ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಗಣಿತ ಉಪನ್ಯಾಸಕರ 1 ಹುದ್ದೆ, ವಿದ್ಯಾರ್ಹತೆ-ಎಂ.ಎಸ್ಸಿ(ಗಣಿತ), ಗಣಕ ವಿಜ್ಞಾನ ಉಪನ್ಯಾಸಕರ 1 ಹುದ್ದೆ, ವಿದ್ಯಾರ್ಹತೆ-ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಅಥವಾ ಎಂ.ಸಿ.ಎ, ಬಿ.ಇ, ಕನ್ನಡ ಭಾಷಾ ಶಿಕ್ಷಕರ 12 ಹುದ್ದೆ, ಆಂಗ್ಲ ಭಾಷಾ ಶಿಕ್ಷಕರ 6 ಹುದ್ದೆ, ಹಿಂದಿ ಭಾಷಾ ಶಿಕ್ಷಕರ 4 ಹುದ್ದೆ, ಗಣಿತ ಶಿಕ್ಷಕರ 3 ಹುದ್ದೆ, ವಿಜ್ಞಾನ ಶಿಕ್ಷಕರ 6 ಹುದ್ದೆ, ಸಮಾಜ ವಿಜ್ಞಾನ ಶಿಕ್ಷಕರ 4 ಹುದ್ದೆಗಳಿವೆ.

ಇವರ ವಿದ್ಯಾರ್ಹತೆ-ಪದವಿ ಮತ್ತು ಬಿ.ಇಡಿ(ಟಿ.ಇ.ಟಿ ಉತ್ತೀರ್ಣರಾದವರಿಗೆ ಮೊದಲ ಆದ್ಯತೆ), ಗಣಕ ವಿಜ್ಞಾನ ಶಿಕ್ಷಕರ 6 ಹುದ್ದೆ, ವಿದ್ಯಾರ್ಹತೆ-ಪದವಿ ಬಿಎಸ್ಸಿ, ಬಿಸಿಎ, ಬಿ.ಇ(ಸಿ.ಎಸ್,ಐ.ಎಸ್), ದೈಹಿಕ ಶಿಕ್ಷಣ ಶಿಕ್ಷಕರ 4 ಹುದ್ದೆ, ವಿದ್ಯಾರ್ಹತೆ-ಪದವಿ ಮತ್ತು ಬಿ.ಪಿ.ಇಡಿ ಯನ್ನು ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ಸ್ವವಿವರದೊಂದಿಗೆ ಅಗತ್ಯ ದಾಖಲೆಗಳ ದೃಢೀಕರಿಸಿದ ಪ್ರತಿಗಳನ್ನು ಜೂನ್ 4 ರೊಳಗಾಗಿ ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Source : https://m.dailyhunt.in/news/india/kannada/kannadadunia-epaper-kannadad/atithi+upanyaasakara+huddegalige+arji+aahvaana-newsid-n613957190?listname=topicsList&topic=news&index=13&topicIndex=1&mode=pwa&action=click

 

Leave a Reply

Your email address will not be published. Required fields are marked *