ನಾಲ್ಕು ತಿಂಗಳ ಬಳಿಕ ದುಬಾರಿಯಾಯಿತು LPG ದರ ! ಈಗ ಗ್ಯಾಸ್ ಸಿಲಿಂಡರ್ ಗೆ ಪಾವತಿ ಮಾಡಬೇಕಾಗಿರುವುದು ಇಷ್ಟು

LPG Price hike : ಈ ಬಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್‌ಗೆ 7 ರೂ. ಹೆಚ್ಚಳ ಮಾಡಿದೆ.

ಬೆಂಗಳೂರು : ಪ್ರತಿ ತಿಂಗಳ ಮೊದಲನೇ ತಾರೀಕಿನಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸುತ್ತವೆ. ಜೂನ್ 1ರಂದು ಕೂಡಾ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂಪಾಯಿ ಇಳಿಕೆಯಾಗಿದ್ದು, ಜನಸಾಮಾನ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಈ ಬಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಈ ಬಾರಿ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್‌ಗೆ 7 ರೂ. ಹೆಚ್ಚಳ ಮಾಡಿದೆ. ಈ ಬಾರಿ ಜುಲೈ 1 ರಂದು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಬದಲಾಗಿ ದರ ಬದಲಾವಣೆ ಇಂದು ಜಾರಿಗೆ ಬಂದಿದೆ.  

ನಾಲ್ಕು ತಿಂಗಳ ನಂತರ 7 ರೂಪಾಯಿ ಹೆಚ್ಚಳ : 
ತೈಲ ಮಾರುಕಟ್ಟೆ ಕಂಪನಿಗಳು ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಪರಿಹಾರ ನೀಡುತ್ತಿವೆ. ಆದರೆ ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾರ್ಚ್ 1, 2023 ರಂದು ಸಿಲಿಂಡರ್ ಬೆಲೆ ರೂ.2119.50 ಆಗಿತ್ತು. ನಂತರ ಏಪ್ರಿಲ್ ನಲ್ಲಿ 2028 ರೂ.ಗೆ ಇಳಿಕೆಯಾಗಿದ್ದು, ಮೇ ತಿಂಗಳಲ್ಲಿ 1856.50 ರೂ., ಜೂನ್ 1ಕ್ಕೆ 1773 ರೂ.ಯಷ್ಟಾಗಿತ್ತು. ಇದೀಗ ನಾಲ್ಕು ತಿಂಗಳ ನಂತರ ಸಿಲಿಂಡರ್ ಬೆಲೆ ರೂ.7ರಷ್ಟು ಏರಿಕೆಯಾಗಿದೆ.

ಜೂನ್ 1 ರ ಅನುಸಾರ ಪ್ರಮುಖ ಮೆಟ್ರೋ ನಗರ ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ದರ
ದೆಹಲಿ – 1773 ರೂ. 
ಕೋಲ್ಕತ್ತಾ – 1895.50 ರೂ. 
ಮುಂಬೈ –  1733.50 ರೂ. 
ಚೆನ್ನೈ – 1945 ರೂ.

ಸುದ್ದಿ ಸಂಸ್ಥೆ ANI ವರದಿ ಪ್ರಕಾರ, 19 ಕೆಜಿ ವಾಣಿಜ್ಯ LPG ಸಿಲಿಂಡರ್ ರಾಜಧಾನಿ ದೆಹಲಿಯಲ್ಲಿ 1,773 ರೂ ಬದಲಿಗೆ 1,780 ರೂಗೆ ಲಭ್ಯವಿರುತ್ತದೆ. ಅಂದರೆ, ಈಗ ಇದಕ್ಕಾಗಿ ನೀವು ಮೊದಲಿಗಿಂತ 7 ರೂಪಾಯಿ ಹೆಚ್ಚು ಪಾವತಿಸಬೇಕಾಗುತ್ತದೆ. ಸುದ್ದಿ ಬರೆಯುವ ತನಕ, ಹೊಸ ಬೆಲೆಯನ್ನು ಇಂಡಿಯನ್ ಆಯಿಲ್ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿಲ್ಲ.  ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. 

Source : https://zeenews.india.com/kannada/business/commercial-cylinder-price-hike-upto-7-rupees-lpg-price-hike-143430

Leave a Reply

Your email address will not be published. Required fields are marked *