Free Ration Scheme Update: ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಉಚಿತ ಪಡಿತರ ಸೌಲಭ್ಯದ ಪ್ರಯೋಜನವನ್ನು ನೀವೂ ಪಡೆದುಕೊಳ್ಳುತ್ತಿದ್ದರೆ ಇನ್ನು ಮುಂದೆ ನಿಮಗೆ ಮತ್ತೊಂದು ಲಾಭ ಸಿಗಲಿದೆ.
![](https://samagrasuddi.co.in/wp-content/uploads/2023/07/image-31.png)
Free Ration Scheme Update : ಉಚಿತ ಪಡಿತರವನ್ನು ಪಡೆದುಕೊಳ್ಳುವವರಿಗೆ ಮತ್ತೊಂದು ಸಿಹಿ ಸುದ್ದಿ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಡಿಯಲ್ಲಿ ಉಚಿತ ಪಡಿತರ ಸೌಲಭ್ಯದ ಪ್ರಯೋಜನವನ್ನು ನೀವೂ ಪಡೆದುಕೊಳ್ಳುತ್ತಿದ್ದರೆ ಇನ್ನು ಮುಂದೆ ನಿಮಗೆ ಮತ್ತೊಂದು ಲಾಭ ಸಿಗಲಿದೆ. ಈ ವಿಚಾರವನ್ನು ಸರಕಾರವೇ ಪ್ರಕಟಿಸಿದೆ. ಸರ್ಕಾರದ ಯೋಜನೆಯ ಪ್ರಕಾರ, ಅಂತ್ಯೋದಯ ಕಾರ್ಡ್ ಹೊಂದಿರುವವರು ಉಚಿತ ಪಡಿತರ ಜೊತೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನೂ ಪಡೆಯಲಿದ್ದಾರೆ.
ಸಿಗಲಿದೆ ಉಚಿತ ಚಿಕಿತ್ಸೆಯ ಲಾಭ:
ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತ ಚಿಕಿತ್ಸೆಯ ಸೌಲಭ್ಯ ಕಲ್ಪಿಸುವ ಸಲುವಾಗಿ ಆಯುಷ್ಮಾನ್ ಕಾರ್ಡ್‌ಗಳನ್ನು ಮಾಡಿಸಲಾಗುವುದು ಎಂದು ಸರ್ಕಾರ ಹೇಳಿದೆ. ಇದಕ್ಕಾಗಿ ದೊಡ್ಡ ಮಟ್ಟದ ಪ್ರಚಾರ ನಡೆಸಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಆಂದೋಲನ :
ಸರ್ಕಾರದ ವತಿಯಿಂದ ನೀಡಲಾಗುವ ಈ ಸೌಲಭ್ಯ ಅನೇಕ ಕೇಂದ್ರಗಳಲ್ಲಿ ಲಭ್ಯವಿದೆ. ಸಾರ್ವಜನಿಕ ಸೌಕರ್ಯ ಕೇಂದ್ರದಲ್ಲಿ ಪಡಿತರ ಚೀಟಿ ತೋರಿಸಿ ಆಯುಷ್ಮಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಆಯುಷ್ಮಾನ್ ಕಾರ್ಡ್ ಮಾಡಿಸಲು ಆದೇಶ ನೀಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಹೇಳಿದೆ. ಈ ಅಭಿಯಾನವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿದೆ.
ಈಗಾಗಲೇ ಹೆಸರಿರುವವರಿಗೆ ಮಾಡಲಾಗುತ್ತಿದೆ ಕಾರ್ಡ್ :
ಸರ್ಕಾರದ ಈ ನಿರ್ಧಾರದ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಕಾಯಿಲೆಗೆ ಚಿಕಿತ್ಸೆ ಪಡೆಯಲು ಯೋಚನೆ ಮಾಡಬೇಕಾಗಿಲ್ಲ. ಪ್ರಸ್ತುತ, ಸರ್ಕಾರದಿಂದ ಹೊಸ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗುತ್ತಿಲ್ಲ. ಬದಲಿಗೆ ಈಗಾಗಲೇ ಪಟ್ಟಿಯಲ್ಲಿ ಹೆಸರಿರುವವರಿಗೆ ಕಾರ್ಡ್‌ಗಳನ್ನು ಮಾಡಿಸಲಾಗುತ್ತಿದೆ.