
ಐಪಿಎಲ್ 2023 ರಲ್ಲಿ (IPL 2023) ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ನಡುವಣ ಪಂದ್ಯ ಕುತೂಹಲ ಕೆರಳಿಸಿತ್ತು. ಬೌಲಿಂಗ್ನಲ್ಲಿ ಸತತ ಕಳಪೆ ಪ್ರದರ್ಶನ ತೋರುತ್ತಿದ್ದ ಆರ್ಸಿಬಿ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಆರ್ಆರ್ ವಿರುದ್ಧದ ಪಂದ್ಯದಲ್ಲಿ ಊಹಿಸಲಾಗದ ರೀತಿಯ ಪ್ರದರ್ಶನ ತೋರಿತು. ಸ್ಯಾಮ್ಸನ್ ಪಡೆಯನ್ನು ಕೇವಲ 59 ರನ್ಗೆ ಆಲೌಟ್ ಮಾಡಿ ಬರೋಬ್ಬರಿ 112 ರನ್ಗಳ ಜಯ ಸಾಧಿಸಿತು. ಈ ಮೂಲಕ ಬೆಂಗಳೂರು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಫೀಲ್ಡಿಂಗ್ನಲ್ಲೂ ಆರ್ಸಿಬಿ ಪ್ಲೇಯರ್ಸ್ ಮೋಡಿ ಮಾಡಿದರು. ಅದರಲ್ಲೂ ಅನುಜ್ ರಾವತ್ (Anuj Rawat) ಮಾಡಿದ ರನೌಟ್ ಥೇಟ್ ಧೋನಿ ರೀತಿಯಲ್ಲೇ ಇತ್ತು.
ಬ್ಯಾಟಿಂಗ್ನಲ್ಲಿ ಕೇವಲ 11 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 29 ರನ್ ಚಚ್ಚಿದ ಅನುಜ್ ರಾವತ್ ವಿಕೆಟ್ ಕೀಪರ್ ಆಗಿಯೂ ತಮ್ಮ ಕೈಚಳಕ ತೋರಿಸಿದರು. ದಿನೇಶ್ ಕಾರ್ತಿಕ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತ ರಾವತ್ ಒಂದು ರನೌಟ್ ಮಾಡಿ ಎಲ್ಲರ ನಿಬ್ಬೆರಗಾಗಿಸಿದರು. ಈ ರನೌಟ್ ಥೇಟ್ ಎಂಎಸ್ ಧೋನಿ ಮಾಡಿದ ರೀತಿಯಲ್ಲೇ ಇತ್ತು. 8ನೇ ಓವರ್ನ ಕರ್ಣ್ ಶರ್ಮಾ ಬೌಲಿಂಗ್ನ ಕೊನೆಯ ಎಸೆತದಲ್ಲಿ ಶಿಮ್ರೊನ್ ಹೆಟ್ಮೇರ್ ಎರಡು ರನ್ಗೆಂದು ಓಡಿದರು. ಆದರೆ, ಚೆಂಡನ್ನ ಬೇಗನೆ ಪಡೆದು ಸಿರಾಜ್ ವಿಕೆಟ್ ಕೀಪರ್ ಕಡೆ ಎಸೆದರು. ಇದನ್ನು ಗಮನಿಸಿದ ಹೆಟ್ಮೇರ್ ಒಂದು ರನ್ ಸಾಕೆಂದು ರವಿಚಂದ್ರನ್ ಅಶ್ವಿನ್ಗೆ ಹೇಳಿದರು.
IPL 2023: ಐಪಿಎಲ್ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಟಾಪ್-5 ತಂಡಗಳಾವುವು ಗೊತ್ತಾ?
ಆದರೆ, ಅಷ್ಟೊತ್ತಿಗೆ ಅಶ್ವಿನ್ ಕೊಂಚ ಕ್ರೀಸ್ ಬಿಟ್ಟಾಗಿತ್ತು. ಇತ್ತ ಚೆಂಡು ತನ್ನ ಕೈಗೆ ಸಿಗುತ್ತಿದ್ದಂತೆ ಕೀಪರ್ ರಾವತ್ ವಿಕೆಟ್ ಅನ್ನು ನೋಡದೆ ಹಿಂಬದಿಯಿಂದ ಬಾಲ್ ಎಸೆದಿದ್ದು ಚೆಂಡು ವಿಕೆಟ್ಗೆ ಬಡಿದಿದೆ. ಅಶ್ವಿನ್ ಕೂಡಲೇ ಕ್ರೀಸ್ನೊಳಗೆ ಬ್ಯಾಟ್ ತಂದರೂ ಕೂದಲೆಳೆಯಿಂದ ರನೌಟ್ ಆಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.
One of the best glove work in IPL history – Anuj Rawat.pic.twitter.com/hW7FpspcCw
— Johns. (@CricCrazyJohns) May 14, 2023
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ (18) ಅರ್ಧಶತಕದ ಜೊತೆಯಾಟ ನೀಡಿದರು. ಬಳಿಕ ಗ್ಲೆನ್ ಮ್ಯಾಕ್ಸ್ವೆಲ್ ಜೊತೆಯಾದ ಫಾಫ್ ಬೊಂಬಾಟ್ ಆಟ ಪ್ರದರ್ಶಿಸಿದರು. ಡುಪ್ಲೆಸಿಸ್ 44 ಎಸೆತಗಳಲ್ಲಿ 55 ರನ್ ಗಳಿಸಿದರೆ, ಮ್ಯಾಕ್ಸ್ವೆಲ್ 54 ರನ್ ಚಚ್ಚಿದರು. ಕೊನೆಯಲ್ಲಿ ರಾವತ್ 11 ಎಸೆತಗಳಲ್ಲಿ 29 ರನ್ ಸಿಡಿಸಿದ ಪರಿಣಾಮ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ಮೊದಲ ಓವರ್ನಿಂದಲೇ ವಿಕೆಟ್ ಕಳೆದುಕೊಂಡು ಸಾಗಿ ಕೇವಲ 59 ರನ್ಗೆ ಸರ್ವಪತನ ಕಂಡಿತು. ತಂಡದ ಪರ ಹೆಟ್ಮೇರ್ (35) ಅತಿ ಹೆಚ್ಚು ಕಲೆಹಾಕಿದರು. ಆರ್ಸಿಬಿ ಪರ ವೇಯ್ನ್ ಪಾರ್ನೆಲ್ 3 ವಿಕೆಟ್ ಕಿತ್ತರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Views: 0