ತಿರುವನಂತಪುರಂ: ಮೆಟ್ರೋ ಬಗ್ಗೆ ಈಗಾಗಲೇ ಕೇಳಿದ್ದೀವಿ, ಓಡಾಡಿದ್ದೀವಿ. ಆದ್ರೆ ಮೊದಲ ಬಾರಿಗೆ ವಾಟರ್ ಮೆಟ್ರೋಗೆ ಚಾಲನೆ ಸಿಕ್ಕಿದೆ. ಇಂದು ಪ್ರಧಾನಿ ಮೋದಿ ಅವರು ವಾಟರ್ ಮೆಟ್ರೋಗೆ ಚಾಲನೆ ನೀಡಿದ್ದಾರೆ. ಇದು ಕೊಚ್ಚಿಯ ಸುತ್ತಲಿನ ಹತ್ತು ದ್ವೀಪಗಳನ್ನು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಹೈಬ್ರೀಡ್ ದೋಣಿಗಳ ಮೂಲಕ ನಗರದೊಂದಿಗೆ ತಡೆರಹಿತ ಮಪರ್ಕ ಹೊಂದಲಿದೆ.
ಈ ಮೆಟ್ರೋ ಸೇವೆಯಿಂದ ಕೊಚ್ಚಿ ಮತ್ತು ಸುತ್ತಮುತ್ತಲಿನ ಜನತೆಗೆ ಮಾತ್ರವಲ್ಲ ಪ್ರಪಂಚದಾದ್ಯಂತ ಬರುವ ಪ್ರವಾಸಿಗರಿಗೂ ಅನುಕೂಲವಾಗಿದೆ. ಆರಂಭದಲ್ಲಿ ವಾಟರ್ ಮೆಟ್ರೋ ಎಂಟು ಎಲೆಕ್ಟ್ರಿಕ್ ಹೈಬ್ರೀಡ್ ಬೋಟ್ ಗಳೊಂದಿಗೆ ಎರಡು ಮಾರ್ಗಗಳಲ್ಲಿ ನೌಕಾಯಾನವನ್ನು ಪ್ರಾರಂಭಿಸುತ್ತದೆ. ಇಂದು ವಿಶೇಷ ಸಾಮರ್ಥ್ಯವುಳ್ಳ ಮಕ್ಕಳೊಂದಿಗೆ ನೌಕಾಯಾನ ಮಾಡಿದೆ.
ವಿಶೇಷ ದೋಣಿಯಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಬೋಟ್ ಆಗಿರುವುದರಿಂದ ನಮಗೆ ಹಲವಾರು ಸವಾಲುಗಳಿವೆ. ಆದರೆ ನಾವು ಇಂಡಿಯನ್ ಮ್ಯಾರಿಟೈಮ್ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದಿದ್ದೇವೆ. ಹಾಗಾಗಿ ತೊಂದರೆ ಇಲ್ಲ. ಪೀಕ್ ಸಮಯದಲ್ಲಿ ಪ್ರತಿ ದೋಣಿಗೆ 12 ಟ್ರಿಪ್ಗಳು ಓಡುತ್ತದೆ. ಇದು ಒಂದು ಟರ್ಮಿನಲ್ನಿಂದ ಇನ್ನೊಂದಕ್ಕೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನಾವು 96 ಪ್ರಯಾಣಿಕರು ಮತ್ತು 4 ಸಿಬ್ಬಂದಿಯನ್ನು ಕೊಂಡೊಯ್ಯಬಹುದು ಇದರಿಂದ 100 ಜನರು ಹೋಗಬಹುದು ಎಂದು ಬೋಟ್ ಮಾಸ್ಟರ್ ಜೇಸ್ ಹೇಳಿದರು.
The post ಪ್ರಧಾನಿ ಚಾಲನೆ ನೀಡಿದ ಭಾರತದ ಮೊದಲ ವಾಟರ್ ಮೆಟ್ರೋದಲ್ಲಿದೆ ಈ ಎಲ್ಲಾ ವಿಶೇಷತೆ..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/cbMRqWo
via IFTTT