
ಯೂರಿಕ್ ಆಮ್ಲದ ಸಮಸ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಯೂರಿಕ್ ಆಮ್ಲವು ದೇಹದಲ್ಲಿ ಹೆಚ್ಚಾದರೆ ಕಿಡ್ನಿ ಸ್ಟೋನ್ ರಿಸ್ಕ್ ಹೆಚ್ಚುತ್ತದೆ. ಯೂರಿಕ್ ಆಸಿಡ್ ಸಂಧಿವಾತಕ್ಕೂ ಕಾರಣವಾಗಬಹುದು.
ಕೆಲವು ತರಕಾರಿಗಳು ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುತ್ತವೆ. ಇವುಗಳ ಸೇವನೆಯಿಂದ ಕೀಲು ನೋವು, ಕಿಡ್ನಿ ಸ್ಟೋನ್ ಸಮಸ್ಯೆಗಳು ಗುಣವಾಗುತ್ತವೆ.
ಸೌತೆಕಾಯಿ ಯೂರಿಕ್ ಆಮ್ಲವನ್ನು ಕಡಿಮೆ ಮಾಡಬಲ್ಲ ಪವರ್ ಫುಲ್ ತರಕಾರಿಯಾಗಿದೆ. ಸೌತೆಕಾಯಿ ಜ್ಯೂಸ್ ಮಾಡಿ ಕುಡಿಯಿರಿ. ಈ ಜ್ಯೂಸ್ ಕುಡಿಯುವುದರಿಂದ ಎರಡು ವಾರಗಳಲ್ಲಿ ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ.
ಸೌತೆಕಾಯಿಯನ್ನು ಸಿಪ್ಪೆ ಸುಲಿದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಸ್ವಲ್ಪ ನೀರು ಸೇರಿಸಿ ಹತ್ತಿ ಬಟ್ಟೆಯಿಂದ ಗಟ್ಟಿಯಾಗಿ ಹಿಂಡಿ ರಸ ತೆಗೆಯಿರಿ. ತುಳಸಿಯನ್ನು ಚೆನ್ನಾಗಿ ನುಜ್ಜುಗುಜ್ಜು ಮಾಡಿ ರಸದಲ್ಲಿ ಬೆರೆಸಿ. ಚಿಟಿಕೆ ಕಲ್ಲು ಉಪ್ಪು ಸೇರಿಸಿ ಕುಡಿಯಿರಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 10-15 ದಿನಗಳವರೆಗೆ ನಿರಂತರವಾಗಿ ಈ ರಸವನ್ನು ಕುಡಿಯಬೇಕು. ಇದು ಹೆಚ್ಚಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡುತ್ತದೆ. ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಕಿಡ್ನಿ ಸ್ಟೋನ್ ಕರಗಲು ಸಹ ಸಹಾಯ ಮಾಡುತ್ತದೆ.
ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿಯೂ ತಿನ್ನಬಹುದು. ಬರೀ ಬಾಯಲ್ಲಿ ಸೌತೆಕಾಯಿಯನ್ನು ಸಿಪ್ಪೆ ಸಮೇತ ತಿನ್ನುವುದರಿಂದಲೂ ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. samagrasuddi.co.in ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
Source: https://zeenews.india.com/kannada/photo-gallery/cucumber-helps-to-flush-out-kidney-stones-271761