ಸ್ವರ್ಗದಲ್ಲಿರುವ ತನ್ನ ಅಜ್ಜಿಗಾಗಿ ಆಕಾಶಕ್ಕೆ ಏಣಿ ಹಾಕಿದ ಮೊಮ್ಮಗ! ವಿಡಿಯೋ ವೈರಲ್​.

ವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ದಿನನಿತ್ಯ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಶೇಷ ಅಥವಾ ವಿಚಿತ್ರ ಕಾರಣದಿಂದಾಗಿ ನಮ್ಮನ್ನು ಅಚ್ಚರಿಗೊಳಿಸುತ್ತವೆ. ಅದೇ ರೀತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಆಕಾಶಕ್ಕೆ ಏಣಿ ಹಾಕಿದಂತಿರುವ ವಿಡಿಯೋ ವೈರಲ್ ಆಗಿದೆ. ಇದು ಚೈನೀಸ್ ಕಲಾವಿದ ಕೈ ಗುವೊ ಕಿಯಾಂಗ್ ಎಂಬಾತ ಮಾಡಿರುವ ವಿಡಿಯೋ ಆಗಿದೆ. ತನ್ನ ಅಜ್ಜಿಯ ನೆನಪಿಗಾಗಿ ಈ ಏಣಿಯನ್ನು ಪಟಾಕಿಗಳನ್ನು ಬಳಸಿಕೊಂಡು ಆಕಾಶದಲ್ಲಿ ರಚನೆ ಮಾಡಿದ್ದಾರೆ. ವಿಡಿಯೋ ನೋಡಿದರೆ ಆಕಾಶಕ್ಕೆ ಏಣಿಯನ್ನು ಹಾಕುತ್ತಿರುವಂತೆ ಕಾಣುತ್ತದೆ. ವಿಡಿಯೋದಲ್ಲಿ ಪಟಾಕಿ ಸಿಡಿಸಿದಾಗ ಏಣಿಯ ಆಕಾರ ಪಡೆದು ಆಕಾಶಕ್ಕೆ ಚಿಮ್ಮುತ್ತದೆ.

ಜುವಾನಿಟಾ ಬ್ರಾಡ್ರಿಕ್ ಎಂಬುವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ‘ಸ್ವರ್ಗಕ್ಕೆ ಮೆಟ್ಟಿಲು’ ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ. 1,650 ಅಡಿ ಏಣಿಯನ್ನು ಗನ್ ಪೌಡರ್ ತುಂಬಿದ ತಾಮ್ರದ ತಂತಿಯಿಂದ ಮಾಡಲಾಗಿದೆ ಎಂದು ವರದಿಯಾಗಿದೆ. 1957ರಲ್ಲಿ ಫುಜಿಯಾನ್ ಪ್ರಾಂತ್ಯದ ಕ್ವಾನ್‌ಝೌ ನಗರದಲ್ಲಿ ಜನಿಸಿದ ಕೈ ಗುವೊ ಕಿಯಾಂಗ್, ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. ವಿಡಿಯೋ ವೈರಲ್ ಆದ ನಂತರ ಸಾಕಷ್ಟು ಕಾಮೆಂಟ್‌ಗಳು ಮತ್ತು ಲೈಕ್‌ಗಳು ಬರುತ್ತಿವೆ.

ವಿಡಿಯೋ ನೋಡಲು ತುಂಬಾ ಚೆನ್ನಾಗಿದೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಕೈ ಗುವೊ ಕಿಯಾಂಗ್ ಅವರನ್ನು ಹೊಗಳುತ್ತಿದ್ದಾರೆ. ಬೆಂಕಿ ಏಕೆ ಕೆಳಗೆ ಬೀಳಲಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ನಿಮ್ಮ ಅಜ್ಜಿ ಇದನ್ನು ನೋಡಿ ಸಂತೋಷಪಡುತ್ತಾರೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. 

Source : https://m.dailyhunt.in/news/india/kannada/vijayvani-epaper-vijaykan/svargadalliruva+tanna+ajjigaagi+aakaashakke+eni+haakidha+mommaga+vidiyo+vairal+-newsid-n610703100?listname=topicsList&topic=for%20you&index=12&topicIndex=0&mode=pwa&action=click

Leave a Reply

Your email address will not be published. Required fields are marked *