ಚಿತ್ರದುರ್ಗ ಸೆ. 04
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನವದೆಹಲಿಯಲ್ಲಿ ಭಾರತ ಸರ್ಕಾರದ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ಕರ್ನಾಟಕದ ವಿವಿಧ ಮಠಪೀಠ ಪರಂಪರೆಯ ಪೂಜ್ಯ ಮಠಾಧೀಶರ ನಿಯೋಗ ಭೇಟಿ ನೀಡಿ ಧರ್ಮಕ್ಷೇತ್ರಗಳ ಸಂರಕ್ಷಣೆ ಕುರಿತು ಸುಧೀರ್ಘವಾದ ಚರ್ಚೆ ನಡೆಸಿದರು.
ನಿಯೋಗದಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ಭಗೀರಥ ಗುರುಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಜೈನಪೀಠ ಹುಬ್ಬಳ್ಳಿಯ ವರೂರು ಮಠದ ಶ್ರೀ ಧರ್ಮಸೇನ ಸ್ವಾಮೀಜಿ, ಮಲೇ ಮಾದೇಶ್ವರ ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಅಥಣಿ ಶ್ರೀ ಆತ್ಮರಾಮ ಸ್ವಾಮೀಜಿಗಳ, ರಾಜಸ್ಥಾನದ ಪಾಶ್ರ್ವ
ಪದ್ಮಾವತಿ ದಿವ್ಯ ಜೈನ ಮಂದಿರ, ತಿಜಾರಾ ಶ್ರೀ ಸೌರಭಸೇನ ಭಟ್ಟಾರಕ ಮಹಾಸ್ವಾಮಿಗಳು ಇದ್ದರು.
Views: 27