ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ.24:
ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ತನ್ನ ೪೦ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಆಯೋಜಿಸುತ್ತಿರುವ ಮಾಸಿಕ ಗಮಕ ವಾಚನ, ವ್ಯಾಖ್ಯಾನ ಸಂಭ್ರಮದ ೩೦ನೇ ಕಾರ್ಯಕ್ರಮವು ಜ.27ರ ಮಂಗಳವಾರ ಸಂಜೆ6 ಗಂಟೆಗೆ ನಗರದ ಜೆಸಿಅರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದೆ. ಅಂದಿನ ವಾಚನವನ್ನು ವಿದುಷಿ ಶ್ರೀಮತಿ ಚಂಪಕಾಶ್ರೀಧರ್ ನಡೆಸಿಕೊಡಲಿದ್ದು, ವ್ಯಾಖ್ಯಾನವನ್ನು ವಿದ್ವಾನ್ ಅಚ್ಯುತ ಅವಧಾನಿಯವರು ಮತ್ತೂರು, ನಡೆಸಿಕೊಡಲಿದ್ದಾರೆ .
ಕುಮಾರವ್ಯಾಸ ಭಾರತದ ಕಾವ್ಯದ” ಕಿರಾತಾರ್ಜುನೀಯ” ಪ್ರಸಂಗವಾಗಿರಲಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳವರು ವಹಿಸಲಿದ್ದಾರೆ.
ಸಾರ್ವಜನಿಕರು,ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಮಕ ಕಲೆಯನ್ನು ಪ್ರೋತ್ಸಾಹಿಸಲು ಗಮಕ ಕಲಾಭಿಮಾನಿಗಳ ಸಂಘ ಹಾಗೂ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದ ಆಡಳಿತ ಮಂಡಳಿಯ ಸಂಘದ ಪದಾಧಿಕಾರಿಗಳು ಕೋರಿದ್ದಾರೆ.