ವಿದ್ಯಾ ವಿಕಾಸ ಶಾಲೆಯಲ್ಲಿ ‘ವಾರ್ಷಿಕ ಪ್ರಶಸ್ತಿ ಪುರಸ್ಕಾರ’ ಸಮಾರಂಭ.

ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ‘ವಾರ್ಷಿಕ ಪ್ರಶಸ್ತಿ ವಿತರಣಾ’ ಸಮಾರಂಭವನ್ನು ಆಯೋಜಿಸಲಾಗಿತ್ತು.

2022-23ನೇ ಸಾಲಿನ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಶಾಲಾ ಹಂತದಲ್ಲಿ  ಆಯೋಜಿಸಲಾಗಿದ್ದ, ‘ಪ್ರಶಸ್ತಿ ವಿತರಣಾ ಕಾರ್ಯಕ್ರಮ’ದಲ್ಲಿ ಪ್ರತಿಭಾ ಅನ್ವೇಷಣೆ, ಆಶುಭಾಷಣ ಸ್ಪರ್ಧೆ, ಪುಸ್ತಕ ಓದು ಹೇಳು, ಕಸದಿಂದ ರಸ, ಚಿತ್ರಕಲಾ ಸ್ಪರ್ಧೆ, ವಿಜ್ಞಾನ ವಸ್ತು ಪ್ರದರ್ಶನ, ಸ್ಪೆಲ್ ಬಿ ಕಾಂಪಿಟೇಶನ್, ಕ್ವಿಜ್ ಕಾಂಪಿಟೇಶನ್, ವಿದ್ಯಾ ವಿಕಾಸ ಸ್ಪರ್ಧಾ ಸುಗ್ಗಿ, ಸ್ಥಳದಲ್ಲಿಯೇ ಮಾದರಿ ತಯಾರಿಕೆ, ಗಾಯನ ಸ್ಪರ್ಧೆ, ಛದ್ಮ ವೇಷ. ಮೆಮೋರಿ ಟೆಸ್ಟ್. ಇನ್ನಿತರೆ ಸ್ಪರ್ಧೆಗಳ ಜೊತೆಗೆ ವಿದ್ಯಾ ವಿಕಾಸ ಶಾಲೆಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ  ಪ್ರತಿನಿಧಿಸಿ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಪುರಸ್ಕಾರ ಹಾಗೂ ಈ ವರ್ಷದ ಅತಿ ಹೆಚ್ಚು ಹಾಜರಾತಿ ಪಡೆದ ವಿದ್ಯಾರ್ಥಿಗಳು ಮತ್ತು  ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಯದರ್ಶಿಗಳಾದ ಬಿ ವಿಜಯ್ ಕುಮಾರ್ ಮಾತನಾಡುತ್ತಾ, ಶಾಲೆಯಲ್ಲಿ ನಡೆಯುವ ಎಲ್ಲಾ ಸ್ಪರ್ದೆಗಳಲ್ಲಿ, ಮಕ್ಕಳ ಭಾಗವಹಿಸಿಕೆ  ಅತಿ ಮುಖ್ಯ. ಭಾಗವಹಿಸುವಿಕೆಯಿಂದ ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮುತ್ತದೆ. ಭಾಗವಹಿಸಿದ ಎಲ್ಲರೂ ವಿಜೇತರೆ. ಅದರಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಪುರಸ್ಕಾರಗಳು ಲಭಿಸುತ್ತವೆ. ಮುಂದಿನ ದಿನಗಳಲ್ಲಿ ಭಾಗವಹಿಸಿಕೆ ಪ್ರಮಾಣ ಹೆಚ್ಚಾಗಲಿ ಶಾಲೆಗೆ, ರಾಜ್ಯಕ್ಕೆ, ಮತ್ತು ರಾಷ್ಟ್ರಕ್ಕೆ ಕೀರ್ತಿ ತರುವ ಪ್ರಜೆಗಳಾಗಿ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶೈಕ್ಷಣಿಕ ನಿರ್ದೇಶಕರಾದ ಪೃಥ್ವೀಶ್ ಎಸ್, ಎಮ್, ಶಾಲಾ ಆಡಳಿತಾಧಿಕಾರಿಯಾದ ಡಾ// ಸ್ವಾಮಿ ಕೆ. ಎನ್.ಮುಖ್ಯೋಪಾದ್ಯಾಯರಾದ ಸಂಪತ್ ಕುಮಾರ್ ಸಿ, ಡಿ. ಐ ಸಿ ಎ ಸ್ಸಿ ಪ್ರಾಂಶುಪಾಲರಾದ  ಬಸವರಾಜಯ್ಯ.ಪಿ ಹಾಗೂ ಬೋಧಕ/ ಬೋಧಕೇತರ ವರ್ಗ ಉಪಸ್ಥತರಿದ್ದರು. ವಿದ್ಯಾರ್ಥಿಗಳಾದ ಯಶು ಕೆ ಜಿ ಮತ್ತು ಅಭಯ್ ಸಿ ಐ ಕಾರ್ಯಕ್ರಮ ನಿರೂಪಿಸಿದರು, ಸನಿಹಾ ಸಿಂಚನಾ ಸ್ವಾಗತಿಸಿ, ನವಮಿ ವಂದಿಸುವುದರ  ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *