ, ಶಂಭು ಬಸವರಾಜು, ನಗರಸಭೆಯ ಮಾಜಿ ಸದಸ್ಯರಾದ ಗರಡಿ ಪ್ರಕಾಶ್, ಲಿಂಗರಾಜು, ನಾಗರಾಜು ಆರ್ ಸೇರಿದಂತೆ ಬಿಜೆಪಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Views: 15

Leave a Reply

Your email address will not be published. Required fields are marked *