ಚಿತ್ರದುರ್ಗ ನ. 13
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಸರ್ಕಾರ ಕ್ರೀಡಾಪಟುಗಳಿಗೆ ಉದ್ಯೋಗದ ಭರವಸೆಯನ್ನು ನೀಡಿದರೆ ವಿವಿಧ ಕ್ರೀಡೆಗಳಲ್ಲಿ ಭಾಗಹಿಸಲು ಯುವ ಜನತೆ ಮುಂದೆ ಬರುತ್ತಾರೆ, ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಮಾಡಲಾಗುವುದೆಂದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ತಿಳಿಸಿದರು.
ಚಿತ್ರದುರ್ಗ ನಗರದ ಯುವ ಜನ ಕ್ರೀಡೆ ಸಬಲೀಕರಣ ಇಲಾಖೆಗೆ ಭೇಟಿ ನೀಡಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಉತ್ತಮವಾದ ಕ್ರೀಡಾಂಗಣ ಇದೆ ಇಲ್ಲಿ ಉತ್ತಮವಾಧ ಕ್ರೀಡಾ ಶಾಲೆಯೂ ಸಹಾ ಚನ್ನಾಗಿ ನಡೆಯುತ್ತಿದೆ ಆದರೆ ಇಲ್ಲಿ 5 ರಿಂದ 7ನೇ ತರಗತಿಯವರೆಗೆ ಮಾತ್ರ ಇದೆ ಮುಂದೆ ಇಲ್ಲ ಈ ಹಿನ್ನಲೆಯಲ್ಲಿ 8 ರಿಂದ 10 ನೇ ತರಗತಿಯವರೆಗೆ ಮುಂದುವರೆಸುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಈ ರೀತಿಯಾಗಿ ಮುಂದುವರೆಸುವುದರಿಂದ ಸರ್ಕಾರಕ್ಕೆ ಯಾವುದೇ ಅರ್ಥಿಕವಾಗಿ ಹೊರೆಯಾಗುವುದಿಲ್ಲ, ಈಗ 8ನೇ ತರಗತಿಯವರೆಗೂ ಮಕ್ಕಳನ್ನು ಉತ್ತಮವಾದ ಆಹಾರವನ್ನು ನೀಡಿ ದೈಹಿಕವಾಗಿ ಚನ್ನಾಗಿ ಇರುವಂತೆ ಮಾಡಲಾಗುತ್ತದೆ ಆದರೆ 7 ರ ನಂತರ ಮುಂದೆ ಏನು ಎಂಬ ಪ್ರಶ್ನೆ ಮೂಡುತ್ತದೆ ಈ ಹಿನ್ನಲೆಯಲ್ಲಿ ಚಿತ್ರದುರ್ಗದಲ್ಲಿ 8 ರಿಂದ 10ನೇ ತರಗತಿಯವರೆಗೂ ಕ್ರೀಡಾ ಹಾಸ್ಟಲ್ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಚಿತ್ರದುರ್ಗ ನಗರದಲ್ಲಿ ಉತ್ತಮವಾದ ಆಟದ ಮೈದಾನ ಇದೆ ಇಲ್ಲಿ ಸಿಂಥಟಿಕ್ ಟ್ರಾಕ್ ಇದೆ ಜಿಮ್, ಇದೆ ಒಳಾಂಗಣ ಕ್ರೀಡಾಂಗಣ ಇದೆ, ವಿವಿಧ ಆಟಗಲ ತರಬೇತಿದಾರರು ಇರುವುದರ ಮೂಲಕ ಮಕ್ಕಳು ವಿವಿಧ ರೀತಿಯ ಆಟಗಳನ್ನು ಕಲಿಯುತ್ತಿದ್ದಾರೆ, ಇದೆ ರೀತಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಹಾ ಕ್ರೀಡಾಂಗಣಕ್ಕೆ ಜಾಗವನ್ನು ಕಾಯ್ದಿರಿಸಲಾಗಿದೆ ಇದು ಉತ್ತಮವಾದ ಬೆಳವಣಿಗೆಯಾಗಿದೆ, ನಾನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷನಾದ ಮೇಲೆ ರಾಜ್ಯ ಪ್ರವಾಸವನ್ನು ಮಾಡುವುದರ ಮೂಲಕ ಎಲ್ಲಾ ಕ್ರೀಡಾಂಗಣ ಸ್ಥಿತಿ-ಗತಿಗಳನ್ನು ಪರೀಶಿಲಿಸಲಾಗುತ್ತದೆ, ಕ್ರೀಡಾಪಟುಗಳಿಗೆ ಏನಾದರೂ ತೊಂದರೆ, ತರಬೇತಿದಾರರ ಕೊರತೆ ಎನಾದರೂ ಕಂಡು ಬಂದರೆ ಅತಿಥಿ ತರಬೇತಿದಾರರಾಗಿ ನೇಮಿಸಿ ಮಕ್ಕಳಿಗೆ ತರಬೇತಿಯನ್ನು ಕೂಡಿಸಲಾಗುವುದು ಎಂದು ಅರುಣ್ ಮಾಚಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಅಂತರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಎನ್.ಡಿ.ಕುಮಾರ್ ಮಾತನಾಡಿ ಒಬ್ಬ ಸಾಮಾನ್ಯ ಕ್ರೀಡಾಪಟು ಉನ್ನತ ಸ್ಥಾನವನ್ನು ಪಡೆಯಲು ಉತ್ತಮವಾದ ಕ್ರೀಡಾಂಗಣ, ಕ್ರೀಡಾ ಪರಿಕರಗಳು, ಎಷ್ಟು ಮುಖ್ಯವೊ ಅದಕ್ಕಿಂತ ಹೆಚ್ಚಾಗಿ ತರಬೇತುದಾರರ ಅಗತ್ಯ ಇದೆ. ಉತ್ತಮ ತರಬೇತುದಾರರು ಇದ್ದಲ್ಲಿ ಅಷ್ಟೇ ಅತ್ಯುತ್ತಮವಾದ ಕ್ರೀಡಾಪಟುಗಳು ಹೂರ ಬರಲು ಸಾಧ್ಯವಿದೆ, ಇದಕ್ಕೆ ಪೂರಕವಾದ ಫಲಿತಾಂಶವೂ ಬರಲು ಸಾಧ್ಯವಿದೆ. ಇದಕ್ಕೆ ನಾನೇ ಉದಾಹರಣೆಯಾಗಿದ್ದೇನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕವನ್ನು ಗೆಲ್ಲಲು ನನಗೆ ಅಂತರಾಷ್ಟ್ರೀಯ ಕೋಚಾದ ರಮೇಶ್ ಕುಮಾರ್ ಮಲೋತ್ರ ಇಲ್ಲಿಗೆ ಬಂದಿದ್ದರಿಂದ ನನಗೆ ಸಹಾಯವಾಯಿತು, ಇದ್ದಲ್ಲದೆಇವರ ಅಡಿಯಲ್ಲಿ ಹತ್ತಾರು ಕ್ರೀಡಾಪಟುಗಳು ನಿರ್ಮಾಣವಾದರು ಎಂದರು.
ಈ ಸಮಯದಲ್ಲಿ ಯುವ ಜನ ಕ್ರೀಡೆ ಸಬಲೀಕರಣ ಇಲಾಖೆಯ ನಿರ್ದೇಶಕಿ ಸುಚೇತ ನೆಲವಾಗಿ, ವಾಲಿಬಾಲ್ ತರಬೇತುದಾರರಾದ ಮಹಿಬುಲ್ಲಾ, ವಾಲಿಬಾಲ್ ಸಂಘದ ಪ್ರಧಾನ ಕಾರ್ಯದರ್ಶಿ ನಿಶ್ಚಿತ, ಪುಟ್ಬಾಲ್ ಕ್ಲಬ್‍ನ ಗುರು ವಿನಯ್, ಬ್ಯಾಡ್ಮಿಂಟನ್ ತರಬೇತುದಾರರಾದ ಗುರುರಾಜ್ ಅಥ್ಲೆಟಿಕ್ಸ್ ಕ್ಲಬ್‍ನ ಕಲ್ಲೇಶ್, ಜಯ್ಯಣ್ಣ, ಗುರುಮೂರ್ತಿ, ಅಕ್ರಮ್,ರಘು ಸೇರಿದಂತೆ ಇತರೆ ಕ್ಲಬ್‍ಗಳ ಅಧ್ಯಕ್ಷರರು ಪದಾಧಿಕಾರಿಗಳು ಉಪಸ್ಥಿತರಿದ್ದರು.
Views: 94