ಡಿಸೆಂಬರ್‌ ತಿಂಗಳಲ್ಲಿ ಭೇಟಿ ಮಾಡಬಹುದಾದ ಅದ್ಭುತ ತಾಣಗಳು.

Snowfall in kashmir: ಡಿಸೆಂಬರ್‌ ತಿಂಗಳಿನಲ್ಲಿ ಹಿಮಪಾತವನ್ನು ಮನಸ್ಪೂರ್ತಿಯಾಗಿ ಎಂಜಾಯ್‌ ಮಾಡಬಹುದಾದ ಕೆಲವು ಸ್ಥಳಗಳ ಬಗ್ಗೆ ತಿಳಿಯೋಣ.

  • ಟ್ರಯಂಡ್‌ ಚಾರಣದೊಂದಿಗೆ ಹಿಮಪಾತದ ಸಂತೋಷವು ಇಲ್ಲಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ.
  • ಗುಲ್ಮಾರ್ಗ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗುಲ್ಮಾರ್ಗ್ ಗೊಂಡೊಲಾ, ಇದು ವಿಶ್ವದ ಅತಿ ಎತ್ತರದ ಕೇಬಲ್ ಕಾರ್ ಆಗಿದೆ.
  • ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾವನ್ನು ಪರ್ವತಗಳ ರಾಣಿ ಎಂದೂ ಕರೆಯುತ್ತಾರೆ

Kashmir: ಡಿಸೆಂಬರ್‌ ತಿಂಗಳು ಅರ್ಧ ಭಾಗ ಕಳೆದಿದ್ದು, ಈ ತಿಂಗಳ ಕೊನೆಯಲ್ಲಿ ಪ್ರಯಾಣಿಸಲು ಜನರು ಈಗಾಗಲೇ ಪ್ಲಾನ್‌ ಹಾಕಿಕೊಂಡಿದ್ದಾರೆ. ಇನ್ನೂ ಕೆಲ ಪ್ರವಾಸಿಗರು ಡಿಸೆಂಬರ್‌ ಅಂತ್ಯದಲ್ಲಿ ಹಿಮಾಚಲ-ಉತ್ತರಾಖಂಡ ಮತ್ತು ಕಾಶ್ಮೀರ ಕಣಿವೆಯಲ್ಲಿ ಹಿಮಪಾತವನ್ನು ಆನಂದಿಸಲು ಪ್ರತಿ ವರ್ಷ ಯೋಜಿಸುತ್ತಾರೆ. ಯಾರು ಹಿಮಪಾತವನ್ನು ಪೂರ್ಣವಾಗಿ ಆನಂದಿಸಲು ಬಯಸುತ್ತಾರೋ  ಅಂತವರಿಗಾಗಿ  ಕೆಲವು ಸ್ಥಳಗಳು ಇಲ್ಲಿವೆ.

* ಮನಾಲಿ
ಹಿಮಾಚಲ ಪ್ರದೇಶದ ಹೆಮ್ಮೆ ಮತ್ತು ಗುರುತಾಗಿದೆ ಪ್ರತಿ ವರ್ಷ ಡಿಸೆಂಬರ್‌ ತಿಂಗಳಿನಲ್ಲಿ ಹಿಮಪಾತವನ್ನು ಆನಂದಿಸಲು ಲಕ್ಷಾಂತರ ಜನರು ಮನಾಲಿಗೆ ಬರುತ್ತಾರೆ. ಮನಾಲಿಯು ಹಿಮದಿಂದ ಆವೃತವಾದ ಶಿಖರಗಳು ಮತ್ತು ದೇವದಾರು ಮರುಗಳು ಇಲ್ಲಿಗೆ ಬರುವ ಜನರಿಗೆ ವಿಭಿನ್ನವಾದ ಅನುಭವವನ್ನು ನೀಡುತ್ತದೆ.

ಧರ್ಮಶಾಲಾ
ಹಿಮಾಚಲ ಪ್ರದೇಶದ ಮತ್ತೊಂದು ಸುಂದರವಾದ ಸ್ಥಳವೆಂದರೆ ಧರ್ಮಶಾಲಾ, ಇಲ್ಲಿಗೆ ಬರುವವರು ಈ ಸ್ಥಳದ ಕಣಿವೆಗಳು ಮತ್ತು ಸೌಂದರ್ಯದಲ್ಲಿ ಕಳೆದುಹೋಗುತ್ತಾರೆ. ಟ್ರಯಂಡ್‌ ಚಾರಣದೊಂದಿಗೆ ಹಿಮಪಾತದ ಸಂತೋಷವು ಇಲ್ಲಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ.

* ಧನೌಲ್ತಿ
ಉತ್ತರಾಖಂಡದಲ್ಲಿರುವ ಧನೌಲ್ತಿಯ ಸೌಂದಯರ್ವನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಪ್ರತಿ ವರ್ಷ ಹಿಮಪಾತವನ್ನು ಆನಂದಿಸಲು ಅನೇಕ ಕಡೆಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ.

* ಔಲಿ
ಔಲಿ, ಉತ್ತರಕಾಂಡದ ಒಂದು ಭಾಗವಾಗಿದೆ. ಈ ಸ್ಥಳ ಬಹಳಷ್ಟು ವಿಭಿನ್ನವು ಹೌದು. ತಲೆ ಎತ್ತಿ ನಿಂತ ಎತ್ತರವಾದ ಶಿಖರಗಳು ಚಳಿಗಾಲದಲ್ಲಿ ನೋಡುಗರನ್ನ ತನ್ನತ್ತ ಕೈ ಬೀಸಿ ಕರೆಯುತ್ತದೆ.

* ಗುಲ್ಮಾರ್ಗ್‌
ಗುಲ್ಮಾರ್ಗ್ ತನ್ನ ಅಸ್ತಿತ್ವದ ಉದ್ದಕ್ಕೂ ಹಿಮಾಲಯ ಪರ್ವತಗಳ ಹಿನ್ನೆಲೆಯ ಸೌಂದರ್ಯದೊಂದಿಗೆ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಿದೆ. ಗುಲ್ಮಾರ್ಗ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗುಲ್ಮಾರ್ಗ್ ಗೊಂಡೊಲಾ, ಇದು ವಿಶ್ವದ ಅತಿ ಎತ್ತರದ ಕೇಬಲ್ ಕಾರ್ ಆಗಿದೆ. ಇದರೊಂದಿಗೆ ಕಾಶ್ಮೀರ ಕಣಿವೆಯ ಈ ಪ್ರದೇಶವು ಸ್ವರ್ಗದಂತೆ ಭಾಸವಾಗುವುದರೊಂಗೆ, ಜನ್ನತ್‌ ಎಂದೇ ಪ್ರಸಿದ್ಧಿ ಪಡೆದಿದೆ.

 ಶಿಮ್ಲಾ 
ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾವನ್ನು ಪರ್ವತಗಳ ರಾಣಿ ಎಂದೂ ಕರೆಯುತ್ತಾರೆ. ಈ  ಹಿಂದೆ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಬೇಸಿಗೆಯ ರಾಜಧಾನಿಯಾಗಿತ್ತು ಎಂದು ಹೇಳಲಾಗುತ್ತದೆ. ದೇಶದ ಮೂಲೆ ಮೂಲೆಯಿಂದ ಜನರು ಈ ಹಿಮಾವನ್ನು ಕಣ್ಬುಂಬಿಕೊಳ್ಳಲ್ಲು ಇಲ್ಲಿಗೆ ಬರುತ್ತಾರೆ.

Source : https://zeenews.india.com/kannada/lifestyle/amazing-places-to-visit-in-the-month-of-december-177923

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1


Leave a Reply

Your email address will not be published. Required fields are marked *