
ಚಿತ್ರದುರ್ಗ: ಎರಡು ತಿಂಗಳಲ್ಲಿ ಹಣ ಡಬ್ಬಲ್ ಮಾಡಿಕೊಡುವ ಮೋಸದ ಜಾಲಕ್ಕೆ ಸಿಲುಕಿ 106 ಜನ ಅಂದಾಜು 4.80 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಈ ವಂಚನೆ ಪ್ರಕರಣ ದಾಖಲಾಗಿದ್ದು, ಚಿಕ್ಕಜಾಜೂರಿನ ರೈಲ್ವೇ ಜಂಕ್ಷನ್‍ನಲ್ಲಿ ಕೆಲಸ ಮಾಡುವ ಸಾಕಷ್ಟು ಜನ ಉದ್ಯೋಗಿಗಳು, ಅವರ ಸಂಬಂಧಿಕರು, ಸ್ನೇಹಿತರು ಹಣ ಡಬ್ಬಲ್ ಮಾಡಿಕೊಡುವ ಕಂಪನಿಯೊಂದನ್ನು ನಂಬಿ ಹಣ ಕಳೆದುಕೊಂಡಿದ್ದಾರೆ.
2023 ಡಿಸೆಂಬರ್ 15 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರುಜೀವ ನೀಡಿದ್ದು, ಪ್ರಕರಣವನ್ನು ಸೈಬರ್ ಠಾಣೆಗೆ ವರ್ಗಾಯಿಸಿ ದಿ ಬ್ಯಾನಿಂಗ್ ಆಫ್ ಅನ್‍ರೆಗ್ಯುಲೇಟೆಡ್ ಡಿಪೋಸಿಟ್ ಸ್ಕೀಮ್ಸ್ ಆರ್ಡಿನೆನ್ಸ್-2019(ಬಡ್ಸ್) ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ.
ಏನಿದು 106 ಜನರಿಗೆ ವಂಚನೆ ಮಾಡಿರುವ ಪ್ರಕರಣ:
ಸುಮಾರು 9 ತಿಂಗಳ ಹಿಂದೆ ಚಿಕ್ಕಜಾಜೂರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಪಿ.ವಿ.ಶೇಷಯ್ಯ ಹಾಗೂ ಎಂ.ಏಳುಕುಂಡಲು ಅವರ ಮೂಲಕ ಮಾಹಿತಿ ಪಡೆದುಕೊಂಡು ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಕೋಡೆ ರಮಣಯ್ಯ ಎಂಬುವವರ ಕ್ರೌಡ್ ಕ್ಲಬ್ ಇಂಟರ್‍ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ 60 ದಿನಗಳಲ್ಲಿ ಡಬಲ್ ಆಗುತ್ತದೆ ಎಂದು ಚಿಕ್ಕಜಾಜೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸದುರ್ಗ ತಾಲೂಕಿನ ಬಾಗೂರು ಮೂಲದ ರಮೇಶಪ್ಪ ಎಂಬುವವರು ಸ್ನೇಹಿತ ರವೀಂದ್ರ ಹೆಸರಿನಲ್ಲಿ 1.4 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. 2 ತಿಂಗಳ ನಂತರ ರಮೇಶಪ್ಪನಿಗೆ 1.96 ಲಕ್ಷ ರೂ.ಗಳನ್ನು ಹಿಂದಿರುಗಿಸಿದ್ದಾರೆ. ಇದರಿಂದ ನಂಬಿಕೆ ಬಂದಂತಾಗಿದೆ. ಆನಂತರ ಮತ್ತೆ ಇದೇ ಕ್ರೌಡ್ ಕ್ಲಬ್ ಕಂಪನಿಗೆ 1.4 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.
ಇವರಂತೆ ಅಲ್ಲಿದ್ದ ಇತರೆ ಸಿಬ್ಬಂದಿ, ಸಂಬಂಧಿರು, ಸ್ನೇಹಿತರು ಸೇರಿ ಒಟ್ಟು 106 ಮಂದಿ ವಿವಿಧ ಬ್ಯಾಂಕುಗಳ ಮೂಲಕ ಒಟ್ಟು 4,79,99,000 (4 ಕೋಟಿ 79 ಲಕ್ಷ 99 ಸಾವಿರ) ರೂ.ಗಳನ್ನು ಈ ಕಂಪನಿಯ ಖಾತೆಗೆ ವಿವಿಧ ಬ್ಯಾಂಕುಗಳಿಂದ ಹೂಡಿಕೆ ಮಾಡಿದ್ದಾರೆ.
ಈ ಸಂಬಂಧ ಕ್ರೌಡ್ ಕ್ಲಬ್ ಕಂಪನಿಯ ಮಾಲಿಕ ಕೋಡೆ ರಮಣಯ್ಯ ಒಪ್ಪಂಧವನ್ನು ಮಾಡಿಕೊಂಡಿದ್ದಾರೆ. ಆದರೆ, ಅಗ್ರಿಮೆಂಟ್ ಪ್ರಕಾರ ಎರಡು ತಿಂಗಳು ಕಳೆದ ನಂತರ ಹಣ ಹಿಂದಿರುಗಿಸಿಲ್ಲ. ಅವರು ಕೊಟ್ಟಿದ್ದ ಎಲ್ಲ ನಂಬರ್‍ಗಳಿಗೆ ಪೋನ್ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ವಾಟ್ಸಪ್ ಮೆಸೇಜ್ ಕಳಿಸಿದರೂ ಉತ್ತರಿಸಿಲ್ಲ.
ಈ ಸಂಬಂಧ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಕಂಪನಿಯ ಕೋಡೆ ರಮಣಯ್ಯ 106 ಜನರಿಗೆ ಹಣ ಡಬ್ಬಲ್ ಮಾಡಿಕೊಡುವುದಾಗಿ 4.79 ಕೋಟಿ ರೂ.ಗಳನ್ನು ವಂಚನೆ ಮಾಡಿದ್ದಾರೆ ಎಂದು ರಮೇಶಪ್ಪ ದೂರು ದಾಖಲಿಸಿದ್ದಾರೆ.
ಚಿಕ್ಕಜಾಜೂರಿನಲ್ಲಿ ದಾಖಲಾಗಿದ್ದ ಸದರಿ ದೂರನ್ನು ಸೈಬರ್ ಠಾಣೆಗೆ ವರ್ಗಾವಣೆ ಮಾಡಿಕೊಂಡು, ಬಡ್ಸ್ ಕಾಯ್ದೆ ಅಡಿ ತನಿಖೆ ಮಾಡಲಾಗುತ್ತಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1