Health Tips: ಆಯುರ್ವೇದದಲ್ಲಿ ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ. ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ.
ಅರಿಶಿನದ ಆರೋಗ್ಯ ಪ್ರಯೋಜನಗಳು: ನಾವು ಪ್ರತಿದಿನ ಅಡುಗೆ ಮಾಡಲು ಅರಿಶಿನವನ್ನು ಬಳಕೆ ಮಾಡುತ್ತೇವೆ. ಅರಿಶಿನ ಸೇವನೆಯಿಂದ ನಾವು ಹಲವಾರು ಆರೋಗ್ಯಕರ ಲಾಭ ಪಡೆಯಬಹುದು. ನಿಯಮಿತವಾಗಿ ಅರಿಶಿನ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಅರಿಶಿನವು ಕರ್ಕ್ಯುಮಿನ್ ಸಂಯುಕ್ತವನ್ನು ಹೊಂದಿದ್ದು, ಇದು ದೇಹದಲ್ಲಿ ಕೊಬ್ಬಿನ ಅಂಗಾಂಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಅರಿಶಿನದ ಪಾನೀಯ ಸೇವನೆ ಮೂಲಕ ಹೊಟ್ಟೆಯ ಬೊಜ್ಜು ಕರಗಿಸಬಹುದು.
ಅರಿಶಿನವು ಅಜೀರ್ಣ ಸಮಸ್ಯೆಗೆ ರಾಮಬಾಣವಾಗಿದೆ. ಅರಿಶಿನ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೀಗಾಗಿ ನಿಯಮಿತವಾಗಿ ಅರಿಶಿನವನ್ನು ಸೇವನೆ ಮಾಡಬೇಕು.
ರಕ್ತದ ಸೋರಿಕೆಯನ್ನು ತಡೆಯಲು ಅಥವಾ ಗಾಯವನ್ನು ಗುಣಪಡಿಸಲು ಅರಿಶಿನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಅರಿಶಿನ ಹಾಲನ್ನು ಕಫ ಮತ್ತು ನೋವು ನಿವಾರಿಸಲು ಬಳಸಲಾಗುತ್ತದೆ.
ಆಯುರ್ವೇದದಲ್ಲಿ ಅರಿಶಿನವು ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ. ಅರಿಶಿನ ಬಳಕೆಯು ರಕ್ತವನ್ನು ಶುದ್ಧೀಕರಿಸುತ್ತದೆ. ಅರಿಶಿನ ಸೇವಿಸಿದ್ರೆ ರಕ್ತದಲ್ಲಿ ಕಂಡುಬರುವ ವಿಷಕಾರಿ ವಸ್ತುಗಳು ಹೊರಬರುತ್ತವೆ ಮತ್ತು ರಕ್ತ ಪರಿಚಲನೆ ಸುಗಮವಾಗುತ್ತದೆ. ಇದರಿಂದ ವ್ಯಕ್ತಿಗೆ ಹೃದಯದ ತೊಂದರೆಗಳು ಕಂಡುಬರುವುದಿಲ್ಲವೆಂದು ಹೇಳಲಾಗಿದೆ.
ಶೀತ ಅಥವಾ ಕೆಮ್ಮು ಸಮಸ್ಯೆಗಳಿಗೆ ಅರಿಶಿನದ ಹಾಲು ಸೇವನೆಯು ಪ್ರಯೋಜನಕಾರಿ. ಅರಿಶಿನ ಮಿಶ್ರಿತ ಬಿಸಿ ಹಾಲು ಸೇವಿಸಿದರೆ ಶ್ವಾಸಕೋಶದಲ್ಲಿ ಉಂಟಾಗಿರುವ ಶೀತ ಗುಣವಾಗುತ್ತದೆ. ಚಳಿಗಾಲದಲ್ಲಿ ಇದರ ಬಳಕೆಯು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.