ಹರಿವೆ ಸೊಪ್ಪಿನ ಬಗ್ಗೆ ಅರಿವು ಇದೆಯೇ! 

Health Tips: ಹರಿವೆ ಸೊಪ್ಪು ಹಲವು ವಿಧಗಳನ್ನು ಹೊಂದಿದೆ. ಕೆಂಪು ಬಣ್ಣದ  ಹರಿವೆ ಸೊಪ್ಪು ಹೇರಳವಾದ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್, ವಿಟಮಿನ್ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು  ಹೊಂದಿದೆ. 

ಹರಿವೆ ಸೊಪ್ಪಿನ ಹಲವು ವಿಧಗಳನ್ನು ಹೊಂದಿದೆ. ಕೆಂಪು ಬಣ್ಣದ  ಹರಿವೆ ಸೊಪ್ಪು ಹೇರಳವಾದ ಪ್ರೋಟೀನ್, ಕ್ಯಾಲ್ಸಿಯಂ, ಸತು, ಪೊಟ್ಯಾಶಿಯಂ, ಫೈಬರ್ , ವಿಟಮಿನ್ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು  ಹೊಂದಿದೆ. 

ರಕ್ತದೊತ್ತಡ ನಿಯಂತ್ರಣ : ಹರಿವೆ ಸೊಪ್ಪು ಕಡಿಮೆ ಕೊಲೆಸ್ಟ್ರಾಲ್‌ ಅಂಶವನ್ನು ಹೊಂದಿರುವುದರಿಂದ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿಯಾಗಿದೆ. ನಾರಿನಾಂಶ ಇರುವುದರಿಂದ ದೇಹದ ಆರೋಗ್ಯಕ್ಕೆ ತುಂಬಾನೆ ಉಪಯೋಗಕಾರಿಯಾಗಿದೆ.  ಕೊಲೆಸ್ಟ್ರಾಲ್‌ ಕಡಿಮೆಯಾದಂತೆ ತೂಕವು ನಿಯಂತ್ರಣಕ್ಕೆ ಬರುತ್ತದೆ. ಅದರ ಜೊತೆಯಲ್ಲಿ  ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ. 

ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವವರೆಗೂ ಹರಿವೆ ಸೊಪ್ಪು ಸಹಕಾರಿಯಾಗಿದೆ: ಹರಿವೆ ಸೊಪ್ಪು ದೇಹಕ್ಕೆ ತಗುಲುವ  ಬ್ಯಾಕ್ಟೀರಿಯಾಗಳನ್ನು  ನಿಯಂತ್ರಿಸುತ್ತದೆ.  ಇದರಲ್ಲಿನ  ಫೈನ್ಯೂಟ್ರಿಯೆಂಟ್ಸ್‌   ಅಂಶವು  ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ವಿಟಮಿನ್‌ ಎ, ವಿಟಮಿನ್‌ ಸಿ ಸೇರಿದಂತೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು  ನೀಡುತ್ತದೆ. 

ಹರಿವೆ ಸೊಪ್ಪಿನಲ್ಲಿರುವ ಕಬ್ಬಿಣಾಂಶವು ದೇಹದಲ್ಲಿ ರಕ್ತ ಕಣಗಳ  ಉತ್ಪಾದನೆಗೆ ಸಹಕಾರಿಯಾಗಿದೆ. ಇದರಲ್ಲಿನ ಕ್ಯಾಲ್ಸಿಯಂ ಅಂಶವು ಮೂಳೆ, ಸ್ನಾಯುಗಳು , ಸಂಧಿವಾತಗಳನ್ನು ನಿಯಂತ್ರಿಸುತ್ತದೆ. ಅದರ ಜೊತೆಯಲ್ಲಿ ದಂತ ಸಮಸ್ಯೆಗಳನ್ನು ನಿವಾರಿಸುತ್ತದೆ.

ಹೆಣ್ಣುಮಕ್ಕಳ ಆರೋಗ್ಯಕ್ಕೆ ಹರಿವೆ ಸೊಪ್ಪು ಹೆಚ್ಚು ಉಪಯುಕ್ತವಾಗಿದೆ. ಮುಟ್ಟಿನ ಸಮಯದಲ್ಲಿ ಗರ್ಭಿಣಿ, ಬಾಣಂತಿ ಸಮಯದಲ್ಲಿ ಹರಿವೆ ಸೊಪ್ಪಿನ ಸೇವನೆ ಬಹು ಉಪಯೋಗಕಾರಿಯಾಗಿದೆ. 

Source: https://zeenews.india.com/kannada/health/amarnath-leaves-good-for-health-129246

Leave a Reply

Your email address will not be published. Required fields are marked *