ಪೋಟೋ ಮತ್ತು ವರದಿ ವೇದಮೂರ್ತಿ ಭೀಮ ಸಮುದ್ರ
ಸಿದ್ದರಾಮಯ್ಯನವರು ಬಳ್ಳಾರಿ ಪಾದಯಾತ್ರೆಯಲ್ಲಿ ಹೋರಾಟ ಮಾಡಿ ಎರಡು ಬಾರಿ ಮುಖ್ಯಮಂತ್ರಿ ಗಣಿ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಹೋರಾಟಗಾರ ಚಿತ್ರನಟ ಚೇತನ್
ಭೀಮಸಮುದ್ರ. ಭೀಮಸಮುದ್ರದ ತರಳುಬಾಳು ಕಲ್ಯಾಣ ಮಂಟಪದಲ್ಲಿ ರೈತ ಸಂಘಟನೆ ಗಣಿ ಭೂಪಾದಿತ ಹೋರಾಟ ಸಮಿತಿ ಪರಿಸರ ಮತ್ತು ವನ್ಯಜೀವಿ ಸುರಕ್ಷಣಾ ಹೋರಾಟ ಸಮಿತಿ ಮಹಿಳಾ ಹಕ್ಕು ಹೋರಾಟ ಸಮಿತಿ ವತಿಯಿಂದ ಜಾಗೃತಿ ಜಾತ ಹಾಗೂ ಜಾಗೃತಿ ಕಾರ್ಯಗಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗ್ರಾಮದ ಈಶ್ವರ ದೇವಸ್ಥಾನದಿಂದ ರೈತರು ಗ್ರಾಮಸ್ಥರು ಹಾಗೂ ಎಲ್ಲಾ ಸಂಘಟನೆಯ ಸದಸ್ಯರುಗಳು ಕಾಲ್ ನಡಿಗೆಯ ಮೂಲಕ ಗಣಿ ಕಂಪನಿಗಳ ವಿರುದ್ಧ ಘೋಷಣೆ ಕೂಗುತ್ತಾ ಜಾತ ನಡೆಸಿದರು
ಕಾರ್ಯಕ್ರಮವನ್ನು ಗಿಡಕ್ಕೆ ನೀರಾಕುವ ಮೂಲಕ ಚಾಲನೆ ನೀಡಲಾಯಿತು
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ
ಹೋರಾಟಗಾರ ಹಾಗೂ ಚಿತ್ರನಟ ಚೇತನ್ ಮಾತನಾಡಿ ಯಾವತ್ತಾದರೂ ಬದಲಾವಣೆ ಆಗಿದೆ ಎಂದರೆ ದಯ-ದಾಕ್ಷಣೆಯಿಂದಲ್ಲ ತಳಮಟ್ಟದ ಹೋರಾಟದಿಂದ ಗ್ರಾಮದಲ್ಲಿ ಲಾರಿಗಳು ಓಡಾಡುವುದನ್ನು ನಿಲ್ಲಿಸಬೇಕೆಂದು
ರೈತ ಸಂಘಟನೆ ಅವರು ಮಾಡುತ್ತಿರುವುದು ಒಳ್ಳೆಯ ಕೆಲಸ ಹೋರಾಟದಿಂದ ಪರಿಹಾರ ಹಾಗೂ ಪರಿವರ್ತನೆ ಆಗುತ್ತದೆ.
ಚಿತ್ರದುರ್ಗ ಹಾಗೂ ಹೊಳಲ್ಕೆರೆ , ಬಳ್ಳಾರಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಮನುಷ್ಯನ ಆರೋಗ್ಯ ಪರಿಸರ ಮೇಲೆ ಬಹಳಷ್ಟು ಪರಿಣಾಮ ಬೀಳುತ್ತಿದೆ
ಗಣಿಗಾರಿಕೆ ಕಂಪನಿಗೆ ಸಿಗುವ ಲೈಸೆನ್ಸ್ ಗಳನ್ನು ಇನ್ನು ಸುಲಭವಾಗಿ ಸಿಂಗಲ್ ವಿಂಡೋ ಅಂತ ಮಾಡಿ ಅವರಿಗೆ ಎಲ್ಲವೂ ಒಂದೇ ಕಡೆ ಸಿಗುವ ಹಾಗೆ ಮಾಡಿದ್ದಾರೆ.
2010 ರಲ್ಲಿ ಹೀಗಿರುವ ಮುಖ್ಯಮಂತ್ರಿಗಳು ರಿಪಬ್ಲಿಕ್ ಬಳ್ಳಾರಿ ಎಂದು ಪಾದಯಾತ್ರೆ ಮಾಡಿದರು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು ಆದರೆ ಈಗಿ ನೋಡಿದರೆ ಮೈನಿಂಗ್ ಮಾಫಿಯಾಗಳು ಜೊತೆ ಕೈಜೋಡಿಸಿದ್ದಾರೆ ಎಂಬ ನಂಬಿಕೆ ಬರುತ್ತದೆ ಆದರೆ ಸರ್ಕಾರ ಹಾಗೂ ಅಧಿಕಾರಿಗಳು ಪರಿಸರವನ್ನು ಉಳಿಸುವ ಕಾರ್ಯ ಮಾಡಲಿ ಭೀಮಸಮುದ್ರದಲ್ಲಿ ಲಾರಿಗಳ ಗ್ರಾಮದ ಒಳಗಡೆ ಓಡಾಡುವುದರಿಂದ ಬಹಳಷ್ಟು ಆರೋಗ್ಯ ಸಮಸ್ಯೆ ಕಂಡು ಬಂದಿದೆ ಎಂದು ತಿಳಿದಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದಾಗಿ ಹೋರಾಟ ಮಾಡಲು ನಮ್ಮ ಬೆಂಬಲ ಇದೆ ಎಂದು ಹೇಳಿದರು
ಇತಿಹಾಸ ಶೋಧಕರಾದ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ ಗಣಿ ಕಂಪನಿಗಳಿಂದ ಶಬ್ದ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಆಗುತ್ತಿದೆ ಪ್ರಾಣಿ ಪಕ್ಷಿಗಳು ಜಾಗ ಹುಡುಕುವ ಪರಿಸ್ಥಿತಿ ಬಂದಿದೆ ಇತ್ತೀಚಿಗೆ ಹಿಂದೂ ಸಂಪ್ರದಾಯದ ಪ್ರಕಾರ ಪಿಂಡ ಇಡುವ ಪದ್ಧತಿ ಇದೆ ಆದರೆ ಅದನ್ನು ತಿನ್ನುವುದಕ್ಕೆ ಕಾಗೆಗಳಿಲ್ಲ ಚಿಕ್ಕ ಚಿಕ್ಕ ಪಕ್ಷಿಗಳು ಕೂಡ ಕಾಣೆಯಾಗಿವೆ ಮನುಷ್ಯ ಸಂಗ ಜೀವಿ ಅವನು ಎಲ್ಲೂ ಕೂಡ ಹೋಗಲಾರ ಒಂದೆಡೆ ನೆಲೆಸಿದರೆ ಅವನಿಗೆ ಬೇಕಾದ ಮನೆ ಕಟ್ಟಿಕೊಂಡು ವಾಸ ಮಾಡುತ್ತಾನೆ ಆದರೆ ಇಲ್ಲಿ ನೋಡಿದರೆ ಲಾರಿ ಧೂಳಿನಿಂದ ಬೇರೆ ಕಡೆ ಹೋಗುವ ಪರಿಸ್ಥಿತಿ ಬಂದಿದೆ ಗ್ರಾಮದಲ್ಲಿ ರೈತರು ಮಹಿಳೆಯರು ಹಾಗೂ ಯುವಕರು ಈ ಸಭೆಗೆ ಬಂದಿರುವುದು ಬಹಳ ಸಂತೋಷಕರ ವಿಚಾರ ಪರಿಸರವನ್ನು ಉಳಿಸಬೇಕಾದರೆ ಇಂತಹ ಸಭೆಗಳು ನಡೆಯಬೇಕು ಎಂದು ತಿಳಿಸಿದರು
ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ BE ಜಗದೀಶ್ ಮಾತನಾಡಿ ಗ್ರಾಮದಲ್ಲಿ ಲಾರಿಗಳು ಓಡಾಡುವುದರಿಂದ ಬಹಳಷ್ಟು ಆರೋಗ್ಯದ ಸಮಸ್ಯೆ ಕಾಣುತ್ತಿದೆ ಜಿಲ್ಲಾಧಿಕಾರಿಗಳು ಓಡಾಡಲು ಪರವಾನಿಗೆ ನೀಡಿದ್ದಾರೆ ಎಂದು ಲಾರಿಗಳು ಬಂದು ನಿಂತಿವೆ ಆದರೆ ಇಲ್ಲಿರುವ ಪರಿಸ್ಥಿತಿ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ ದಯಮಾಡಿ ಲಾರಿಗಳನ್ನು ಗ್ರಾಮದ ಒಳಗಡೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಹಾಗೇನಾದರೂ ಲಾರಿಗಳು ಗ್ರಾಮದಲ್ಲಿ ಓಡಾಡಿದರೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಧನಂಜಯ್ ಹಂಪಯ್ಯನ ಮಳಿಗೆ ಗೌರವಾಧ್ಯಕ್ಷರಾದ ತಿಪ್ಪೇಸ್ವಾಮಿ ಮಲ್ಲಾಪುರ ಸಂಘಟನಾ ಕಾರ್ಯದರ್ಶಿಗಳಾದ ಚಿಕ್ಕಪ್ಪನಳ್ಳಿ ರುದ್ರ ಸ್ವಾಮಿ ಸಹೋದಯ ಪಕ್ಷದ ಅಧ್ಯಕ್ಷರಾದ ಯಾದವ್ ರೆಡ್ಡಿ ಕರ್ನಾಟಕ ಗಣಿವಾದಿತ ಹೋರಾಟ ಸಮಿತಿಯ ಸಮಸ್ತಾಪಕ ಅಧ್ಯಕ್ಷರಾದ ಬಿದುರ್ಗ ರಮೇಶ್
ಭೀಮಸಮುದ್ರ ಗ್ರಾಮದ ರೈತ ಸಂಘಟನೆಯ ಅಧ್ಯಕ್ಷರಾದ ಶಂಕರಮೂರ್ತಿ ಉಪಾಧ್ಯಕ್ಷರಾದ ಪೂರಿಯ ನಾಯಕ್ ಸದಸ್ಯರುಗಳಾದ ಕುಮಾರ್ ಶಿವಕುಮಾರ್ ಮಹೇಶ್ವರಪ್ಪ ನಿರಂಜನ್ ನಾಗರಾಜ್ ನಾಯಕ ಹಾಗೂ ಗ್ರಾಮಸ್ಥರು ಮಹಿಳೆಯರು ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Views: 82