ವಿಶ್ವದಲ್ಲೇ ಉತ್ತಮ ಸಂವಿಧಾನ ನೀಡಿದ ಕೀರ್ತಿ ಅಂಬೇಡ್ಕರ್‍ಗೆ ಸಲ್ಲುತ್ತದೆ: ಸೇವಾಲಾಲ್ ಶ್ರೀ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜ. 26

ನಮ್ಮ ದೇಶಕ್ಕೆ ಸಂವಿಧಾನ ಯಾವ ರೀತಿ ಇರಬೇಕೆಂದು ಹಲವಾರು ವರ್ಷಗಳ ಕಾಲ ಪ್ರಪಂಚದ ವಿವಿಧ ದೇಶಗಳ ಬೇಟಿ ನೀಡಿ ಅಲ್ಲಿನ ಸಂವಿಧಾನವನ್ನು ಅಭ್ಯಾಸ ಮಾಡಿ ಅದನ್ನು ನೋಡಿ ನಮ್ಮ ದೇಶಕ್ಕೆ ಉತ್ತಮವಾದ ಸಂವಿಧಾನವನ್ನು ನೀಡಿದ ಕೀರ್ತಿ ಡಾ,ಬಿ,ಆರ್,ಆಂಬೇಡ್ಕರ್ ರವರಿಗೆ ಸಲುತ್ತದೆ ಎಂದು ಸರ್ದಾರ ಸೇವಾಲಾಲ್ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಮದಕರಿ ವೃತ್ತದಲ್ಲಿನ ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಅಬೇಂಡ್ಕರ್‍ರವರು ನೀಡಿದ ಸಂವಿಧಾನದಿಂದ ನಮ್ಮ ದೇಶ ಕೀರ್ತಿ ಸ್ವಾಭಿಮಾನವನ್ನು ಹೆಚ್ಚಿದೆ ದೇಶದಲ್ಲೂ ಸಹಾ ದೊಡ್ಡ ದೊಡ್ಡ ಬುದ್ದಿ ಜೀವಿಗಳು ಇದ್ದಾರೆ ಎಂದು ತೋರಿಸಿಕೊಟ್ಟಿದ್ದಾರೆ, ಗಣರಾಜ್ಯೋತ್ಸವನ್ನು ಅಭೀಮಾನದಿಂದ ಅಚರಣೆ ಮಾಡಲಾಗುತ್ತಿದೆ ಈಗ ನಮ್ಮ ದೇಶದ ರಾಷ್ಟ್ರಪತಿಗಳಾಗಿ ಮುರ್ಮರವ ರಾಗಿದ್ದಾರೆ. 77ನೇ ಗಣರಾಜ್ಯೋತ್ಸವಕ್ಕೆ ಚಾಲನೆಯನ್ನು ನೀಡಿದ್ದಾರೆ. ಇದು ದೇಶಕ್ಕೆ ಹಮ್ಮೆಯಾಗಿದೆ. ಅಂಬೇಡ್ಕರ್ ರವರ ಕನಸು ಚಿಂತನೆ ಎಲ್ಲರಿಗೂ ಸಮಬಾಳು, ಸಮಪಾಲು ಇರಬೇಕು ಎಲ್ಲರಿಗೂ ಗೌರವ ಹಕ್ಕು ಸಿಗಬೇಕು ಎನ್ನುವಂತಗಾತ್ತು ಇದನ್ನು ತಮ್ಮ ಸಂವಿಧಾನದಲ್ಲಿ ನೀಡಿದ್ದಾರೆ. ಈ ಸಂವಿಧಾನ ನೀಡಿದ ದಿನವೇ ಗಣರಾಜ್ಯೋತ್ಸವ ದಿನವಾಗಿದೆ ಎಂದರು.

ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ್ ರವರು ಉತತಮವಾದ ಕೆಲಸವನ್ನು ಮಾಡುತ್ತಿದ್ದಾರೆ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಯನ್ನು ಮೆರಸುತ್ತಿದ್ದಾರೆ, ಇದ್ದಲ್ಲದೆ ಕಟ್ಟಡ ಕಾರ್ಮಿಕರ ಹಿತವನ್ನು ಕಾಯುವುದರ ಮೂಲಕ ಅವರಿಗೆ ಒಳಿತನ್ನು ಮಾಡುತ್ತಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಸಾಹಿತಿಗಳು ಚಿಂತಕರಾದ ಆನಂದಕುಮಾರ್ ಮಾತನಾಡಿ, ಹಲವು ಸಂಸ್ಥಾನಗಳು ಒಗ್ಗೂಡಿ ಭಾರತ ಗಣತಂತ್ರವಾದ ಸುದಿನವಿದು, ಸ್ವಾತಂತ್ರ್ಯ ಬಂದರೂ ಹಲವು ಸಂಸ್ಥಾನಗಳ ಆಳ್ವಿಕೆಯಿದ್ದು ಒಗ್ಗಟ್ಟಿನ ಕೊರತೆಯಿತ್ತು. ಅಂತಹ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತದ ಗಣತಂತ್ರ ರೂಪುಗೊಳ್ಳಲು ಶ್ರಮ ಪಟ್ಟವರಲ್ಲಿ ಮೊದಲಿಗರಾಗಿ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸಿ ಗಣರಾಜ್ಯವಾಗಿಸಿದರು. ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಕರ್ತವ್ಯಗಳು ಮತ್ತು ಹಕ್ಕುಗಳನ್ನು ನೀಡಲು ಭಾಜನವಾಯಿತು. ಇಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಸುದಿನ. ನಮ್ಮ ಭಾರತೀಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಕಾರ್ಯ ಸಾಗುತ್ತಿದೆ. ಆ ಮೂಲಕ ಶಾಂತಿ ಸೌಹಾರ್ದತೆಯನ್ನು ಹಂಚುವ ಕಾಯಕ  ನಿರಂತರವಾಗಿ ನಡೆಯುತ್ತಿದೆ. ರಾಷ್ಟ್ರ ನಾಯಕರು ತಂದುಕೊಟ್ಟ ಸ್ವಾತಂತ್ರ್ಯವನ್ನು ಮತ್ತು ಸಂವಿಧಾನದ ಆಶಯಗಳನ್ನು ಸಂಭ್ರಮಿಸುವ ದಿನವಾಗಿದೆ. ಕೇವಲ ಪದಗಳಿಗೆ ಆದ್ಯತೆ ನೀಡದೆ ನ್ಯಾಯ ಸ್ವಾತಂತ್ರ್ಯ ಸಮಾನತೆ ಗಳಿಗೆ ಪ್ರಶಸ್ತವನ್ನು ನೀಡುವ ಮೌಲ್ಯಗಳನ್ನು ಪರಿಪಾಲಿಸುವ ಸೂತ್ರವೇ ಗಣರಾಜ್ಯ ನಮ್ಮ ರಾಷ್ಟ್ರೀಯ ಹಬ್ಬಗಳು ದೇಶಾಭಿಮಾನವನ್ನು ಮೂಡಿಸುತ್ತವೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮ ಭಾರತ. ಇಂತಹ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ರಾಷ್ಟ್ರ ನಾಯಕರ ನೆನೆಯುವ ಸಂದರ್ಭ ಇದು, ಆ ಮಹನೀಯರು ನೀಡಿದ ಭಾರತದಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ಮುನ್ನಡೆಯ ಬೇಕಿದೆ.ಎಂದರು.

ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ್ ಮಾತನಾಡಿ, ಭಾರತೀಯ ಸಂವಿಧಾನದ ಮೌಲ್ಯಗಳು, ರಾಷ್ಟ್ರಭಕ್ತಿ ಹಾಗೂ ಜನಸೇವೆಯ ಸಂಕಲ್ಪವನ್ನು ಮತ್ತೊಮ್ಮೆ ದೃಢಪಡಿಸುವ ಈ ಐತಿಹಾಸಿಕ ದಿನವು, ದೇಶದ ಏಕತೆ, ಅಖಂಡತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವ ಹೊಣೆಗಾರಿಕೆಯನ್ನು ನಾವು ಗಂಭೀರವಾಗಿ ವಹಿಸೋಣ ಎಂದ ಅವರು ಇಂದಿನ ನಮ್ಮ ಮಕ್ಕಳಿಗಾಗಿ 3 ಅಥವಾ 6 ತಿಂಗಳಲ್ಲಿ ವಿವಿಧ ರಿತಿಯ ತರಬೇತಿಯನ್ನು ನೀಡುವ ಕಾರ್ಯಕ್ಕೆ ಚಾಲನೆಯನ್ನು ನಿಡಲಾಗಿದೆ. ಇದ್ದಲ್ಲದೆ ಬೇಸಿಗೆ ಶಿಬಿರಗಳನ್ನು ನಡೆಸುವುದರ ಮೂಲಕ ವಿವಿಧ ರೀತಿಯ ಅಭ್ಯಾಸಗಳನ್ನು ಮಾಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಿದ್ಧಾರೂಢ ಮಠದ ಗೋವಿಂದಸ್ವಾಮಿಗಳು, ಸೈಟ್ ಬಾಭಣ್ಣ, ನಗರಸಭೆಯ ಮಾಜಿ ಅಧ್ಯಕ್ಷರಾದ ಮಂಜಪ್ಪ, ಟಿಪ್ಪು ಖಾಸಿಂ ಆಲಿ, ಎರ್ರಿಸ್ವಾಮಿ, ರಮೇಶ್ ಸಿದ್ದೇಶ್ ಶಿವಕುಮಾರ್, ಸೇರಿದಂತೆ ಮಹೀಳಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳು, ಭಾಗವಹಿಸಿದ್ದರು.

Views: 8

Leave a Reply

Your email address will not be published. Required fields are marked *