ಮೊಡವೆ ಸಮಸ್ಯೆ ಬುಡಸಮೇತ ಕಿತ್ತೊಗೆಯಲು ಕಿತ್ತಳೆ ಹಣ್ಣಿನ ಸಿಪ್ಪೆ ಬೆಸ್ಟ್! ಹೀಗೆ ಹಚ್ಚಿದರೆ ಅದ್ಭುತ ಪ್ರಯೋಜನ

Health: ಕಿತ್ತಳೆ ವಿಟಮಿನ್ ಸಿನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಚರ್ಮಕ್ಕೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ. ನಿಮ್ಮ ಚರ್ಮದಲ್ಲಿ ಗೋಚರಿಸುವ ಏಜ್ಡ್ ಮಾರ್ಕ್ಸ್’ಗಳನ್ನು ಸಹ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಈ ಫೇಸ್ ಸ್ಕ್ರಬ್ ಅನ್ನು ಬಳಸುವುದರಿಂದ ಡೆಡ್ ಸ್ಕಿನ್’ಗಳನ್ನು ತೆಗೆದುಹಾಕಲು ಮತ್ತು ನಿಮ್ಮ ಮುಖದ ಮೇಲೆ ಸಂಗ್ರಹವಾಗಿರುವ ಟ್ಯಾನಿಂಗ್ ಸಹ ಮಾಯ ಮಾಡುತ್ತದೆ.

ಬೇಸಿಗೆಯಲ್ಲಿ ಮುಖದ ಮೇಲೆ ಬೆವರು, ಮಾಲಿನ್ಯ ಮತ್ತು ಧೂಳು ಕುಳಿತುಕೊಳ್ಳುವ ಕಾರಣ, ನಿಮ್ಮ ಚರ್ಮವು ಮಂದ ಮತ್ತು ನಿರ್ಜೀವವಾಗುತ್ತದೆ. ಮುಖದ ಮೇಲೆ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕಲು ಸ್ಕ್ರಬ್ಬಿಂಗ್ ಅಗತ್ಯವಿರುತ್ತದೆ. ಅದಕ್ಕಾಗಿಯೇ ಇಂದು ನಾವು ನಿಮಗಾಗಿ ಆರೆಂಜ್ ಪೀಲ್ ಫೇಸ್ ಸ್ಕ್ರಬ್ ಮನೆಮದ್ದನ್ನು ತಂದಿದ್ದೇವೆ.

ಕಿತ್ತಳೆ ವಿಟಮಿನ್ ಸಿನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಚರ್ಮಕ್ಕೆ ಸಾಕಷ್ಟು ಪೋಷಣೆಯನ್ನು ನೀಡುತ್ತದೆ. ನಿಮ್ಮ ಚರ್ಮದಲ್ಲಿ ಗೋಚರಿಸುವ ಏಜ್ಡ್ ಮಾರ್ಕ್ಸ್’ಗಳನ್ನು ಸಹ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಈ ಫೇಸ್ ಸ್ಕ್ರಬ್ ಅನ್ನು ಬಳಸುವುದರಿಂದ ಡೆಡ್ ಸ್ಕಿನ್’ಗಳನ್ನು ತೆಗೆದುಹಾಕಲು ಮತ್ತು ನಿಮ್ಮ ಮುಖದ ಮೇಲೆ ಸಂಗ್ರಹವಾಗಿರುವ ಟ್ಯಾನಿಂಗ್ ಸಹ ಮಾಯ ಮಾಡುತ್ತದೆ.

ಹಾಗಾದರೆ ಆರೆಂಜ್ ಪೀಲ್ ಫೇಸ್ ಸ್ಕ್ರಬ್ ಮಾಡುವುದು ಹೇಗೆ ಎಂದು ತಿಳಿಯೋಣ: ಕಿತ್ತಳೆ ಸಿಪ್ಪೆಯ ಫೇಸ್ ಸ್ಕ್ರಬ್ ಮಾಡಲು, ಮೊದಲು ಒಂದು ಬೌಲ್ ತೆಗೆದುಕೊಳ್ಳಿ. ನಂತರ ಅದರಲ್ಲಿ ಸುಮಾರು 2 ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಪುಡಿಮಾಡಿ ಹಾಕಿ. ಬಳಿಕ ಸುಮಾರು 2 ರಿಂದ 3 ಚಮಚ ಮೊಸರು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ಆರೆಂಜ್ ಪೀಲ್ ಫೇಸ್ ಸ್ಕ್ರಬ್ ಅನ್ನು ಹೇಗೆ ಹಚ್ಚಬೇಕು? ಆರೆಂಜ್ ಪೀಲ್ ಫೇಸ್ ಸ್ಕ್ರಬ್ ಅನ್ನು ಹಚ್ಚುವ ಮೊದಲು ನಿಮ್ಮ ಮುಖವನ್ನು ತೊಳೆದು ಸ್ವಚ್ಛಗೊಳಿಸಿ. ನಂತರ ಫೇಸ್ ಸ್ಕ್ರಬ್’ನ್ನು ಸಂಪೂರ್ಣ ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಿ. ಸುಮಾರು 5-7 ನಿಮಿಷಗಳ ಕಾಲ ಲಘು ಕೈಗಳಿಂದ ಮುಖವನ್ನು ಮಸಾಜ್ ಮಾಡಿ. ಈ ಫೇಸ್ ಸ್ಕ್ರಬ್ ಅನ್ನು ನೀವು ಕಣ್ಣುಗಳಿಂದ ದೂರವಿಡಬೇಕು ಎಂಬುದನ್ನು ನೆನಪಿನಲ್ಲಿಡಿ. ನಂತರ ಹತ್ತಿ ಪ್ಯಾಡ್ ಮತ್ತು ನೀರಿನಿಂದ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಉತ್ತಮ ಫಲಿತಾಂಶಕ್ಕಾಗಿ, ಈ ಸ್ಕ್ರಬ್ ಅನ್ನು ವಾರಕ್ಕೆ 2 ಬಾರಿ ಬಳಸಿ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Samagrasuddi.co.in ಅದನ್ನು ಖಚಿತಪಡಿಸುವುದಿಲ್ಲ.)

Source: https://zeenews.india.com/kannada/health/orange-peel-for-skin-problem-use-like-this-way-you-will-get-huge-benefit-130685

Leave a Reply

Your email address will not be published. Required fields are marked *